ಗುರುವಾರ, ಜೂನ್ 5, 2014

ಮಸಾಲ ಅವಲಕ್ಕಿ


ಸಾಮಾಗ್ರಿಗಳು :- ಎರಡು ಕಪ್ ತೆಳ್ಳಗಿನ ಅವಲಕ್ಕಿ, ತೆಂಗಿನ ತುರಿ ಕಾಲು ಕಪ್, ಹಸಿರು ಮೆಣಸು ಒಂದು, ಪುದಿನ ಸೊಪ್ಪು ಹತ್ತರಿಂದ ಹನ್ನೆರಡು,  ಕೊತ್ತಂಬರಿ ಒಂದು ಚಮಚ, ಜೀರಿಗೆ ಅರ್ಧ ಚಮಚ, ಶುಂಟಿ ಅರ್ಧ ಇಂಚಿನ ತುಂಡು, ಅರಸಿನ ಪುಡಿ ಕಾಲು ಚಮಚ, ಸಕ್ಕರೆ ಕಾಲು ಚಮಚ, ಸಾಂಬಾರು ಪುಡಿ ಅರ್ಧ ಚಮಚ, ಗರಂ ಮಸಾಲೆ ಪುಡಿ ಕಾಲು ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಒಗ್ಗರಣೆಗೆ -ಎಣ್ಣೆ,ಸಾಸಿವೆ,  ಉದ್ದಿನಬೇಳೆ,  ಕೆಂಪು ಮೆಣಸು, ಕರಿಬೇವಿನ ಸೊಪ್ಪು.
ವಿಧಾನ :-ಅವಲಕ್ಕಿ ಹಾಗೂ ಒಗ್ಗರಣೆ ಸಾಮಾನುಗಳನ್ನು ಹೊರತುಪಡಿಸಿ ಉಳಿದವುಗಳನ್ನು ಮಿಕ್ಸಿಯ ಡ್ರೈ ಜಾರಿನಲ್ಲಿ ಹಾಕಿ  ಮೂರು ಬಾರಿ   vip  ಮಾಡಿ. ನಂತರ ಈ ಮಿಶ್ರಣಕ್ಕೆ ಒಗ್ಗರಣೆ ಕೊಡಿ. ಬಡಿಸುವ ಐದು ನಿಮಿಷ ಮೊದಲು ಅವಲಕ್ಕಿ ಬೆರೆಸಿ ಚೆನ್ನಾಗಿ ಕಲಸಿ. ಬಿಸಿ ಬಿಸಿ ಕಾಫಿಯೊಂದಿಗೆ ಸರ್ವ್ ಮಾಡಿ.



1.







2.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ