ಈ ಘಟನೆ ನಡೆದು ಸುಮಾರು ಏಳೆಂಟು ವರ್ಷಗಳೇ ಕಳೆದಿವೆ. ಅಂದು ನಾನು ಯಾವುದೋ ಪತ್ರಿಕೆ ಓದುತ್ತಿದ್ದೆ, ನಮ್ಮ ದೇಹದಲ್ಲಿರುವ ಮೂಳೆಗಳ ಕುರಿತಾದ ಲೇಖನವಾಗಿತ್ತದು. ಓದುತ್ತಾ ಹಲವು ಹೊಸ ವಿಷಯಗಳನ್ನು ತಿಳಿದುಕೊಂಡೆ. ಅಲ್ಲೇ ಪಕ್ಕದಲ್ಲಿ ಕುಳಿತಿದ್ದ ಹದಿಹರೆಯದ ಮಗನೊಡನೆ ಆ ಲೇಖನವನ್ನು ಓದಲು ಹೇಳಿದ್ದೆ.ಅವನು ಅದರ ಮೇಲೆ ಕಣ್ಣಾಡಿಸಿದಂತೆ ಮಾಡಿ ಎದ್ದು ಹೋಗಿದ್ದ. (ಮನದಲ್ಲೆದ್ದ ತೀವ್ರ ಅಸಮಾಧಾನವನ್ನು ತೋರ್ಪಡಿಸಿಕೊಳ್ಳದೆ ಒಳಗೊಳಗೇ ಬಡಬಡಿಸಿಕೊಂಡಿದ್ದೆ,'.... ಇಂದಿನ ಮಕ್ಕಳಿಗೆ ಓದುವ ಹವ್ಯಾಸವೇ ಇಲ್ಲ....,ಜ್ಞಾನ ದಾಹ ಮೊದಲೇ ಇಲ್ಲ.... ಇಡೀ ದಿನ ಆ ಕಂಪ್ಯೂಟರ್ ಮುಂದೆ ಕುಳಿತುಬಿಟ್ಟರೆ ಮುಗಿಯಿತು....ಸ್ವರ್ಗವೇ ಪ್ರಾಪ್ತಿ..ಎನ್ನುವ ಮೆಂಟಾಲಿಟಿಯ ಈ ಜನರೇಶನ್ ಏನನ್ನು ಸಾಧಿಸಲು ಹೊರಟಿದೆ....'?) ಆದರೂ ಛಲ ಬಿಡದ ವಿಕ್ರಮನಂತೆ ಮಗನನ್ನು ಹುಡುಕುತ್ತಾ ಕಂಪ್ಯೂಟರ್ ರೂಮನ್ನು ಹೊಕ್ಕೆ.ನಾನು ಏನು ಹೇಳಬೇಕೆಂದಿದ್ದೇನೋ ಅದಕ್ಕೂ ಮೊದಲು ಅವನೇ ಮೂಳೆಗಳ ಪೂರ್ತಿ ವಿವರಗಳನ್ನು ಒಪ್ಪಿಸಿದ್ದ! ನನ್ನಲ್ಲಿದ್ದ ಮಾಹಿತಿಗಿಂತಲೂ ಹೆಚ್ಚಿನ ತಿಳುವಳಿಕೆ ಅವನಲ್ಲಿತ್ತು.ನನ್ನ ಮುಖದಲ್ಲೆದ್ದ ಆಶ್ಚರ್ಯಭರಿತ ಪ್ರಶ್ನಾರ್ಥಕ ಚಿಹ್ನೆಗೆ ಉತ್ತರವಾಗಿ ಅವನು ಗೂಗ್ಲ್ ಎಂಜಿನನ್ನು ತೋರಿಸಿದ್ದ. ಅದುವರೆಗೂ ಕಂಪ್ಯೂಟರ್ ಬಗ್ಗೆ ನನಗಿದ್ದ ತಾತ್ಸಾರ ಹೇಳಹೆಸರಿಲ್ಲದಂತೆ ಮಾಯವಾಗಿತ್ತು. ಇಂದಿನ ಮಕ್ಕಳನ್ನು ನಾವೆಷ್ಟು ಬೇಗ ಕೀಳಂದಾಜು ಮಾಡಿಬಿಡುತ್ತೇವಲ್ಲಾ ಎನಿಸಿತ್ತು.ಆ ಕ್ಷಣದಲ್ಲೇ ನನ್ನ ಮಗನನ್ನು ಕಂಪ್ಯೂಟರ್ ಗುರುವಾಗಿ ಸ್ವೀಕರಿಸಿದ್ದೆ.ಇಂತಹ ಘಟನೆಗಳು ನಿಮ್ಮ ಜೀವನದಲ್ಲೂ ಬೇಕಾದಷ್ಟು ನಡೆದಿರಬಹುದಲ್ಲವೇ?ಕೆಲವು ವಿಷಯಗಳು ನಮಗೆ ಪಾಠವಾಗಬೇಕು ಅಥವಾ ಕೆಲವು ಪಾಠಗಳು ನಮ್ಮ ಜೀವನವಾಗಬೇಕು.ಏನಂತೀರಿ...? ಅಂದಿನ ಆ ಘಟನೆ ಇಂದು ನೀವು ಓದಲಿರುವ ಈ ಕಥೆಗೆ ಸ್ಫೂರ್ತಿಯಾಯಿತು. ಓದಿ ನೋಡಿ.ನಿಮ್ಮ ಅನಿಸಿಕೆಗಳನ್ನು ನನಗೂ ತಿಳಿಸುವಿರಲ್ಲವೇ?
ಅಂಚೆಯ ಅಣ್ಣ ಮೆಡಿಕಲ್ ಜರ್ನಲ್ (ವೈದ್ಯಕೀಯ ನಿಯತಕಾಲಿಕೆ) ಒಂದನ್ನು ಭಾಸ್ಕರರಾಯರ ಕೈಗೆ ಕೊಟ್ಟು ಹೋದ. ಯಾವುದೇ ಪುಸ್ತಕ ಅಥವಾ ಪತ್ರಿಕೆಗಳು ಮನೆಗೆ ಬಂದಾಗ ಅವುಗಳ ಮೊದಲ ಓದುಗರು ಅವರೇ. ರಾಯರು ಪುಸ್ತಕಗಳನ್ನು ಹಿಡಿಯುವ ರೀತಿಯೇ ಚಂದ. ಯಾವಾಗಲೂ ಪುಸ್ತಕ ಕೈಗೆತ್ತಿಕೊಳ್ಳುವ ಮುನ್ನ ಹೆಗಲಲ್ಲಿರುವ ಟವೆಲಲ್ಲಿ ಕೈಗಳನ್ನು ಒರೆಸಿಕೊಳ್ಳುವರು.ನಂತರ ಹೆತ್ತ ತಾಯಿ ಪುಟ್ಟ ಮಗುವನ್ನೆತ್ತಿಕೊಳ್ಳುವಷ್ಟೇ ಕಾಳಜಿಯಿಂದ ಅದನ್ನು ಕೈಗೆತ್ತಿಕೊಳ್ಳುವರು. ವಾರ ಪತ್ರಿಕೆಯಂತಹ ಗಾತ್ರದಲ್ಲಿ ದೊಡ್ಡದಿರುವ ಪುಸ್ತಕಗಳನ್ನು ಅವರೆಂದೂ ಒಂದೇ ಕೈಯ್ಯಲ್ಲಿ ಹಿಡಿದು ಓದಿದವರೇ ಅಲ್ಲ. ಪುಸ್ತಕದ ಒಂದು ಬದಿಯನ್ನು ಇನ್ನೊಂದು ಬದಿಯ ಬೆನ್ನಿಗೆ ಒತ್ತರಿಸಿ ಹಿಡಿದು ಓದುವವರನ್ನು ನೋಡಿದರೇ ಅವರಿಗೆ ಅಲರ್ಜಿ. ಇನ್ನು ಓದುತ್ತಾ ಪುಟ ತಿರುಗಿಸುವಾಗ ಕೈಯ್ಯನ್ನು ನಾಲಿಗೆಗೆ ಉಜ್ಜಿ ಪುಟಕ್ಕೆ ಹಚ್ಚುವುದಂತೂ ಅವರ ದೃಷ್ಟಿಯಲ್ಲಿ ಅಕ್ಷಮ್ಯ ಅಪರಾಧ. ಓದನ್ನು ಅರ್ಧಕ್ಕೇ ನಿಲ್ಲಿಸಬೇಕಾಗಿ ಬಂದರೆ ಅವರು ಆ ಪುಟಗಳೆಡೆಯಲ್ಲಿ ಬುಕ್ ಮಾರ್ಕುಗಳನ್ನೇ ಇಡುತ್ತಾರಲ್ಲದೆ ಪುಟದ ತುದಿಯನ್ನು ನಾಯಿಯ ಕಿವಿಯಂತೆ ಒಳಬದಿಗೆ ಮದಚಿಡಲಾರರು. ಓದುವಾಗ ಯಾವುದೇ ವಿಷಯ ಎಷ್ಟೇ ಇಷ್ಟವಾದರೂ ಅಡಿಗೆರೆ ಎಳೆಯುವುದಾಗಲೀ ಆವರಣ ಹಾಕುವುದಾಗಲೀ ಮಾಡುತ್ತಿರಲಿಲ್ಲ. ಅದಕ್ಕೆಂದು ಬೇರೆಯದೇ ನೋಟು ಪುಸ್ತಕವೊಂದನ್ನು ಇಟ್ಟುಕೊಳ್ಳುತ್ತಿದ್ದರು. ಎಲ್ಲರ ಓದು ಮುಗಿದ ನಂತರ ಪತ್ರಿಕೆಗಳನ್ನು ಜೋಪಾನವಾಗಿ ಎತ್ತಿಡುವ ಕೆಲಸವೂ ಅವರದೆ. ಅವರ ಬಳಿ ಉತ್ತಮವಾದ ಪುಸ್ತಕ ಭಂಡಾರವೇ ಇದೆ. ಅವರ ಮೊಮ್ಮಗ ಅವರನ್ನು ಛೇಡಿಸುವುದಿತ್ತು,
'ಕತ್ತೆಗೇನು ಗೊತ್ತು ಕತ್ತುರಿಯ ಪರಿಮಳ ...'ಎಂಬಂತೆ ನಿರ್ಲಕ್ಷ್ಯದಿಂದ ಮೊಮ್ಮಗನೆಡೆಗೆ ನೋಡಿ ಭಾಸ್ಕರರಾಯರು ಸುಮ್ಮನಾಗುತ್ತಿದ್ದರು. ಅವರು ಬಾಲಮಂಗಳದಿಂದ ಹಿಡಿದು ವಿಶ್ವಕೋಶದವರೆಗಿನ ಎಲ್ಲಾ ಪುಸ್ತಕಗಳನ್ನು ಒಂದೇ ಪ್ರೀತಿಯಿಂದ ಓದುತ್ತಾರೆ. ಕಾಲೇಜಿನ ಪ್ರೊಫೆಸರ್ ವೃತ್ತಿಯಿಂದ ನಿವೃತ್ತರಾದಮೇಲೆ ಪುಸ್ತಕಗಳ ಬಗೆಗಿನ ಅವರ ಕಾಳಜಿ ಇನ್ನಷ್ಟು ಹೆಚ್ಚಾಗಿತ್ತು. ಪತ್ರಿಕೆಗಳನ್ನು ಓದಿಯಾದ ಮೇಲೆ ಅಲಕ್ಷ್ಯದಿಂದ ಟೀಪಾಯ್ ಮೇಲೆ ಬಿಸಾಡಿ ಹೋಗುತ್ತಿದ್ದ ಮನೆಮಂದಿಯನ್ನು ತಾರಾಟೆಗೆ ತೆಗೆದುಕೊಳ್ಳುವುದೇ ಅವರ ಸದ್ಯದ ಪ್ರಮುಖ ದಿನಚರಿ. ರಾಯರ ಪತ್ನಿಗಂತೂ ಯಾಕಾದರೂ ಗಂಡನಿಗೆ ನಿವೃತ್ತಿಯಾಯಿತೋ ಎನಿಸಿಬಿಡುತ್ತಿತ್ತು. ಆಕೆ ದಿನಪತ್ರಿಕೆಯನ್ನು ಹಿಡಿದು ಓದಲು ಕುಳಿತರೆ ಕೂಡಲೇ ಪತಿರಾಯರು ಅಲ್ಲಿಗೆ ಹಾಜರಾಗುತ್ತಾರೆ. ಪತ್ನಿ ಪತ್ರಿಕೆಯನ್ನು ಹಿಡಿಯುವ ರೀತಿ, ಪುಟ ತಿರುಗಿಸುವ ಶೈಲಿ,ಕೊನೆಗೆ ಅದನ್ನು ಸ್ವಸ್ಥಾನದಲ್ಲಿರಿಸಲು ತೋರಿಸುವ ನಿರಾಸಕ್ತಿ ಇವೆಲ್ಲವೂ ಅವರ ಟೀಕೆಗೆ ಗುರಿಯಾಗುತ್ತಿದ್ದುವು. ಗಂಡನ ಕೊರೆತವನ್ನು ಸಹಿಸುವಷ್ಟೂ ಸಹಿಸಿ ಕೊನೆಗೆ ಅವರನ್ನು ದುರುಗುಟ್ಟಿ ನೋಡಿ ಪತ್ರಿಕೆಯನ್ನು ಅವರ ಮಡಿಲಿಗೆ ಬೀಳುವಂತೆ ರೊಂಯ್ಯನೆ ಬಿಸಾಡಿ ಎದ್ದು ಹೋಗುತ್ತಿದ್ದರು.ಪತಿಯೊಡನೆ ವಾದ ಮಾಡುವುದು ವ್ಯರ್ಥವೆಂಬುದು ಅವರಿಗೆಂದೋ ಮನದಟ್ಟಾಗಿ ಹೋಗಿತ್ತು. ರಾಯರ ಮಗ ಸೊಸೆ ಇಬ್ಬರೂ ಡಾಕ್ಟರರು. ಅವರಿಗೆ ಬಿಡುವಾಗುತ್ತಿದ್ದುದೇ ರಾತ್ರಿ ಹತ್ತರ ಮೇಲೆ. ಆದುದರಿಂದ ಅವರು ಯಾವಾಗ ಏನು ಓದುತ್ತಾರೆ ಎಂಬುದೇ ಅವರಿಗೆ ತಿಳಿಯುತ್ತಿರಲಿಲ್ಲ. ಮೊಮ್ಮಗ ವಿಕ್ಕಿ ಮಾತ್ರ ಅಜ್ಜನ ಕೊರೆತವನ್ನು ಕ್ಯಾರೇ ಎನ್ನುತ್ತಿರಲಿಲ್ಲ.ಅಜ್ಜನನ್ನು ರೇಗಿಸುವುದೆಂದರೆ ಆತನಿಗೆ
ಇನ್ನಿಲ್ಲದ ಉತ್ಸಾಹ. ಅಜ್ಜನಿಗೂ ಮೊಮ್ಮಗನನ್ನು ಬೈಯ್ಯುವುದೆಂದರೆ ನಾಲ್ಕು ಬಾಯಿ. ಆದರೂ ಇಬ್ಬರಿಗೂ ಒಬ್ಬರನ್ನು ಬಿಟ್ಟು ಇನ್ನೊಬ್ಬರಿಗೆ ಇರಲಾಗುತ್ತಿರಲಿಲ್ಲ. ವೈದ್ಯಕೀಯ ಕಾಲೇಜಿಗೆ ಆಗಷ್ಟೇ ಪಾದಾರ್ಪಣೆ ಮಾಡಿದ ಮೊಮ್ಮಗ ಹಾಸ್ಟೆಲ್ ವಾಸ ಪ್ರಾರಂಭಿಸಿದಾಗ ರಾಯರು ನಾಲ್ಕಾರು ದಿನಗಳ ಕಾಲ ಮಂಕಾಗಿದ್ದರು.ವಿಕ್ಕಿ ದಿನಾಲೂ ರಾತ್ರಿ ಒಂಧರ್ಧ ಘಂಟೆ ಹೊತ್ತಾದರೂ ಅಜ್ಜನೊಡನೆ ಮಾತನಾಡದೆ ಇರುತ್ತಿರಲಿಲ್ಲ. ವೈದ್ಯಕೀಯ ಪುಸ್ತಕಗಳನ್ನು ಜೀವಮಾನವಿಡೀ ಹೇಗೆ ಸಂರಕ್ಷಿಸಿ ಇಡಬೇಕೆಂಬುದರ ಬಗ್ಗೆ ಫೋನಿನಲ್ಲೇ ಅಜ್ಜ ಕ್ಲಾಸು ತಗೆದುಬಿಡುತ್ತಿದ್ದರು. ಬಯೋಕೆಮಿಸ್ಟ್ರೀ ಪುಸ್ತಕದ ಬೈಂಡ್ ಹರಿದುಹೋಯಿತೆಂದೋ ರೆಕಾರ್ಡ್ ಬುಕ್ ಕಾಣೆಯಾಯಿತೆಂದೋ ಹೇಳಿ ಅಜ್ಜನನ್ನು ರೇಗಿಸದಿದ್ದರೆ ಮೊಮ್ಮಗನಿಗೂ ಕಣ್ಣಿಗೆ ನಿದ್ದೆ ಹತ್ತುತ್ತಿರಲಿಲ್ಲ.
ಇಂತಿಪ್ಪ ಭಾಸ್ಕರರಾಯರು ಮೆಡಿಕಲ್ ಜರ್ನಲನ್ನು ಓದಲು ತೊಡಗಿದರು ಅವರು ಓದುವ ರೀತಿಯೂ ವಿಶಿಷ್ಟವಾದುದು.ಪತ್ರಿಕೆಯಾದರೆ ಕೊನೆಯ ಪುಟದಿಂದ ಮೊದಲ್ಗೊಂಡು ಮುಖಪುಟದವರೆಗೆ ಪುಟಗಳನ್ನು ತಿರುಗಿಸುತ್ತಾ ಕಣ್ಣು ಹಾಯಿಸುತ್ತಾ ಹೋಗುವುದು ಮೊದಲ ಹೆಜ್ಜೆ. ಅಕಸ್ಮಾತ್ ಪುಟಗಳು ಒಂದಕ್ಕೊಂದು ಅಂಟಿಕೊಂಡಿದ್ದರೆ ಬಾಗಿ ಬಾಯಲ್ಲಿ ಊದಿ ನೋಡುತ್ತಾರೆ. ಆಗಲೂ ಪುಟಗಳು ಬೇರ್ಪಡದಿದ್ದರೆ ಬುಕ್ ಮಾರ್ಕಿನ ಮೊನಚಾದ ಭಾಗದಿಂದ ಅದನ್ನು ನಾಜೂಕಾಗಿ ಬಿಡಿಸುತ್ತಾರೆ. ಇದು ಎರಡನೇ ಹೆಜ್ಜೆ. ನಂತರ ಅವರ ದೃಷ್ಟಿ ಚಲಿಸುವುದು ಮುಖಪುಟ ಲೀಖನದತ್ತ, ಅದಾದ ಮೇಲೆ ಉಳಿದೆಲ್ಲಾ ಲೇಖನಗಳು.... ವೈದ್ಯಕೀಯ ಲೇಖನಗಳನ್ನು ಓದುವಾಗಲೆಲ್ಲಾ ಮೆಡಿಕಲ್ ಡಿಕ್ಷನರಿಯೊಂದು ಅವರ ಪಕ್ಕದಲ್ಲೇ ಇರುತ್ತದೆ. ಹೀಗೆ ಓದುತ್ತಾ ಓದುತ್ತಾ ಅವರ ದೃಷ್ಟಿ ಒಂದು ಪುಟದಲ್ಲಿ ಕೀಲಿಸಿದಂತೆ ನಿಂತುಬಿಟ್ಟಿತು. Cleidocranial Dysplasia :A Case Report (ಕ್ಲಿಡೋಕ್ರೆನಿಯಲ್ ಡಿಸ್ಪ್ಲಾಸಿಯ :ಒಂದು ಖಾಯಿಲೆಯ ವರದಿ) ಎಂಬ ತಲೆ ಬರಹವಿರುವ ಲೇಖನವಾಗಿತ್ತದು. ರಾಯರು ಹಲವು ವೈದ್ಯಕೀಯ ಲೇಖನಗಳನ್ನು ಓದಿ ಕೆಲವೆಲ್ಲ ಕಾಯಿಲೆಗಳ ಬಗ್ಗೆ ತಿಳಿದುಕೊಂಡಿದ್ದರು.ಮಗ ಸೊಸೆಯರೊಂದಿಗೆ ಅವುಗಳ ಬಗ್ಗೆ ಚರ್ಚಿಸಿ ಇನ್ನಷ್ಟು ತಿಳಿದುಕೊಳ್ಳುತ್ತಿದ್ದರು. ಆದರೆ ಈ ಒಂದು ಖಾಯಿಲೆಯ ಹೆಸರನ್ನು ಅವರು ಇದುವರೆಗೂ ಕೇಳಿರಲೇ ಇಲ್ಲ. ಲೇಖನದೊಂದಿಗೆ ಕೊಟ್ಟ ಚಿತ್ರಗಳು ಅತ್ಯುನ್ನತ ಗುಣಮಟ್ಟದ ಕ್ಯಾಮರಾದಿಂದ ತೆಗೆದವುಗಳಾದುದರಿಂದ ಅತ್ಯಂತ ಸ್ಫುಟವಾಗಿ ಮೂಡಿ ಬಂದಿದ್ದುವು. ರಾಯರು ಬಹಳ ಆಸಕ್ತಿಯಿಂದ ಓದುತ್ತಾಹೋದರು. ಅದರ ಲಕ್ಷಣಗಳೇ ವಿಚಿತ್ರವಾಗಿದ್ದುವು, ಈ ಕಾಯಿಲೆ ಹತ್ತು ಲಕ್ಷಕ್ಕೊಬ್ಬರಿಗೆ ಬರುವ ಸಾಧ್ಯತೆ, ವಂಶವಾಹಿಯ ಮೂಲಕ ಬರುವ ಈ ರೋಗ ಎಲುಬುಗಳ ಅಸಮರ್ಪಕ ಬೆಳವಣಿಗೆಗೆ ಕಾರಣವಾಗುತ್ತದೆ...... ಇತ್ಯಾದಿ.... ಲೇಖನವನ್ನು ಓದಿ ಮುಗಿಸುತ್ತಿದ್ದಂತೆ ತಾವು ಓದಿದುದನ್ನು ಆ ಕ್ಷಣದಲ್ಲೇ ಮೊಮ್ಮಗನೊಡನೆ ಹಂಚಿಕೊಳ್ಳಬೇಕೆನಿಸಿತು. ಆದರೆ ಆತ ಮನೆಗೆ ಬರಲು ಇನ್ನೂ ಕೆಲವು ಘಂಟೆಗಳ ಕಾಲ ಕಾಯಬೇಕಿತ್ತು. ಆ ದಿನ ಶನಿವಾರ. ವಿಕ್ಕಿ ಮನೆಗೆ ಬರುವ ದಿನ. ಆತ ಶನಿವಾರ ಸಂಜೆ ಮನೆಗೆ ಬಂದರೆ ಸೋಮವಾರ ಮುಂಜಾನೆ ಕಾಲೇಜಿಗೆ ವಾಪಸಾಗುತ್ತಾನೆ. ವೈದ್ಯಕೀಯ ಶಿಕ್ಷಣಕ್ಕೆ ಮೆರಿಟ್ ಮೂಲಕವೇ ಪ್ರವೇಶ ಪಡೆದಿದ್ದ ವಿಕ್ಕಿ ಹುಟ್ಟಿನಿಂದಲೇ ಬುದ್ಧಿವಂತ. ಪುಸ್ತಕದ ಹುಳು ಎನಿಸಿಕೊಳ್ಳದೇ ಅತ್ಯುತ್ತಮ ಅಂಕಗಳನ್ನು ತೆಗೆಯುತ್ತಿದ್ದ. ಅದನ್ನೇ ರಾಯರು 'ಈಸಿ ಗೋಯಿಂಗ್ ' ಎನ್ನುತ್ತಿದ್ದರು.
"ಮೆಡಿಕಲ್ ಪ್ರೊಫೆಶನ್ ಎಂದರೆ ಎಷ್ಟು ಜವಾಬ್ದಾರಿ ಇದೆ ಗೊತ್ತೇನೋ....? ಜನ ತಮ್ಮ ಜೀವವನ್ನ ನಿಮ್ಮಗಳ ಕೈಯ್ಯಲ್ಲಿಟ್ಟುಬಿಡುತ್ತಾರೆ.... ನೆನಪಿಟ್ಟುಕೋ... ನಿನ್ನ ಅಪ್ಪ ಮೆಡಿಕಲ್ ಓದುತ್ತಿರಬೇಕಾದರೆ ಮಧ್ಯರಾತ್ರಿವರೆಗೂ ಲೈಬ್ರೆರಿಯಲ್ಲಿ ಕುಳಿತು ಓದುತ್ತಿದ್ದ. ಎಷ್ಟೋ ಸಲ ನಾನೇ ಟೀ ಮಾಡಿ ಫ್ಲಾಸ್ಕಲ್ಲಿ ಹಾಕಿ ಅವನಿಗೆ ಕೊಟ್ಟಿದ್ದೆ. ನೀನೂ ಇದ್ದೀಯಾ... ಇಡೀ ದಿನ ಆ ಕಂಪ್ಯೂಟರಿನೊಂದಿಗೆ ಗುದ್ದಾಡ್ತಾ ಅದೇನು ಮಾಡ್ತಿಯೋ ಆ ದೇವರೇ ಬಲ್ಲ.... ಏನೋ ನಿನ್ನ ಹಿರಿಯರು ಮಾಡಿದ ಪುಣ್ಯದಿಂದ ಸಿ.ಇ.ಟಿ. ಯಲ್ಲಿ ಗೆದ್ದುಬಿಟ್ಟೆ ...ಹಾಗಂತ ಮೆಡಿಕಲ್ ಡಿಗ್ರಿ ತಗೋಬೇಕೂಂದ್ರೆ ನಾವು ಮಾಡಿದ ಪುಣ್ಯ ಸಾಕಾಗೋದಿಲ್ಲ ತಿಳ್ಕೋ.... ಲೈಬ್ರೆರಿಲಿ ಕುಳಿತು ಚೆನ್ನಾಗಿ ಓದೋದನ್ನ ಅಭ್ಯಾಸ ಮಾಡ್ಕೋ.... ನಿನ್ಕೈಲಿ ಲ್ಯಾಪ್ ಟಾಪ್ ಬಂದಾಗಲೇ ಅಂದ್ಕೊಂಡೆ...., ಈ ಹುಡುಗ ಹಾಳಾಗಿ ಹೋದ ಅಂತ...."ಹೀಗೆ ಮೊಮ್ಮಗ ಮನೆಗೆ ಬಂದಾಗಲೆಲ್ಲಾ ಕ್ಲಾಸ್ ತಗೆದುಕೊಳ್ಳುತ್ತಲೇ ಇದ್ದರು. ಅಜ್ಜನ ಪಕ್ಕದಲ್ಲೇ ಆಸೀನನಾಗಿ ಅವರ ಕೊರೆತವನ್ನು ಕೇಳಿಸಿಕೊಂಡೇ ಪೆನ್ಡ್ರೈವಲ್ಲಿ ಹಾಕಿ ತಂದಿರುತ್ತಿದ್ದ ನೋಟ್ಸ್ಗಳನ್ನು ಲ್ಯಾಪ್ ಟಾಪಿಗೆ ಅಪ್ ಲೋಡ್ ಮಾಡುತ್ತಲೋ ಇಂಟರ್ನೆಟ್ಟಿನಿಂದ ರೆಫರೆನ್ಸ್ ಪುಸ್ತಕಗಳನ್ನು ದೌನ್ ಲೋಡ್ ಮಾಡುತ್ತಲೋ ತಣ್ಣಗೆ ಕುಳಿತಿರುತ್ತಿದ್ದ. ವಿಕ್ಕಿ ಮಾಡುತ್ತಿದ್ದ ತಲೆ ಬಾಲ ಅರ್ಥವಾಗದ 'ಕೆಲಸಕ್ಕೆ ಬಾರದ ತರಲೆ'ಗಳನ್ನು ನೋಡುತ್ತಾ ಇನ್ನಷ್ಟು ರೋಸಿ ಹೋಗಿ ದಬಾಯಿಸುತ್ತಿದ್ದರು,
"ಲೋ...,ಭಡವಾ...,ನಾನು ಹೇಳ್ತಿರೋದು ನಿನ್ನ ತಲೆಯೊಳಕ್ಕೆ ಇಳೀತಿದ್ಯೇನೋ...?" ವಿಕ್ಕಿ ಏನೂ ನಡೆದೇ ಇಲ್ಲವೇನೋ ಎಂಬಂತೆ ಅಜ್ಜನ ಭುಜ ಬಳಸಿ ಹೇಳುತ್ತಿದ್ದ,
"ಅಜ್ಜಾ..., ಇತ್ತೀಚೆಗೆ ನಿಮ್ಮ ಬಿ.ಪಿ. ಚೆಕ್ ಮಾಡಿಲ್ಲಾ ಅನ್ಸುತ್ತೆ. ಬನ್ನಿ ಕ್ಲಿನಿಕ್ಕಿಗೆ ಹೋಗೋಣ.ಹಾಗೇ ವಾಪಾಸಾಗುತ್ತಾ ಪಾಬ್ಬಾಸ್ಗೆ ಹೋಗಿ ನಿಮ್ಮಿಷ್ಟದ ತಿರಾಮಿಸು ತಿಂದು ಬರೋಣ..."ರಾಯರ ಬಲಹೀನತೆ ಎಲ್ಲಿದೆ ಎನ್ನುವುದನ್ನು ಆತ ಚೆನ್ನಾಗಿಯೇ ಅರಿತಿದ್ದ. ಅವರ ಬೈರಿಗೆ ಮಿತಿಮೀರಿದಾಗಲೆಲ್ಲಾ ವಿಕ್ಕಿ ಉಪಯೋಗಿಸುತ್ತಿದ್ದುದು ಇದೇ ಅಸ್ತ್ರವನ್ನು. ರಾಯರೂ ಅದನ್ನು ಬಹಳವಾಗಿ ಇಷ್ಟಪಡುತ್ತಿದ್ದರು.
ಇವತ್ತು ಮೊಮ್ಮಗ ಬರುವಾಗ ಹೇಳಲು ಹೊಸ ವಿಷಯವೊಂದು ಸಿಕ್ಕಿತೆನ್ನುವ ಉತ್ಸಾಹದಲ್ಲಿದ್ದ ರಾಯರಿಗೆ ಹೊತ್ತು ಬಹಳ ನಿಧಾನವಾಗಿ ಸರಿಯುತ್ತಿದೆ ಎನಿಸುತ್ತಿತ್ತು.ವಿಕ್ಕಿ ವೈದ್ಯಕೀಯ ನಿಯತಕಾಲಿಕೆಗಳ ಕಡೆಗೆ ಆಸಕ್ತಿಯಿಂದ ದೃಷ್ಟಿ ಹಾಯಿಸುವುದನ್ನು ಅವರಿದುವರೆಗೂ ನೋಡಿರಲೇ ಇಲ್ಲ. ('... ಹೂಂ...,ಇದನ್ನಂತೂ ವಿಕ್ಕಿ ಓದಲೇಬೇಕು... ಆತನಿಗೆ ಇದರ ಬಗ್ಗೆ ಖಂಡಿತಕ್ಕೂ ತಿಳಿದಿರಲಾರದು.... ತಿಳಿಯುವುದಾದರೂ ಹೇಗೆ..?ನನ್ನ ಹಾಗೆ ಓದುವ ಅಭ್ಯಾಸ ಇದ್ದರೆ ತಾನೆ..? ಈ ಅಭ್ಯಾಸ ಬೆಳೆಸಿಕೊಳ್ಳದೆ ಯಂಗರ್ ಜನರೇಷನ್ ಹಾಳಾಗಿ ಹೋಯ್ತು... ನನ್ನ ಮಾತು ಕೇಳುವ ವ್ಯವಧಾನವಾದರೂ ಯಾರಿಗೆ ಇದೆ..? ಇಂತಹ ವಿರಳ ಕಾಯಿಲೆಗಳ ಬಗ್ಗೆ ತಿಳಿದಷ್ಟೂ ಮೆಡಿಕಲ್ ಸ್ಟೂಡೆಂಟ್ಸ್ಗೆ ಓದಲು ಅನುಕೂಲ ... ಈ ಲೇಖನದ ಕ್ಸೆರಾಕ್ಸ್ ಕಾಪಿಯೊಂದನ್ನು ತೆಗೆದಿಟ್ಟುಕೊಂಡರೆ ಒಳ್ಳೆಯದೇನೋ...? ವಿಕ್ಕಿ ಕಾಲೇಜಿಗೆ ಮರಳುವಾಗ ಅದನ್ನು ಒಯ್ದರೆ ಲೈಬ್ರೆರಿಯಲ್ಲಿ ಅದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದಲ್ಲವೇ..?) ಇಂತಹ ಆಲೋಚನೆ ಬಂದುದೇ ತಡ, ರಾಯರ ಕಾಲುಗಳು ಮೋಹನನ ಕ್ಸೆರಾಕ್ಸ್ ಸೆಂಟರಿನ ಕಡೆಗೆ ಹೊರಟವು.ಮೊಮ್ಮಗನ ಓದಿನ ಬಗ್ಗೆ ತಾವು ವಹಿಸಿದ ಕಾಳಜಿಯ ಬಗ್ಗೆ ಯೋಚಿಸಿ ಹೆಮ್ಮೆಯೆನಿಸಿತು.
"ಹಾಯ್..,ರಾಯರೇ..,ನಾನು ಬಂದೇ ಬಿಟ್ಟೆ..,"ತಮಾಷೆಗಾಗಿ ವಿಕ್ಕಿ ಅಜ್ಜನನ್ನು 'ರಾಯರೇ' ಎಂದೂ ಕೂಗುವುದಿತ್ತು.
ರಾಯರೂ ಅಷ್ಟೇ ಉತ್ಸಾಹದಿಂದ ಅವನನ್ನು ಎದುರ್ಗೊಂಡರು.
"ಲೋ..,ಬಂದ್ಯೇನೋ...,ನಿನ್ನನ್ನೇ ಕಾಯ್ತಿದ್ದೆ ಕಣೋ .."
"ಓಹೋ...,ಯಾಕಂತೆ...?ಈ ಬಡಪಾಯಿ ಮೇಲೆ ರಿಗ್ಗಿಂಗ್ ಮೆಷಿನ್ ಓಡಿಸದೆ ನಿದ್ದೆ ಬಂದಿಲ್ವೇನೋ..?"
ಮೊಮ್ಮಗ ಹೇಳಿದ್ದು ತಮಗೆ ಅಲ್ಲವೇ ಅಲ್ಲ ಎಂಬಂತೆ ಸುಪ್ರಸನ್ನ ಮುಖಭಾವದಿಂದಲೇ ತಮ್ಮ ಜೀಬಿನಿಂದ ಅತ್ಯಮೂಲ್ಯವಾದ ನಿಧಿಯೊಂದನ್ನು ತೆಗೆಯುವಂತೆ ಆ ಕ್ಸೆರಾಕ್ಸ್ ಕಾಪಿಯನ್ನು ತೆಗೆದರು.ತಮಗೆ ಅಂಟಿಕೊಂಡಂತೆ ಕುಳಿತ ವಿಕ್ಕಿಯ ತೊಡೆಯ ಮೇಲೆ ಅದನ್ನಿಟ್ಟರು. ಆ ಭೂಪನಾದರೋ ಅದರ ಮೇಲೆ ಕಣ್ಣಾಡಿಸಿದಂತೆ ಮಾಡಿ ಆ ಕಾಗದದ ತುಂಡನ್ನು ಪುನಹ ಅಜ್ಜನ ಜೇಬಿನೊಳಕ್ಕೇ ತುರುಕಿಸಿಬಿಟ್ಟ. ರೊಂಯ್ಯನೆ ಹಾರುತ್ತಿದ್ದ ಗಾಳಿಪಟದ ಮಧ್ಯಕ್ಕೇ ತೂತು ಕೊರೆದಂತಾಗಿತ್ತು ರಾಯರ ಸ್ಥಿತಿ.ಹತಾಷ ಮಗು ರಚ್ಚೆ ಹಿಡಿದು ಅಮ್ಮನನ್ನು ಮತ್ತೆ ಮತ್ತೆ ಕಾಡುವಂತೆ ಈ ನಮ್ಮ ರಾಯರೂ ಸುಲಭದಲ್ಲಿ ಸೂಲೋಪ್ಪಿಕೊಳ್ಳಲು ತಯಾರಿರಲಿಲ್ಲ,
"ಲೋ..,ನೀನು ಯಾವ ಪುರುಷಾರ್ಥಕ್ಕೆ ಮೆಡಿಕಲ್ ಓದ್ತಿದ್ದೀಯಾ...? ನಾನು...,ವೈದ್ಯಕೀಯದ ಎ.ಬಿ.ಸಿ.ಡಿ. ಗೊತ್ತಿಲ್ದೋನು....,ಆದರೂ ನಿನ್ಗಾಗಿ ಇಷ್ಟು ಆಸಕ್ತಿವಹಿಸಿ ಆ ಲೇಖನವನ್ನ ಕಾಪಿ ಮಾಡಿ ತಂದಿದೀನಿ ಅನ್ನೋ ಗೌರವಾನಾದ್ರೂ ಬೇಡ್ವಾ...? ಛೆ..., ತನಗಂತೂ ಗೊತ್ತಿಲ್ಲ... , ಹಿರಿಯರು ಹೇಳಿದಾಗಲಾದರೂ ತಿಳಿದುಕೊಳ್ಳಬೇಕು ಎಂಬ ಬುದ್ಧಿಯಾದರೂ ಇರಬೇಕಲ್ಲ...?" ರಾಯರ ಅಸಹನೆ ಏರುತ್ತಲೇ ಹೋಯ್ತು.
"ಅಜ್ಜಾ.., ಹೋಲ್ಡ್ ಆನ್ ಪ್ಲೀಸ್...",ವಿಕ್ಕಿಯ ಬೆರಳುಗಳು ಆಗಲೇ ಲ್ಯಾಪ್ ಟಾಪ್ ಮೇಲೆ ನರ್ತಿಸತೊಡಗಿದ್ದುವು.ಆತ ಹೇಳುತ್ತಾ ಹೋದ ,"Cleidocranial Dysplasia: ಇದು 6p21ಕ್ರೋಮೋಸೋಮಿನ ಅಥವಾ ವರ್ಣತಂತುಗಳಲ್ಲಿರುವ CBFA1 ಅಥವಾ RUNX2 ಜೀನಿನ ಅಂದರೆ ಈ ವಂಶವಾಹಿಯಲ್ಲಿರುವ ಕೆಲವು ತೊಂದರೆಗಳಿಂದಾಗಿ ಜನನದೊಂದಿಗೇ ಕಾಣಿಸಿಕೊಳ್ಳುವ ಈ ಕಾಯಿಲೆ ಹತ್ತು ಲಕ್ಷದಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.ಈ ಕಾಯಿಲೆಯ ಪ್ರಮುಖ ಲಕ್ಷಣಗಳು....,ಎಲುಬುಗಳ ಅಸಹಜ ಹಾಗೂ ಅಸಮರ್ಪಕ ಬೆಳವಣಿಗೆ ,ಭುಜ ಮತ್ತು ಕುತ್ತಿಗೆಯನ್ನು ಜೋಡಿಸುವ ಎಲುಬುಗಳ ಬೆಳವಣಿಗೆಯ ನ್ಯೂನತೆ,ಸಾಮಾನ್ಯ ಗಾತ್ರಕ್ಕಿಂತ ಚಿಕ್ಕದಾದ ತಲೆ,ನೆತ್ತಿಯ ಎಲುಬು ಜೋಡದೆ ಇರುವುದು....,"ಮೊಮ್ಮಗನ ವಾಗ್ಝರಿಯನ್ನು ಕಣ್ಣೆವೆ ಪಿಳುಕಿಸದೆ ಕಿವಿ ನಿಮಿರಿಸಿ ಕೇಳುತ್ತಿದ್ದ ರಾಯರು ಆಶ್ಚರ್ಯ ತಡೆಯಲಾರದೆ ಆತನ ಮಾತುಗಳನ್ನು ಅರ್ಧಕ್ಕೇ ತುಂಡರಿಸಿ ಪ್ರಶ್ನಿಸಿದರು,
"ಅಲ್ಲಾ..., ನಿನ್ನ ಕ್ಲಾಸುಗಳು ಪ್ರಾರಂಭವಾಗಿ ಇನ್ನೂ ಎರಡು ತಿಂಗಳು ಪೂರ್ತಿಯಾಗಿಲ್ಲಾ....ಆಗಲೇ ನಿನಗೆ ಇದೆಲ್ಲಾ ಹೇಗೆ ತಿಳಿಯಿತು...?"
ಹ್ಹ....ಹ್ಹ...ಹ್ಹಾ... ಹ್ಹಿ.....ಹ್ಹಿ....ಹ್ಹೀ...ಹ್ಹೋ... ಹ್ಹೋ....ಹ್ಹೋ... ಬೇಕೆಂದೇ ಕೆಟ್ಟದಾಗಿ ನಗುತ್ತಾ ತುಂಟ ವಿಕ್ಕಿ ಅಜ್ಜನ ಭುಜ ಬಳಸಿ ಹಿಡಿದು ಕೇಳಿದ...,
"ಈಗಲಾದರೂ ಗೊತ್ತಾಯ್ತಾ ಈ ಲ್ಯಾಪ್ ಟಾಪಿನ ಮಹಿಮೆ...?ಅದರೊಳಗೆ ನಿಮಗೆ ಗೊತ್ತಿಲ್ಲದ ಮಾಂತ್ರಿಕ ಶಕ್ತಿಯೊಂದಿದೆ... "
"ಮಾಂತ್ರಿಕ ಶಕ್ತಿ...?"ಅಯೋಮಯಕ್ಕೊಳಗಾಗಿದ್ದ ರಾಯರು ತಗ್ಗಿದ ಧ್ವನಿಯಲ್ಲಿ ಕೇಳಿದರು.
"ಹೂಂ ಮತ್ತೆ..., ಮೈ ಡಿಯರ್ ಅಜ್ಜಾ... ಈ ಜೆಟ್ ಯುಗದಲ್ಲಿ ಕಂಪ್ಯೂಟರ್ ಲಿಟರಸಿ ಇಲ್ಲದವರು ವೇಸ್ಟ್ ಬಾಡೀಸ್ ಎನಿಸಿಕೊಳ್ಳೋ ಅಪಾಯ ಇದೆ ಅಂತ ನಿಮ್ಮ ಬಳಿ ನಾನೆಷ್ಟೋ ಬಾರಿ ಹೇಳಿದ್ದೆ ನೆನಪಿದ್ಯಾ...? ಇಂಟರ್ನೆಟ್ ಬಗ್ಗೆ ನಿಮ್ಗೆ ನಾನು ಹೇಳಿಕೊಡ್ತೀನಿ ಅಂತ ಎಷ್ಟು ಸಲ ಬಡ್ಕೊಂಡೆ...ಕೇಳಿದ್ರಾ...? 'ಅದೆಲ್ಲಾ ಕೆಲಸಕ್ಕೆ ಬಾರದ ತಲೆಹರಟೆ' ಎಂದಿರಲ್ಲಾ..? ಈಗಲಾದ್ರೂ ನಾನು ಹೇಳೋದನ್ನ ಗಮನವಿಟ್ಟು ಕೇಳಿ...,ಕಂಪ್ಯೂಟರಿನ ಮುಖ್ಯ ಉಪಯೋಗ ಇಂಟರ್ನೆಟ್, ಅದರಲ್ಲಿ ಗೂಗುಲ್ ಎಂಜಿನ್ ಅನ್ನೋ ವೆಬ್ಸೈಟ್ ಇದೆ, ನಿಮಗೇನು ತಿಳೀಬೇಕೋ ಅದನ್ನ ಗೂಗುಲಲ್ಲಿ ಟೈಪ್ ಮಾಡಿದ್ರಾಯಿತು...ತಕ್ಷಣ ಅದರ ಪೂರ್ತಿ ವಿವರ ಈ ಸ್ಕ್ರೀನಲ್ಲಿ ಬರುತ್ತೆ... ನೋಡಿಲ್ಲಿ..." ಹೇಳುತ್ತಾ ಅದರ ಕಾರ್ಯವೈಖಿರಿಯನ್ನು ತೋರಿಸಿಕೊಟ್ಟ. ಮತ್ತಷ್ಟು ಸ್ಪಷ್ಟ ಪಡಿಸುವ ಉದ್ದೇಶದಿಂದ ವಿವರಿಸುತ್ತಾ ಹೋದ,
"ಇದು ಎರಡು ಅಲುಗಿನ ಕತ್ತಿಯಂತೆ...ನಮ್ಮ ಮೆಂಟಾಲಿಟಿ ಪಾಸಿಟಿವ್ ಆಗಿದ್ದರೆ ಇದನ್ನು ನಮ್ಮ ಅಭಿವೃದ್ಧಿಗೋಸ್ಕರ ಉಪಯೋಗಿಸಿಕೊಳ್ಳಬಹುದು... ಇಲ್ಲಾ... ನಾವು ನೆಗೆಟಿವ್ ಅಪ್ರೋಚ್ ಇದ್ದವರಾಗಿದ್ದರೆ ಗೂಗುಲ್ ಮೂಲಕ ವಿನಾಶವನ್ನೇ ಸೃಷ್ಟಿಸಬಹುದು..."ಅಜ್ಜನೆಡೆಗೆ ನೋಡಿ ಕಣ್ಣು ಹೊಡೆಯುತ್ತಾ ಮುಂದುವರಿಸಿದ,
"ನನ್ನಂತಹ ಉತ್ತಮ ವಿದ್ಯಾರ್ಥಿಗಳಿಗೆ ಇದೊಂದು ವರದಾನವೇ ಸರಿ ...ಲೈಬ್ರೆರಿಗಳಲ್ಲಿ ಘಂಟೆಗಳ ಕಾಲ ಹುಡುಕಿ ತೆಗೆಯುವಂತಹ ವಿಷಯಗಳನ್ನು ಇದರ ಮೂಲಕ ಕೆಲವೇ ಸೆಕುಂಡುಗಳಲ್ಲಿ ಹೆಕ್ಕಿ ತೆಗೆಯಬಹುದು...." ಅಜ್ಜನೆಡೆಗೆ ಮತ್ತಷ್ಟು ಬಾಗಿ ಅವರ ಧ್ವನಿಯನ್ನೇ ಅನುಕರಿಸುತ್ತಾ ಹೇಳಿದ, "ನಿಮ್ಮ ಕಾಲದಲ್ಲಿದ್ದ ಹಾಗೆ ಈಗ ಟೀ ಮಾಡಿ ಫ್ಲಾಸ್ಕಲ್ಲಿ ಹಾಕಿಡಬೇಕಾಗಿಲ್ಲ... ಇನ್ನು ನಿಮ್ಮ ರೂಮೊಳಗಿರುವ ಲೈಬ್ರೆರಿಯಲ್ಲಿ ಯಾವುದೆಲ್ಲಾ ಪುಸ್ತಕಗಳಿವೆಯೋ ಅವುಗಳ ಹೆಸರನ್ನು ಇದರಲ್ಲಿ ಟೈಪ್ ಮಾಡಿ ನೋಡಿ. ಈ ಸ್ಕ್ರೀನಲ್ಲಿ ಅವುಗಳು ಹಾಜರಾಗಿಬಿಡುತ್ತವೆ ಗೊತ್ತಾ..? ಇನ್ನು ನಿಮ್ಮ ಕೈಯ್ಯಲ್ಲಿರೋ ಆ ಮೆಡಿಕಲ್ ಜರ್ನಲನ್ನ ನಾವೆಲ್ರೂ ಈಗಾಗಲೇ ಓದಿಯಾಗಿದೆ ಹೀಗೆ ಗೊತ್ತಾ..? ಅಪ್ಪ ಅದನ್ನ 'ಇ ಸುಬ್ಸ್ಕ್ರಿಪ್ಶನ್' ಮಾಡಿಸಿಕೊಂಡಿದ್ದಾರೆ. ಅಂದರೆ ಮೊದಲು ಮಾಡ್ತಿದ್ದ ಹಾಗೆ ಪೋಸ್ಟಲ್ ಅಡ್ರೆಸ್ಸಿಗೆ ಪತ್ರ ಬರೆದು ಬ್ಯಾಂಕಿನಿಂದ ಡಿ. ಡಿ. ತೆಗೆದು ಪೋಸ್ಟ್ ಮಾಡಿ ಅವರು ಕಳಿಸೋ ಬುಕ್ಕಿಗಾಗಿ ಕಾಯೋ ಬದಲು ಸಂಬಂಧಪಟ್ಟ ವೆಬ್ ತಾಣಕ್ಕೆ ಹೋಗಿ ಅವರ ಇ ಮೇಲ್ ಐ.ಡಿ.ಯನ್ನ ಸಂಪರ್ಕಿಸಿ ನೆಟ್ ಬ್ಯಾಂಕಿಂಗ್ ಮೂಲಕ ದುಡ್ಡು ಪಾವತಿಸಿದರೆ ಮುಗಿಯಿತು. ನೆಟ್ಟಲ್ಲೇ ಆ ಪುಸ್ತಕ ಓದಲು ಸಿಗುತ್ತೆ ತಿಳೀತಾ..?ಅಪ್ಪ ನಿಮಗಾಗಿ ಈ ಹಾರ್ಡ್ ಕಾಪೀನ ಅಂದರೆ ಈ ಪುಸ್ತಕವನ್ನ ಈಗಲೂ ತರಿಸ್ತಿದ್ದಾರೆ ಅಷ್ಟೆ....."
ಗರ ಬಡಿದಂತೆ ಕುಳಿತೇ ಇದ್ದ ರಾಯರು ಸುಧಾರಿಸಿಕೊಳ್ಳಲೋ ಎಂಬಂತೆ ಸೋಫಾದ ಹಿಂಬದಿಗೆ ಒರಗಿ ಕಣ್ಣು ಮುಚ್ಚಿದರು. ತಮ್ಮ ಪುಸ್ತಕದ ಭಂಡಾರ,ಮೋಹನನ ಕ್ಸೆರಾಕ್ಸ್ ಅಂಗಡಿ, ಎಲ್ಲವೂ ನಿಧಾನಕ್ಕೆ ನೆಲದಿಂದ ಮೇಲೆದ್ದು ತೇಲುತ್ತಾ ತೇಲುತ್ತಾ ಭೂಮಿಯ ಅಂಚಿಗೆ ಮುಟ್ಟಿದಂತೆ... ಅವುಗಳು ಪ್ರಪಾತಕ್ಕೆ ಬೀಳದಂತೆ ತಾವು ಬಲವಾಗಿ ತಬ್ಬಿಹಿಡಿದಂತೆ... ಆದರೆ ಜಾರುತ್ತಾ ಜಾರುತ್ತಾ ತಾವೆಲ್ಲರೂ ಕತ್ತಲ ಕೂಪದಲ್ಲಿ ಒಂದಾದಂತೆ... ಧಿಗ್ಗನೆ ಎದ್ದು ಕುಳಿತ ರಾಯರು ಇನ್ನೂ ಅಲ್ಲೇ ಕುಳಿತು ತನ್ನನ್ನೇ ಗಮನಿಸುತ್ತಿದ್ದ ಮೊಮ್ಮಗನನ್ನು ನೋಡಿದರು.ನಾಚಿಕೆ, ತಪ್ಪಿತಸ್ತ ಭಾವನೆಗಳು ಮುನ್ನುಗ್ಗಿ ಬಂದರೂ ಅಷ್ಟು ಕಿರಿಯವನೆದುರು ತಮ್ಮ ಘನತೆ ಮುಕ್ಕಾಗಬಾರದೆಂಬ ಅಹಂ ಒಂದು ಕೈ ಮೇಲಾಗಿಯೇ ಇತ್ತು. ಬಿದ್ದರೂ ಮೀಸೆ ಮಣ್ಣಾಗಲಿಲ್ಲವೆಂಬಂತೆ,
"ಸರಿ ... ಸರಿ...,ನಿನಗೆ ನಿಜವಾಗ್ಲೂ ನನ್ನ ಮೇಲೆ ಪ್ರೀತಿ ಇರುತ್ತಿದ್ರೆ ಯಾವಾಗಲೋ ಇದನ್ನ ನನಗೆ ಹೇಳಿಕೊಟ್ತಿರುತ್ತಿದ್ದಿ... ಇಗಲೂ ತಡವಾಗಲಿಲ್ಲ ಅನ್ನು ... 'ಬೆಟರ್ ಲೇಟ್ ದ್ಯಾನ್ ನೆವರ್ 'ಅಂತ ನಾನು ಪಾಠ ಮಾಡ್ತಿರೋವಾಗ ಸ್ಟೂಡೆಂಟ್ಸ್ ಗೆ ಹೇಳೋದಿತ್ತು. ಇದೂ ಹಾಗೇ ಅಂದ್ಕೋ ..."ಅಜ್ಜನ ಧೋರಣೆಯ ಮಾತುಗಳು, ತನ್ನ ಅಹಂ ಅನ್ನು ಉಳಿಸಿಕೊಂಡೇ ಕಂಪ್ಯುಟರನ್ನು ತನಗೂ ಕಲಿಸು ಎಂದು ಅವರು ಹೇಳಿದ ರೀತಿಗೆ ವಿಕ್ಕಿ ಹೊಟ್ಟೆ ಬಿರಿಯೆ ನಗುವಂತಾಯಿತು. ಟೀಪಾಯ್ ಮೇಲೆ
ಕುಳಿತು ತನ್ನನ್ನೇ ದಿಟ್ಟಿಸಿ ನೋಡುತ್ತಿದ್ದ ಗೂಗುಲ್ ಕೂಡಾ ತನ್ನ ಅಜ್ಞಾನವನ್ನು ಹೀಯಾಳಿಸುತ್ತಿದೆಯೇನೋ ಎಂದು ರಾಯರಿಗೆ ಅನಿಸ ತೊಡಗಿತು. ನಾಚಿಗೆ ಬಿಟ್ಟು ಕೇಳಿಯೇ ಬಿಟ್ಟರು,
"ವಿಕ್ಕೀ.... ನೀನು ಹೋಗೋ ಮೊದಲು ನನ್ಗೂ ಇದನ್ನು ಹೇಳಿ ಕೊಡೋ.... "

thumba chennagide
ಪ್ರತ್ಯುತ್ತರಅಳಿಸಿ