ಶುಕ್ರವಾರ, ಏಪ್ರಿಲ್ 18, 2014

ಡಿಸೈನ್ಸ್ (ಹ್ಯಾಂಡ್ ಎಂಬ್ರಾಯಿಡೆರಿ)

ಬೇಸಿಗೆ ರಜಾ ಬಂತಲ್ಲಾ ?ಏನೆಲ್ಲಾ ಪ್ರೊಗ್ರಾಮ್ ಸೆಟ್ ಮಾಡಿಕೊಂಡ್ರಿ ? ಮಕ್ಕಳಿಗೆ ಸಮ್ಮರ್ ಕ್ಯಾಂಪು, ಪಿಕ್ನಿಕ್ಕು ಅಥವಾ ಇಡೀ ಫ್ಯಾಮಿಲಿ ಟೂರು....? ಅದೆಲ್ಲ ಅದ್ಮೇಲೆ  ಸ್ವಲ್ಪ ದಿವಸಗಳನ್ನ ತವರು ಮನೆಯಲ್ಲೂ ಕಳೆಯುವ ಪ್ಲಾನ್ ಇದೆಯಾ?ಎಲ್ಲಾ  ಮುಗಿಸಿಯೂ ಉಳಿದ ಸಮಯವನ್ನ ಹೇಗೆ  ಕಳೀತೀರಾ...? ಇಲ್ಲಿದೆ ನೋಡಿ ಒಂದು ಸಿಂಪಲ್ ಎಂಬ್ರೋಯಿಡೆರಿ. ಇಂದಿನ ಮಕ್ಕಳು  ದೊಡ್ದವರಿಗಿಂತಲೂ ಹೆಚ್ಚು ಡ್ರೆಸ್ಸಿಂಗ್ ಸೆನ್ಸ್ ಬೆಳೆಸಿಕೊಂಡಿರೋದನ್ನ ನಾವೂ ಗಮನಿಸಿರ್ತೀವಿ. ಒಂದ್ಸಲ ಹಾಕಿದ್ದನ್ನ ಪುನಹ ಹಾಕೋಕೆ ಇಷ್ಟ ಪಡೋದಿಲ್ಲ. ಸೋ... ನಾವೇನು ಮಾಡೋಣ...? ಅದನ್ನೇ modify ಮಾಡಿದ್ರೆ ಹೇಗಿರುತ್ತೆ ನೋಡೋಣವೇ..? ನಮ್ಮ ಸೀರೆಗಳ ಕಥೆಯೂ ಇದಕ್ಕಿಂತ ಬೇರೆಯಾಗಿಲ್ಲ ಅಲ್ವಾ? ಉಟ್ಟಿದನ್ನೇ ಉಡೋದು ಬೋರು... ಅಷ್ಟು ದುಡ್ಡು ಕೊಟ್ಟು ತಂದಿದ್ದನ್ನ ಬಿಸಾಡೋ ಹಾಗಿಲ್ವಲ್ಲಾ...? ನಮ್ಮ ಬಳಿ ಇರೋ ಸೀರೆಗಳಿಗೆ ಹೊಸ  ಲುಕ್ ಕೊಡೋದು ಹೇಗೆ?  ದ್ರೆಸ್ಸುಗಳನ್ನು ಸುಂದರಗೊಳಿಸೋದು ಹೇಗೆ ಎಂಬುದರ ಬಗ್ಗೆ ಮಾತನಾಡೋಣ..... ಇಲ್ಲಿ ನಿಮಗೆ ಬೇಕಾಗಿರೋದು ಸ್ವಲ್ಪ ತಾಳ್ಮೆ ಮತ್ತು ಅಭಿರುಚಿ ಅಷ್ಟೆ .ಬನ್ನಿ ಶುರು ಮಾಡೋಣ.
 ನನ್ನ ಮಗಳಿಗೆ ಅವಳ ಫ್ರೆಂಡ್ ಸಲ್ವಾರಿನ ಮೆಟಿರಿಯಲೊಂದನ್ನು ಉಡುಗೊರೆ ಕೊಟ್ಟಿದ್ದಳು.ಸರಳವಾಗಿದ್ದ ಆ  ಡ್ರೆಸ್ಸಿಗೆ  ನಾನು ಹೊಸ ಲುಕ್ ಕೊಟ್ಟಿದ್ದನ್ನ ನೋಡಿ.  ಮಗಳು ಅದನ್ನು ತುಂಬಾ ಇಷ್ಟಪಟ್ಟು ಹಾಕಿದಾಗ ನಾನು  ಪಟ್ಟ ಶ್ರಮ ಸಾರ್ಥಕವಾಗಿತ್ತು. ನಿಮ್ಮ ಮಗುವಿನ ಟೀಶರ್ಟುಗಳ ಡಿಸೈನುಗಳ ಮೇಲೆಯೂ ಈ ಥರ ಮಾಡಬಹುದು.
 ಇದು ಬಹಳ ಸುಲಭದ ಹೊಲಿಗೆ.... ಇದಕ್ಕೆ  ಸರಪಣಿ ಹೊಲಿಗೆ ಅಥವಾ ಚೈನ್ ಸ್ಟಿಚ್ ಎನ್ನುತ್ತೇವೆ. ಚಿಕ್ಕದಿರುವಾಗ ನಾವು ಸ್ಕೂಲಲ್ಲಿ ಕ್ರಾಫ್ಟ್ ಕ್ಲಾಸಲ್ಲಿ ಕಲಿತಿದ್ದೆವಲ್ಲ?ಅದುವೇ ಇದು. ಒಂದು ವ್ಯತ್ಯಾಸ ಇದೆ . ಅದು  ಏನು ಗೊತ್ತಾ? ದಾರದ ಮಧ್ಯ ಮಧ್ಯದಲ್ಲಿ ಒಂದೊಂದು ಟಿಕ್ಲಿಯನ್ನೋ ಮುತ್ತುಗಳನ್ನೋ ಪೋಣಿಸುತ್ತಾ ಹೋಗಬೇಕು. ಇಲ್ಲಿ ಒಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು. ನೀವು ಮಾಡುವ ಹೊಲಿಗೆ ಬಟ್ಟೆಯ ಬಣ್ಣ ಅಥವಾ ಅದರಲ್ಲಿರುವ ಡಿಸೈನುಗಳ ಬಣ್ಣಕ್ಕೆ  ಕೊಂಟ್ರಾಸ್ಟ್ ಆಗಿರಬೇಕೋ ಮ್ಯಾಚಿಂಗ್ ಆಗಿರಬೇಕೋ ಎಂಬುದನ್ನು ನಿರ್ಧರಿಸಿ. ಆಮೇಲೆ ನೂಲನ್ನು ಆಯ್ದುಕೊಳ್ಳಿ.ಎಂಬ್ರಾಯಿಡೆರಿ ನೂಲನ್ನು ಕೊಳ್ಳುವಾಗ Dolly ನೂಲನ್ನೆ ಆಯ್ದುಕೊಳ್ಳಿ. ಟಿಕ್ಲಿಗಳು ನಿಮಗೆ ಬೇಕಾದ ಬಣ್ಣದಲ್ಲಿ ದೊರೆಯುತ್ತದೆ.ಸಾಮಾನ್ಯವಾಗಿ ಉಪಯೋಗಿಸುವ ಹೊಲಿಗೆ ಸೂಜಿಯೇ ಇದಕ್ಕೂ  ಸಾಕು. ಚಿಕ್ಕ ಕತ್ತರಿಯೊಂದನ್ನು ಪಕ್ಕದಲ್ಲಿಟ್ಟುಕೊಳ್ಳಿ. 

1. ಡಿಸೈನ್  ಹಾಕುವ ಮೊದಲು   



















2. ನಂತರ 

7. ಟಿಕ್ಲಿ ಪೋಣಿಸಿದ ಸ್ಲೀವ್ಸ್ 





 













  
8. ಉಪಯೋಗಿಸಿದ ವಸ್ತುಗಳು   


ಇವತ್ತು ಇದನ್ನ ಮಾಡಿ ನೋಡಿ. ಮುಂದೆ ಸೀರೆಗೆ ಹಾಕಬಹುದಾದ ಸಿಂಪಲ್ ಡಿಸೈನ್ ಗಳ ಬಗ್ಗೆ ನೋಡೋಣ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ