ಶುಕ್ರವಾರ, ಜೂನ್ 20, 2014

ಹೀರೆಕಾಯಿ ಸಿಪ್ಪೆ ಚಟ್ನಿ

ಬೇಕಾಗುವ ಸಾಮಾಗ್ರಿಗಳು :- ಒಂದು ಹೀರೇಕಾಯಿಯ ಸಿಪ್ಪೆ, ಹುಳಿ ನೆಲ್ಲಿ ಗಾತ್ರ, ಹಸಿರು ಮೆಣಸು ಒಂದು ಯಾ  ಎರಡು, ಹಿಂಗು ಒಂದು ಚಿಟಿಕೆ, ತೆಂಗಿನ ತುರಿ ಒಂದು ಕಪ್, ಉಪ್ಪು ರುಚಿಗೆ ತಕ್ಕಷ್ಟು,ಬೆಲ್ಲ ಬೇಕಿದ್ದರೆ ಕಡ್ಲೆ ಗಾತ್ರ. ಪುದಿನ ಮತ್ತು ಕೊತ್ತಂಬರಿ ಸೊಪ್ಪಿನ ಚೂರುಗಳು  ಎರಡು ಚಮಚ,ಒಗ್ಗರಣೆಗೆ- ಎಣ್ಣೆ, ಕೆಂಪು ಮೆಣಸು ಒಂದು, ಉದ್ದಿನ ಬೇಳೆ ಅರ್ಧ ಚಮಚ, ಸಾಸಿವೆ ಅರ್ಧ ಚಮಚ.
ವಿಧಾನ:-    ಹೀರೆಯ ಸಿಪ್ಪೆಯೊಂದಿಗೆ ಹುಳಿ,ಉಪ್ಪು, ಮೆಣಸಿನ ಕಾಯಿ ತುಂಡರಿಸಿದ್ದು ಹಾಕಿ ಬೇಯಲು ಬೇಕಾದಷ್ಟೇ ನೀರು ಹಾಕಿ ಬೇಯಿಸಿ. ಬೆಲ್ಲ ಹಾಕುವುದಿದ್ದರೆ ಈಗಲೇ ಹಾಕಿಕೊಳ್ಳಬಹುದು. ಬೆಂದು ತಣ್ಣಗಾದ ಮಿಶ್ರಣಕ್ಕೆ ಹಿಂಗಿನ ಹರಳನ್ನು ತುಪ್ಪದಲ್ಲಿ ಹುರಿದು ಹಾಕಿ. ತೆಂಗಿನ ತುರಿಯನ್ನು ಸೇರಿಸಿ ಮಿಕ್ಸಿ ಮಾಡಿ. (ಬೇಯುವಾಗ ಹಾಕಿದ ನೀರುಸಮೇತ ಅರೆಯಿರಿ) ನಂತರ ಬಾಣಲೆಯನ್ನು ಬಿಸಿಗಿಟ್ಟು ಒಗ್ಗರಣೆ ಮಾಡಿ. ಅದಕ್ಕೆ ಅರೆದ ಮಿಶ್ರಣವನ್ನು ಹಾಕಿ ಚೆನ್ನಾಗಿ ಕೈಯ್ಯಾಡಿಸುತ್ತಾ ಇರಿ. ಚಟ್ನಿಯಲ್ಲಿರುವ ನೀರಿನ  ಅಂಶ ಆರಿ ಮಿಶ್ರಣ ಗಟ್ಟಿಯಾಗಬೇಕು. ಈಗ ಸೊಪ್ಪುಗಳ ಚೂರುಗಳನ್ನು ಬೆರೆಸಿ ಮತ್ತೊಮ್ಮೆ ಚೆನ್ನಾಗಿ ಕೈಯ್ಯಾಡಿಸಿ. ಈ ಚಟ್ನಿ ಸ್ವಲ್ಪ ಖಾರವಾಗಿದ್ದರೆ ರುಚಿ ಹೆಚ್ಚು.              
     

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ