ವಿಶ್ವ ಪರಿಸರ ಕಾಳಜಿಯಂತೆ
ಗಿಡ ಮರಗಳೂರುವ ಯೋಜನೆಗಳಂತೆ
ವರ್ಷ ವರ್ಷವೂ ಬೆಳೆಸುವುದಂತೆ
ಲಕ್ಷ ಲಕ್ಷ ಸುರಿಯುವುದಂತೆ
ಆ...... ದ...... ರೆ.....
ಓ..... ಮಾನವ ಜೀವಿಗಳೇ
ನೋಡಿಲ್ಲಿ ನನ್ನ ದುರ್ಯೋಗ
ಗೂಡಿಗೆಲ್ಲಿದೆ ನನಗೊಂದು ಜಾಗ
ಸುತ್ತ ಮುತ್ತ ಮೇಲೆ ಕೆಳಗೆ
ಬರೀ ಸಿಮೆಂಟು ಕರೆಂಟುಗಳ ಓಳು
ಮಿಣುಕು ಹುಳುವಾದೆನಲ್ಲ ನಾನು?
ಬಾಳಬೇಡವೇ ನಾನು
ಮಿಂಚುಳ್ಳಿಯಾಗಿ?
ನಿಮಗಾಗಿ ನನಗಾಗಿ
ನಮ್ಮ ಮಕ್ಕಳಿಗಾಗಿ......
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ