ಗುರುವಾರ, ಜೂನ್ 5, 2014

ಬಟಾಣಿ ಕಾಳು ಪಕೋಡ (dried green pea pakoda )


ಸಾಮಗ್ರಿಗಳು:- ನೆನೆಸಿ ಬೇಯಿಸಿದ ಬಟಾಣಿ ಕಾಳು  ಎರಡು  ಕಪ್, ಪುದಿನ ಅರ್ಧ ಕಟ್ಟು,ಹಸಿ ಮೆಣಸು ಎರಡು, ಶುಂಟಿ  ಒಂದು ಇಂಚಿನ ತುಂಡು, ಕರಿಬೇವಿನ ಸೊಪ್ಪು ಏಳೆಂಟು, ಗರಂ ಮಸಾಲ ಅರ್ಧ ಚಮಚ, ನಾಲ್ಕು ದೊಡ್ಡ ಚಮಚ ಬೇಸನ್ ಪುಡಿ, ಎರಡು ದೊಡ್ಡ ಚಮಚ ಅಕ್ಕಿ ಪುಡಿ,  ಹಿಂಗಿನ ಪುಡಿ ಕಾಲು ಚಮಚ, ಉಪ್ಪು ರುಚಿಗೆ ತಕ್ಕಷ್ಟು. ಹುರಿಯಲು ಎರಡು ಕಪ್ ಎಣ್ಣೆ. 
ವಿಧಾನ :- ಬೇಯಿಸಿದ ಬಟಾಣಿಕಾಳಿನೊಂದಿಗೆ ಬೇಸನ್ ಹಾಗೂ ಅಕ್ಕಿ ಹಿಟ್ಟುಗಳನ್ನುಳಿದು ಬೇರೆಲ್ಲವನ್ನೂ ಸೇರಿಸಿ ಮಿಕ್ಸಿಯ ಡ್ರೈ ಜಾರಲ್ಲಿ ಹಾಕಿ ಒಂದು ಸಲ vip ಮಾಡಿಕೊಳ್ಳಿ. ಈ ಮಿಶ್ರಣಕ್ಕೆ ಮೇಲೆ ಹೇಳಿದ ಹಿಟ್ಟುಗಳನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.ಇದಕ್ಕೆ ನೀರು ಸೇರಿಸಬೇಡಿ. ಬೆಂದ ಕಾಳಿನಲ್ಲಿರುವ ನೀರಿನಂಶವೇ ಸಾಕು.  ನಂತರ ಈ ಮಿಶ್ರಣದಿಂದ  ದೊಡ್ಡ ನಿಂಬೆ ಗಾತ್ರದ ಉಂಡೆಗಳನ್ನು ಮಾಡಿ ಅಂಗೈಯಲ್ಲಿ ಒತ್ತಿ ಸ್ವಲ್ಪ ಚಪ್ಪಟೆ ಮಾಡಿ ಎಣ್ಣೆಯಲ್ಲಿ ಡೀಪ್  ಫ್ರೈ ಮಾಡಿ
. ಸಾಸ್ ನೊಂದಿಗೆ ತಿನ್ನಲು ಕೊಡಿ

 ಬಟಾಣಿ ಮಿಶ್ರಣ 



ಎಣ್ಣೆಗೆ ಹಾಕಲು ರೆಡಿ 









ಸವಿ ಸವಿ ಪಕೋಡ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ