ಬಿಸಿಲಿನ ಧಗೆ ತಾಳದಾಗಿದೆ. ಅಲ್ಲವೇ?ತಂಪು ತಂಪಾದ ಪಾನೀಯಗಳನ್ನು ಕುಡಿಯಲು ಮನಸ್ಸು ಹಾತೊರೆಯುತ್ತಿರುತ್ತೆ. ನಾನಿಂದು ಮಾಡಿದ ಕಾಡು ಮಾವಿನ ಹಣ್ಣಿನ ಜ್ಯೂಸ್ ಬಹಳ ಚೆನ್ನಾಗಿತ್ತು. ಬಾಯಾರಿಕೆಯನ್ನು ತಣಿಸಿಯೇ ಬಿಟ್ಟಿತ್ತು. ಇದೋ ಇಲ್ಲಿದೆ ರೆಸಿಪಿ,
ಮಾವಿನ ಹಣ್ಣುಗಳನ್ನು ಸ್ವಛ್ಛಗೊಳಿಸಿ ಸಿಪ್ಪೆಯಿಂದ ಬೇರ್ಪಡಿಸಿ ಕುದಿಸಿ ತಣಿಸಿದ ನೀರನ್ನು ಹಾಕಿದೆ.ಸಿಪ್ಪೆ,ಬೀಜ ಎರಡನ್ನೂ ಬೇರೆ ಬೇರೆಯಾಗಿಯೇ ಗಿವುಚಿದೆ.ಈ ಎರಡರಲ್ಲೂ ಅಂಟಿಕೊಂಡಿರುವ ತಿರುಳು ಪೂರ್ತಿಯಾಗಿ ನೀರಲ್ಲಿ ಮಿಶ್ರವಾಗುವವರೆಗೂ ಪುನಹ ಪುನಃ ಸ್ವಲ್ಪ ಸ್ವಲ್ಪವಾಗಿ ನೀರನ್ನು ಸೇರಿಸುತ್ತಾ ರಸವನ್ನು ತೆಗೆದೆ. ಬೆಲ್ಲದ ಪುಡಿಯನ್ನು ಬೇರೆಯೇ ಪಾತ್ರೆಯಲ್ಲಿ ಹಾಕಿ ಸ್ವಲ್ಪ ನೀರಲ್ಲಿ ಕರಗಿಸಿ ಫಿಲ್ಟರ್ ಮಾಡಿಕೊಂಡು ಮಾವಿನ ರಸಕ್ಕೆ ಸೇರಿಸಿದೆ. ಶುಂಟಿಯನ್ನು ಚೆನ್ನಾಗಿ ಜಜ್ಜಿ ಹಾಕಿದೆ.ಚಿಟಿಕೆ ಕರಿ ಮೆಣಸಿನ ಪುಡಿ, ಚಿಟಿಕೆ ಏಲಕ್ಕಿ ಪುಡಿ, ಅಷ್ಟೇ ಪ್ರಮಾಣದ ಉಪ್ಪು ಸೇರಿಸಿದೆ. ಫ್ರಿಜ್ಜಲ್ಲಿಟ್ಟು ಕುಡಿದೆವು. ಆಹಾ... ಏನು ಚೆನ್ನಾಗಿತ್ತು ಗೊತ್ತಾ..?

ಕಾಡು ಮಾವಿನ ಹಣ್ಣುಗಳಲ್ಲಿ ಹಲವು ವಿಧಗಳಿರುತ್ತವೆ. ರುಚಿಯೂ ಭಿನ್ನ ವಾಗಿರುತ್ತೆ. ಸೋ... ನಾನು ಉಪಯೋಗಿಸಿದ ಸಾಮಾಗ್ರಿಗಳ ಪ್ರಮಾಣ ಬರೆದಿಲ್ಲ. ಹಣ್ಣಿನ ಸಿಹಿ ಹುಳಿ ರುಚಿಯನ್ನು ನೋಡಿಕೊಂಡು ಬೆಲ್ಲ ಇತ್ಯಾದಿಗಳನ್ನು ಸೇರಿಸಿಕೊಳ್ಳಿ. ಒಟ್ಟಿನಲ್ಲಿ ಈ ಜ್ಯೂಸ್ ಟ್ಯಾಂಗಿ ಟ್ಯಾಂಗಿಯಾಗಿರಬೇಕು. ಬೆಲ್ಲ ಹಾಕುವುದರಿಂದ ಬಾಯಾರಿಕೆಯೂ ಶಮನವಾಗುತ್ತೆ.

Juice nodi Dubai heat Ella tannidattu:D:D
ಪ್ರತ್ಯುತ್ತರಅಳಿಸಿO.. ho.. innu tampu appale juisina allige paesel maduva bagge alochisutta idde!!
ಅಳಿಸಿ