ಓದುಗ ಮಿತ್ರರೇ ,ವಿಷು ಹಬ್ಬವನ್ನ ಖುಷಿ ಖುಷಿಯಾಗಿ ಆಚರಿಸಿದ್ರಾ? ಹೊಸ ವರ್ಷದ ಆರಂಭದ ದಿನ ಏನು ವಿಶೇಷ ಅಡುಗೆ ಮಾಡಿದ್ರಿ? ನಾನು ಕಡ್ಲೆಬೇಳೆ ಹಾಗೂ ಸಾಗಕ್ಕಿ ಮಿಶ್ರ ಮಾಡಿ ಪಾಯಸ ಮಾಡಿದ್ದೆ. ರುಚಿ ಸ್ವಲ್ಪ ಸ್ಪೆಶಲ್ ಆಗಿರಲಿ ಎಂದುಕೊಂಡು ಜೇನುತುಪ್ಪ,ಸಕ್ಕರೆ, ತಾಜಾ ತುಪ್ಪ ಸೇರಿಸಿದ್ದೆ. ತಿನ್ನಲು ಬಹಳ ಹಿತವಾಗಿತ್ತು. ನಾನು ಮಾಡಿದ್ದು ಹೀಗೆ...,
ಕಡ್ಲೆ ಬೇಳೆಯನ್ನು ಕುಕ್ಕರಲ್ಲಿ ಮೂರು ವಿಸಿಲ್ ಆಗೋವರೆಗೆ ಬೇಯಿಸಿದ್ದೆ. ಬೇಯಿಸುವಾಗ ನೀರಿನ ಬದಲು ಎರಡನೇ ಸಲ ಹಿಂಡಿದ ತೆಂಗಿನ ಹಾಲು ಹಾಕಿದ್ದೆ. ಸಾಗಕ್ಕಿಯನ್ನು ಪಾತ್ರೆಯಲ್ಲೇ ನೀರು ಹಾಕಿ ಬೇಯಿಸಿದ್ದೆ . ಬೆಲ್ಲವನ್ನು ತೆಳ್ಳಗಿನ ತೆಂಗಿನ ಹಾಲಲ್ಲಿ ಹಾಕಿ ಕುದಿಸಿ (ಬೆಲ್ಲದ ನೀರನ್ನು ಫಿಲ್ಟರ್ ಮಡಿಯಾದ ಮೇಲೆ ತೆಂಗಿನ ಹಾಲು ಹಾಕಿದ್ದೆ )ಅದಕ್ಕೆ ಬೆಂದ ಬೇಳೆ ಹಾಗೂ ಸಾಗಕ್ಕಿ ಹಾಕಿ ಚೆನ್ನಾಗಿ ಕುದಿ ಬಂದ ಮೇಲೆ ದಪ್ಪದ ತೆಂಗಿನ ಹಾಲು ಸೇರಿಸಿ ಮೇಲೆ ಎರಡು ದೊಡ್ಡ ಚಮಚ ಜೇನು ತುಪ್ಪ, ತಜಾತುಪ್ಪ ಎರಡು ಚಮಚ, ಎರಡು ಚಿಕ್ಕ ಚಮಚ ಸಕ್ಕರೆ ಹಾಕಿ ಕುದಿಸಿ ಇಳಿಸಿದ್ದೆ .ಕಾಲು ಚಮಚ ಏಲಕ್ಕಿ ಪುಡಿ ಫ್ಲೇವರಿಗಾಗಿ. ಈ ಪಾಯಸ ನೀರಾಗಿರಬಾರದು ( ಒಂದು ವೇಳೆ ಪಾಯಸ ತೆಳ್ಳಗಾಗಿದ್ದರೆ ಅರ್ಧ ಚಮಚ ಅಕ್ಕಿಹುಡಿಯನ್ನು ತಣ್ಣಗಿನ ನೀರಲ್ಲಿ ಬೆರೆಸಿಕೊಂಡು ಪಾಯಸಕ್ಕೆ ಮಿಕ್ಸ್ ಮಾಡಿ ಕುದಿಸಿದಾಗ ಪಾಯಸ ದಪ್ಪಗಾಗುವುದು ).ಸಾಗಕ್ಕಿ ಬೇಯಿಸುವಾಗ ಮತ್ತು ಕೊನೆಯಲ್ಲಿ ಪಾಯಸ ಕುದಿಸುವಾಗ ಪಾತ್ರೆ ತಳ ಹಿಡಿಯದಂತೆ ನೋಡಿಕೊಳ್ಳಿ . ರುಚಿಯನ್ನು A+ ಗ್ರೇಡಿಗೇರಿಸಲು ಅರ್ಧ ಚಿಟಿಕೆ ಉಪ್ಪನ್ನು ಸೇರಿಸಿ. ಮುಂದಿನ ಹಬ್ಬಕ್ಕೆ ಇದನ್ನು ನೀವೂ ಮಾಡಿ ನೋಡಿ
ಬೇಕಾಗುವ ಸಾಮಾನುಗಳು :-ಒಂದು ಕಪ್ ಕಡ್ಲೆ ಬೇಳೆ ,ಅರ್ಧ ಕಪ್ ಸಾಗಕ್ಕಿ, ಬೆಲ್ಲದ ಪುಡಿ ಮುಕ್ಕಾಲು ಕಪ್ ,
ತೆಂಗಿನ ಹಾಲು ಎರಡು ಕಪ್ ,ಮೇಲೆ ಹೇಳಿದಷ್ಟು ಜೇನುತುಪ್ಪ ,ತುಪ್ಪ, ಸಕ್ಕರೆ ಮತ್ತು ಏಲಕ್ಕಿ ಪುಡಿ.

Amma I want to make Kerala style prathamam ...would like to follow ur recipe if u cook and post it:):)
ಪ್ರತ್ಯುತ್ತರಅಳಿಸಿ