ಬುಧವಾರ, ಜುಲೈ 16, 2014

Bangalore Days(Malayalam Movie)


ಅಬ್ಬ.... ಎಷ್ಟೋ ದಿನಗಳ ನಂತರ ಒಂದು ಉತ್ತಮ ಮಲಯಾಳಂ ಸಿನೆಮಾ ನೋಡಿದೆ.ಈಗ  ಕೆಲವು ವರ್ಷಗಳಿಂದ ಮಾಲಿವುಡ್   ಬಾಲಿವುಡ್ಡಿನ ಕಾಪಿ ಮಾಡಲು ಹೋಗಿ ಈ ಕಡೆ ಮಲೆಯಾಳವೂ ಅಲ್ಲ, ಆ ಕಡೆ ಹಿಂದಿಯೂ ಅಲ್ಲ ಎಂಬಂತಹ ಎಡೆಬಿಡೆಂಗಿ ಸಿನೆಮಾಗಳನ್ನು ಪ್ರೇಕ್ಷಕರ ಮೇಲೆ ಹೇರುತ್ತಿತ್ತು. ಏಳೆಂಟು ವರ್ಷಗಳ ಹಿಂದೆ ಮನ:ಪೂರ್ವಕವಾಗಿ ನಗಬೇಕಾದರೆ ಮಲಯಾಳಂ ಸಿನೆಮಾ ನೋಡಬೇಕು ಎನ್ನುವಂತಿರುತ್ತಿದ್ದುವು. copy cat ಆದರೆ ತೋಪೆದ್ದು ಹೋಗಬೇಕು ಎಂಬ ಅರಿವು  ಅದಕ್ಕೆ ಆಗಿರಬೇಕು. ಈಗ ಪುನ: ಒಂದರ ಮೇಲೊಂದು ಸದಭಿರುಚಿಯ ಸಿನೆಮಾಗಳು ಬರುತ್ತಿವೆ. ಅತ್ಯುತ್ತಮ ಮಲಯಾಳಂ ಚಿತ್ರ 'ದೃಶ್ಯಂ' ಕನ್ನಡಕ್ಕೆ ರಿಮೇಕ್ ಆದುದು ನಿಮಗೆ ಗೊತ್ತಿದೆ. Bangalore Days ಎನ್ನುವ ಈ ಚಿತ್ರವೂ ರಿಮೇಕ್ ಆಗಬಹುದು. ಆದರೆ ಮಲಯಾಳಂ ಭಾಷೆಯ ಒರಿಜಿನಲ್ ಜೋಕ್ಸ್ಗಳನ್ನು ಅನುಭವಿಸಿ  ನಕ್ಕುಹಗುರಾಗಬೇಕಾದರೆ ಇದಕ್ಕೆ ಹೋಗಲೇಬೇಕು.  ಟಿಕೆಟಿಗೆ ದುಡ್ಡು ಕೊಟ್ಟು ಬಕೆಟುಗಟ್ಟಲೆ ಕಣ್ಣೀರು ಹರಿಸಿ ತಲೆನೋವು ಬರಿಸಿಕೊಂಡು ಎರೆಡೆರಡು ಕರ್ಚಿಫುಗಳನ್ನು ಒದ್ದೆ ಮಾಡಿಕೊಳ್ಳುವಂತಹ ಒಂದೇ ಒಂದು ದೃಶ್ಯ ಇದರಲ್ಲಿಲ್ಲ.

ದಿವ್ಯ,ಅರ್ಜುನ್, ಕುಟ್ಟನ್ ಎಂಬ ಮೂವರು ಕಸಿನ್ಸ್ ಬಾಲ್ಯ  ಸ್ನೇಹಿತರು, ಪ್ರಾಣ ಸ್ನೇಹಿತರು. ಅರ್ಜುನ್ character, profession,status ಇತ್ಯಾದಿಗಳ ಬಗ್ಗೆ ತಲೆಕೆಡಿಸಿಕೊಳ್ಳದ easy going ಹುಡುಗ,ದಿವ್ಯ ಉತ್ಸಾಹವೇ ಮೈ ತಳೆದು ಬಂದಂತಹ fresh from the college ಎನ್ನುವಂತಹ ಮುಗ್ಧ ಸ್ನಿಗ್ಧ ಹುಡುಗಿ. ಇನ್ನು ಕುಟ್ಟನ್ very descent,well educated ಸಾಫ್ಟ್ವೇರ್ ಎಂಜಿನೀರ್.  ಇವರಿಗೆ ಚಿಕ್ಕಂದಿನಿಂದಲೂ ಬೆಂಗಳೂರಿಗೆ ಹೋಗಿ ನೆಲೆಸಬೇಕೆನ್ನುವ ಮಹತ್ತರವಾದ ಆಸೆ. ಈ ಮೂವರೂ ದೊಡ್ಡವರಾಗಿ  ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಬೇರೆ ಬೇರೆ ವಿಧದಲ್ಲಿ ಬೆಂಗಳೂರಿಗೆ ಹೋಗಿ ಹೇಗೆ ಜೀವಿಸುತ್ತಾರೆ ಎನ್ನುವುದೇ ಕಥೆ. ಜೀವನದಲ್ಲಿ ಗಂಭೀರ ಸಮಸ್ಯೆಗಳು ಬಂದಾಗ ಒಬ್ಬರಿಗೊಬ್ಬರು ಊರುಗೋಲಾಗಿ  ನಿಂತು ಜೀವನವನ್ನು ಖುಷಿಯಿಂದ ಎದುರಿಸುವ ಬಗೆಯನ್ನು ಬಹಳ ಸುಂದರವಾಗಿ ಚಿತ್ರಿಸಲಾಗಿದೆ. ಕುಟ್ಟನ್ ಅಮ್ಮನಾಗಿ ಅಭಿನಯಿಸಿದ ಕಲ್ಪನಾ ತಮ್ಮ ಹಾವ ಭಾವ, ಮಾತು ,ಭಂಗಿಗಳಿಂದ ನಮ್ಮನ್ನು ನಗಿಸುವುದರಲ್ಲಿ ಹತ್ತು ವರ್ಷಗಳ ಹಿಂದಿನ ಅದೇ ಕಸುವನ್ನು ಉಳಿಸಿಕೊಂಡಿದ್ದಾರೆ. ಇವರು ಪ್ರತಿಷ್ಟಿತ ಮನೆತನದ (ಮಲೆಯಾಳ ಮ್ ಭಾಷೆಯಲ್ಲಿ ತರವಾಟ್ ಪೆಣ್) ಹಳ್ಳಿ ಹೆಂಗಸು. ಪೇಟೆ ಜೀವನದ ಹುಚ್ಚಿಗೆ ಬಲಿಯಾಗಿ ಜೀವನ ವಿಧಾನವನ್ನು ಬದಲಾಯಿಸಿಕೊಳ್ಳುವ ರೀತಿ ಬಹಳ ಮನೋಜ್ಞವಾಗಿದೆ. ಕಚುಗುಳಿ ಇಟ್ಟು ನಗಿಸುವಂತಹ ಸಂಭಾಷಣೆಗಳು, ದಿವ್ಯ,ಅರ್ಜುನ್, ಕುಟ್ಟನ್ ಇವರು ಪರಸ್ಪರ ಕಾಲೆಳೆಯುತ್ತಾ ತಮ್ಮೊಂದಿಗೆ ಇರುವವರಿಗೂ ಟಾಂಗ್ ಕೊಡುತ್ತಾ ಜೀವನ ಇರುವುದೇ ಹೀಗೆ ಎಂಬಂತೆ ಸಿನೆಮಾದ ಉದ್ದಕ್ಕೂ ಇರುವ ರೀತಿ ಬಹಳ ಇಷ್ಟವಾಗುತ್ತೆ.
ಸಿನೆಮಾದಲ್ಲಿನ ಸಂಭಾಷಣೆಯ ಒಂದು ಸ್ಯಾಂಪಲ್  ನೋಡಿ,
ದಿವ್ಯ ತನಗೆ  ಮದುವೆ ನಿಶ್ಚಯವಾಯಿತೆನ್ನುವುದನ್ನು ದೂರದಲ್ಲಿರುವ ಅರ್ಜುನ್ಗೆ ಸಂಭ್ರಮದಿಂದ ತಿಳಿಸುತ್ತಾಳೆ ,
"ಹೇ ... ಅಜ್ಜು ... ನನ್ನ ಮದ್ವೆ ಫಿಕ್ಸ್ ಆಯಿತು ಕಣೋ...! "
"ವಾಟ್ ...? ಮದುವೆ ...? ನಿನ್ಗೆ... ?!  ಯಾರು ಹುಡುಗ...?"
"ಸಾಫ್ಟ್ವೇರ್ ಎಂಜಿನೀರ್ ....."
"ನಿನ್ಗೆ ಅವನ ಪರಿಚಯ ಇದ್ಯಾ ...?"
"ಹೂಮ್ ..."
"ಯಾವಾಗಿಂದ ..?
"ನಿನ್ನೆಯಿಂದ ....!"
"ನಿನ್ನೆ ಪರಿಚಯ ಆದವನೊಂದಿಗೆ ಮದುವೆಯಾ...?!
"ಹೂಂ.... ಏನೀಗ.... ?ಅವ್ನು ಬೆಂಗಳೂರಲ್ಲಿದ್ದಾನೆ ....  ನಿನ್ಗೆ  ಗೊತ್ತೇನೋ... ಮದುವೆ  ಆಗಿ ಹದಿನೈದು ದಿವಸಕ್ಕೆ ನಾನು ಬೆಂಗಳೂರಿಗ್ ಹೋಗ್ತೀನಿ ... "
"ಬೆಂಗಳೂರಿಗ್ ಹೋಗೋಕೆ ಮದುವೆಯೇ ಆಗ್ಬೇಕೆನು.... ?ನೈಟ್ ಬಸ್ ಟಿಕೆಟ್ ತೆಗೆದ್ರೆ ಮುಂಜಾನೆ ಅಲ್ಲಿ ಮುಟ್ಟೋದಿಲ್ವೆ...?"

ಉಳಿದದ್ದನ್ನ ನೀವೇ ನೋಡಿ ಆನಂದಿಸಿ...  ಹಾಂ.... ಹೇಳಲು ಮರೆತೆ. ದಿವ್ಯ ಆಗಿ ನಟಿಸಿದ ಹುಡುಗಿ ಹತ್ತು ವರ್ಷಗಳ ಹಿಂದೆ 'ನಿರ್ಮಾ' ಜಾಹೀರಾತಲ್ಲಿ ಪುಟ್ಟ ಮಾಡೆಲ್  ಆಗಿದ್ದವಳು. ಆಗ ಎಷ್ಟು ಮುದ್ದು ಮುದ್ದಾಗಿದ್ದಳೋ ಈಗಲೂ  ಹಾಗೇ ಇದ್ದಾಳೆ.....

.






ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ