ಶುಕ್ರವಾರ, ಜೂನ್ 20, 2014

ಬ್ರೆಡ್ ಮಸಾಲಾ

ಓದುಗ ಮಿತ್ರರೇ,
                       ಇದು ನಮ್ಮ ಮನೆಯಲ್ಲಿ ಎಲ್ಲರ  all time favorite ತಿಂಡಿ.  ನಿನ್ನೆ ಸಂಜೆ ಟಿಫಿನ್ಗೆ  ಅದನ್ನೇ ಮಾಡಿದ್ದೆ. ಮಗಳ ಸಲಹೆಯಂತೆ recipe ಯನ್ನು ನಿಮ್ಮೊಂದಿಗೆ ಹಂಚಿಕೊಳ್ತಿದ್ದೀನಿ. ಎಲ್ಲರೂ ಇಷ್ಟ ಪಟ್ಟು ತಿನ್ನಬಹುದಾದ  ಈ  ತಿಂಡಿಯನ್ನು ಮಾಡಲು ಕಷ್ಟ ಪಡಬೇಕಾಗಿಲ್ಲ.
ಬೇಕಾಗುವ  ಸಾಮಾಗ್ರಿಗಳು:- 
  ಬ್ರೆಡ್ ಸ್ಲೈಸುಗಳು ಐದಾರು,ಬೇಯಿಸಿದ ಬಟಾಣಿ ಒಂದು ಕಪ್,ಕ್ಯಾರೆಟ್ ತುರಿ,ನೀರುಳ್ಳಿ ಚೂರುಗಳು, ಚೌಚೌ (ಕಡ್ಲೆ ಹಿಟ್ಟಿನಿಂದ ತಯಾರಿಸಿದ ಚಿಕ್ಕ ಸೇಮಿಗೆ. ನಮ್ಮೂರಿನ ಬೇಕರಿಯವರು ನೈಲಾನ್ ಸೇಮಿಗೆ ಎನ್ನುತ್ತಾರೆ) ಐವತ್ತು ಗ್ರಾಂ,  ಕೊತ್ತಂಬರಿ ಸೊಪ್ಪು,ಪುದಿನ ಸೊಪ್ಪು ಚಿಕ್ಕದಾಗಿ ಕತ್ತರಿಸಿದ್ದು, ಕ್ಯಾರೆಟ್ ತುರಿ, ಹುಳಿ ರಸ,  ತಲಾ ಕಾಲು ಕಪ್ಪಿನಂತೆ. ಟೊಮೇಟೊ ಮಧ್ಯಮ ಗಾತ್ರದ್ದು ಒಂದು. ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ, ಗರಂ ಮಸಾಲೆ ಕಾಲು ಚಮಚ, ಬೇಕಿದ್ದರೆ ಮೆಣಸಿನ ಪುಡಿ ಹಾಕಿಕೊಳ್ಳಬಹುದು.  ಒಗ್ಗರಣೆಗೆ  ಎಣ್ಣೆ ಒಂದು ಚಮಚ,ಸಾಸಿವೆ, ಜೀರಿಗೆ  ತಲಾ ಕಾಲು  ಚಮಚ.
ತಯಾರಿ :- ಬಾಣಲೆಯನ್ನು ಬಿಸಿಮಾಡಿ ಒಗ್ಗರಣೆ ಮಾಡಿ.ಚಿಕ್ಕದಾಗಿ ಕತ್ತರಿಸಿದ ಟೊಮೇಟೊ ತುಂಡುಗಳನ್ನು ಹಾಕಿ. ಹುಳಿ ರಸ, ಬೇಯಿಸಿದ ಬಟಾಣಿ, ಗರಂ ಮಸಾಲೆ, ಉಪ್ಪು, ಬೆಲ್ಲ, ಒಂದುಕಪ್ ನೀರು ಹಾಕಿ ಕುದಿಸಿ. ಟೊಮೇಟೊ  ಸ್ವಲ್ಪ ಮೆತ್ತಗಾದಾಗ  ಬಾಣಲೆಯನ್ನು ಕೆಳಕ್ಕಿಳಿಸಿ. ಸರ್ವ್ ಮಾಡುವಾಗ ತಟ್ಟೆಯಲ್ಲಿ ಮೊದಲೇ ಮಾಡಿಟ್ಟುಕೊಂಡ ಬ್ರೆಡ್ ಚೂರು(ಒಂದು ಬ್ರೆಡ್ ಹಾಳೆಯನ್ನು ತುಂಡರಿಸಿ ಅರ್ಧ ಇಂಚಿನ ಪೀಸುಗಳನ್ನಾಗಿ ಮಾಡಿ )ಗಳನ್ನು ಹರಡಿ. ಅದರ ಮೇಲೆ ಹುಳಿ ನೀರಿನ ಮಿಶ್ರಣ ನಾಲ್ಕು ಚಮಚ, ನಂತರ ಸ್ವಲ್ಪ ನೀರುಳ್ಳಿ ಚೂರುಗಳು, ಅದರ ಮೇಲಕ್ಕೆ ಕ್ಯಾರೆಟ್ ತುರಿ, ಅದರ ಮೇಲಿನ ಪದರದಲ್ಲಿ ಹೆಚ್ಚಿದ ಸೊಪ್ಪಿನ ಮಿಶ್ರಣ, ಕೊನೆಯಲ್ಲಿ ಎರಡು ಚಮಚ ಚೌಚೌ ಹರಡಿ ಬಿಸಿ ಬಿಸಿ ಕಾಫಿಯೊಂದಿಗೆ ತಿನ್ನಲು ಕೊಡಿ.




















ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ