ಭಾನುವಾರ, ಮೇ 25, 2014

ಕ್ಯಾರೆಟ್ ಸಲಾಡ್ (raw carrot salad)

ಪ್ರಿಯ ಓದುಗ ಮಿತ್ರರೇ,
                               ಮಿತಿ ಮೀರಿದ ಈ ಸೆಖೆಗೆ ಅಡುಗೆ ಮಾಡುವುದು, ಮಾಡಿದ ಅಡುಗೆಯನ್ನು ಊಟ ಮಾಡುವುದು ಎರಡೂ ಅರೆ ಮನಸ್ಸಿನ ಕೆಲಸಗಳೆನಿಸಿಕೊಳ್ಳುತ್ತವೆ. ಅಲ್ಲವೇ? ಹಾಗಿದ್ದರೂ ಊಟ ಮಾಡಲೇಬೇಕಲ್ಲ? ಆದಷ್ಟೂ ಬೇಗನೆ ಅಡುಗೆ ಕೆಲಸ ಮುಗಿಸಿ  ಬೆಂಕಿಯ ಬೇಗೆಯಿಂದ ಪಾರಾಗಲು ಮನಸ್ಸು ಹಾತೊರೆಯುತ್ತಿರುತ್ತೆ. ಹೌದಲ್ಲ? ಇಲ್ಲಿದೆ ನೋಡಿ ಕೆಲವು ಸಿಂಪಲ್ ಆದರೆ ಟೇಸ್ಟಿ ಅಡುಗೆಗಳು.ನಿತ್ಯದ ಅಡುಗೆಗಳಿಗೆ  ಪುದಿನದ ಫ್ಲೇವರ್ ಕೊಟ್ಟರೆ ಹೇಗಿರುತ್ತೆ ನೋಡೋಣ್ವಾ?
ಕ್ಯಾರೆಟ್  ಸಲಾಡ್ (raw carrot salad)
ಬೇಕಾಗುವ ಸಾಮಾನುಗಳು ;-ಶುಚಿಗೊಳಿಸಿದ ಕ್ಯಾರೆಟ್ ಎರಡು, ಪುದಿನ ಸೊಪ್ಪಿನ ತುರಿ ಒಂದು ಚಮಚ, ಹಸಿರು ಮೆಣಸಿನ ಕಾಯಿ ಚೂರುಗಳು  ಒಂದು ಚಮಚ, ನಿಂಬೆರಸ ಅರ್ಧ ಚಮಚ,ಒಗ್ಗರಣೆಗೆ-ಎಣ್ಣೆ, ಸಾಸಿವೆ, ಕೆಂಪು ಮೆಣಸು, ರುಚಿಗೆ ತಕ್ಕಷ್ಟು ಉಪ್ಪು.
ಕ್ಯಾರೆಟ್ಟನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ (ತುರಿಯುವುದಲ್ಲ). ಇದಕ್ಕೆ ಮೇಲೆ ಹೇಳಿದ ಸಮಾನುಗಳೆಲ್ಲವನ್ನೂ ಸೇರಿಸಿ ಒಗ್ಗರಣೆ ಕೊಡಿ. ಮೇಲಿನಿಂದ ಎರಡು ಚಮಚ ನೀರು  ಹನಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರ ಮಾಡಿ ಅರ್ಧ ಘಂಟೆ ಬಿಟ್ಟು ಅನ್ನದೊಂದಿಗೆ ಬಡಿಸಿ.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ