ಮಂಗಳವಾರ, ಜುಲೈ 1, 2014

ಕ್ಯಾಬೇಜ್ ನೀರು ದೋಸೆ

ಬೆಳಗ್ಗಿನ ತಿಂಡಿಗೆ ಏನು ಮಾಡಲಿ ಎಂದು ತೋಚದಿರುವಾಗ ತೆಳ್ಳವನ್ನೇ (ನೀರು ದೋಸೆ ) ಮಾಡುತ್ತಿರುತ್ತೇನೆ. ಇವತ್ತೂ ಅದನ್ನೇ ಮಾಡೋಣವೆಂದು ಹೊರಟಾಗ ಮಗ ಹೇಳಿದ ,"ಅಮ್ಮ..., ಅದನ್ನೇ ಸ್ವಲ್ಪ modify ಮಾಡಿ ನೋಡು. ಹೇಗಿದೆ ಅಂತ ನಾನು ತಿಂದು ಹೇಳ್ತೀನಿ..." ಅಂದ. ನೀರುದೋಸೆಯ ಹೊಸ ಅವತಾರವನ್ನು ಮಗ ಮಾತ್ರ ಅಲ್ಲ ಮನೆಯ ಸದಸ್ಯರೆಲ್ಲರೂ ಇಷ್ಟ ಪಟ್ಟರು. ಇದೋ ಇಲ್ಲಿದೆ ನೋಡಿ.
ಬೇಕಾಗುವ ಸಾಮಾಗ್ರಿಗಳು:- ಬೆಳ್ತಿಗೆ ಅಕ್ಕಿ ಎರಡು ಕಪ್, ಹೆಚ್ಚಿದ ಕ್ಯಾಬೇಜ್ ಒಂದು ಕಪ್, ತೆಂಗಿನ ತುರಿ ಅರ್ಧ ಕಪ್, ಒಣಮೆಣಸು ಮೂರು ಯಾ ನಾಲ್ಕು, ಹಿಂಗು ಚಿಟಿಕೆ, ಕರಿಬೇವು, ಕೊತ್ತಂಬರಿ ಮತ್ತು ಪುದಿನ ಸೊಪ್ಪಿನ ಚೂರುಗಳು ಕಾಲು ಕಪ್, ಉಪ್ಪು ರುಚಿಗೆ ತಕ್ಕಷ್ಟು.
ವಿಧಾನ :-  ಬೆಳ್ತಿಗೆ ಅಕ್ಕಿಯನ್ನು ನುಣ್ಣಗೆ ಅರೆಯಿರಿ . ಹಿಟ್ಟು ತೆಗೆಯುವ ಮೊದಲು ಮೇಲೆ ಹೇಳಿದ ಎಲ್ಲಾ ಸಾಮಾಗ್ರಿಗಳನ್ನು ಹಾಕಿ ಮಿಕ್ಸಿಯನ್ನು ಎರಡು ಸಲ vip (ಅಥವಾ pulse) ಮಾಡಿ. ಅಥವಾ  ಅಕ್ಕಿಯನ್ನು ಹೊರತುಪಡಿಸಿ ಉಳಿದವುಗಳನ್ನು ಮಿಕ್ಸಿಯ  ಚಿಕ್ಕ ಜಾರಲ್ಲಿ ಹಾಕಿ ಕ್ರಶ್ ಮಾಡಿಕೊಂಡು ನುಣ್ಣಗೆ ಅರೆದ ಹಿಟ್ಟಿಗೆ ಸೇರಿಸಿದರೂ ಆಗುತ್ತೆ. ಒಟ್ಟಿನಲ್ಲಿ ಇವುಗಳು ಹಿಟ್ಟಿನಷ್ಟು ನುಣ್ಣಗೆ ಇರಬಾರದು.ತಿನ್ನುವಾಗ ಬಾಯಿಗೆ ಸಿಗುವಂತಿರಬೇಕು.  ನೀರು ದೋಸೆಯಂತೆಯೇ ಎರೆಯಿರಿ. ಗರಿಗರಿಯಾದಾಗ ತುಪ್ಪ ಹಾಕಿ ಚಟ್ನಿಯೊಂದಿಗೆ ಸರ್ವ್ ಮಾಡಿ.








                                 




               
 






















ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ