ಸಾಮಾಗ್ರಿಗಳು:- ಅಲಸಂಡೆ ಕಾಲು ಕೆ.ಜಿ, ಬೆಳ್ಳುಳ್ಳಿ ನಾಲ್ಕು ಎಸಳು, ಸಾಂಬಾರು ಪುಡಿ ಅರ್ಧ ಚಮಚ, ನೀರುಳ್ಳಿ ಒಂದು,ಪುದಿನಾ ಮತ್ತು ಕೊತ್ತಂಬರಿ ಸೊಪ್ಪಿನ ಚೂರುಗಳು ನಾಲ್ಕು ಚಮಚ, ಮೆಣಸಿನ ಪುಡಿ ಕಾಲು ಚಮಚ, ಉಪ್ಪು, ಬೆಲ್ಲ. ಒಗ್ಗರಣೆಗೆ - ಎಣ್ಣೆ ನಾಲ್ಕು ಚಮಚ (ಈ ಪಲ್ಯಕ್ಕೆ ಸಾದಾ ಪಲ್ಯಕ್ಕಿಂತ ಜಾಸ್ತಿ ಎಣ್ಣೆ ಬೇಕು ),ಕೆಂಪು ಮೆಣಸು ಒಂದು, ಸಾಸಿವೆ, ಜೀರಿಗೆ, ಕರಿಬೇವಿನ ಎಸಳು.
ವಿಧಾನ:- ಬಾಣಲೆಯಲ್ಲಿ ಒಗ್ಗರಣೆ ಸಿಡಿಸಿ. ಮೂರಿಂಚು ಉದ್ದದಲ್ಲಿ ಹೆಚ್ಚಿದ ಅಳಸಂಡೆಯನ್ನು ಹಾಕಿ. ಬೆಳ್ಳುಳ್ಳಿ ಜಜ್ಜಿ ಹಾಕಿ.ನೀರುಳ್ಳಿ ಚೂರುಗಳನ್ನು ಸೇರಿಸಿ. ಉಪ್ಪು,ಬೆಲ್ಲ, ಸಾಂಬಾರು ಪುಡಿ, ಮೆಣಸಿನ ಪುಡಿ ಹಾಕಿ ಬೇಯಲು ಬೇಕಾದಷ್ಟೇ ನೀರು ಹಾಕಿ ಮುಚ್ಚಿ ಬೇಯಿಸಿ. ಕೊನೆಯಲ್ಲಿ ಸೊಪ್ಪುಗಳ ಚೂರುಗಳನ್ನು ಉದುರಿಸಿ ಚೆನ್ನಾಗಿ ಮಗುಚಿ ಇಳಿಸಿ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ