ನನ್ನ ಅಕ್ಕ ವೆಳ್ಳಪ್ಪಂ & stew ಮಾಡುವುದರಲ್ಲಿ expert. ನಾನೂ ಅದನ್ನು ಕಲಿತು ನಾಲ್ಕೈದು ಸಲ ಮಾಡಿದೆ. ಇವತ್ತು ಮಾಡಿದ ವೆಳ್ಳಪ್ಪಂ ಅವಳು ಮಾಡಿದ ಹಾಗೇ ಬಂತು. ತುಂಬಾ tasty.ನೀವೂ ಮಾಡಿ.
ಬೇಕಾಗುವ ಸಾಮಾಗ್ರಿಗಳು:- ವೆಳ್ಳಪ್ಪಂ-ಬೆಳ್ತಿಗೆ ಅಕ್ಕಿ ಮೂರು ಕಪ್, ತೆಂಗಿನ ತುರಿ ಒಂದು ಕಪ್, ಬೆಳ್ತಿಗೆ ಅನ್ನ ಒಂದು ಕಪ್,ಸಕ್ಕರೆ ಒಂದು ಚಮಚ,dried yeast ಎರಡು ಚಿಟಿಕೆ, ರುಚಿಗೆ ತಕ್ಕಷ್ಟು ಉಪ್ಪು. stew-ಹೂಕೋಸು, ಕ್ಯಾರೆಟ್, ಕ್ಯಾಪ್ಸಿಕಂ, ಆಲೂಗಡ್ಡೆ, ಮಂಗಳೂರು ಸೌತೆ , ಹಸಿರು ಬಟಾಣಿ (ಫ್ರೆಶ್ ಬಟಾಣಿ ಇಲ್ಲದಿದ್ದರೆ ನೆನೆಸಿ ಬೇಯಿಸಿದ್ದೂ ಆಗುತ್ತೆ )ತಲಾ ಕಾಲು ಕಪ್, ದಪ್ಪ ತೆಂಗಿನ ಹಾಲು ಎರಡು ಕಪ್, ಮೈದಾ ಒಂದು ಚಮಚ, ಉಪ್ಪು, ನೀರು ಅವಶ್ಯಕತೆಗೆ ತಕ್ಕಂತೆ,ಹಸಿರು ಮೆಣಸಿನ ಕಾಯಿ ಎರಡು, ಕರಿಬೇವಿನಸೊಪ್ಪು ಎರಡು ಎಸಳು,ವೆಳ್ಳಪ್ಪಂ ಎರೆಯವ ತವ.
ವಿಧಾನ :-ಮೊದಲು ಅನ್ನ ಮತ್ತು ತೆಂಗಿನ ತುರಿಗೆ ಸಕ್ಕರೆಯನ್ನು ಸೇರಿಸಿ ಅರೆದುಕೊಳ್ಳಿ.ಒಂದು ಘಂಟೆ ನೆನೆಸಿಟ್ಟು ತೊಳೆದ ಅಕ್ಕಿಯನ್ನು ಇದರೊಂದಿಗೆ ಹಾಕಿ ನುಣ್ಣಗೆ ಅರೆಯಿರಿ. ಸಾಧಾರಣವಾಗಿ ಮಾಡುವ ದೋಸೆ ಹಿಟ್ಟಿನ ಹದದಲ್ಲಿ ನೀರು ಸೇರಿಸಿ ಚೆನ್ನಾಗಿ ಕೈಯ್ಯಾಡಿಸಿ ಮುಚ್ಚಿ ಇಡಿ. ಮಾರನೆಯ ದಿನ ಬೆಳಗ್ಗೆ ಒಣ ಯೀಸ್ಟ್ ಎರಡು ಚಿಟಿಕೆ ತೆಗೆದುಕೊಂಡು ಸ್ವಲ್ಪ ಬಿಸಿ ಇರುವ ನೀರಲ್ಲಿ ಸರಿಯಾಗಿ ಕಲಸಿ ಹಿಟ್ಟಿನೊಂದಿಗೆ ಮಿಶ್ರ ಮಾಡಿ (ಈಗ ಮಾರ್ಕೆಟಲ್ಲಿ instant dried yeast ಸಿಗುತ್ತೆ. ಇದನ್ನು ಮೊದಲಿನ ದಿನವೇ ಹಿಟ್ಟಿಗೆ ಹಾಕಿ ಇಡುವ ಅಗತ್ಯ ಇಲ್ಲ ). ಪ್ರಾತ್ಯಕ್ಷಿಕೆ (demonstration)ಯಲ್ಲಿ ತೋರಿಸಿದಂತೆ ದೋಸೆ ಹೊಯ್ಯಿರಿ. ಹಿಟ್ಟಿಗೆ ನೀರು ಬೇಕಿದ್ದರೆ ಸೇರಿಸಿಕೊಳ್ಳಬಹುದು.
ತರಕಾರಿ ಹೋಳುಗಳನ್ನು ಎರಡನೆ ಸಲ ಹಿಂಡಿ ತೆಗೆದ ತೆಂಗಿನ ಹಾಲು ಹಾಕಿ ಬೇಯಿಸಿಕೊಳ್ಳಿ. ಇದಕ್ಕೆ ಹಸುರು ಬಟಾಣಿ ಸೇರಿಸಿ. ಉಪ್ಪು, ಅರಸಿನ ಹಾಕಿ. ಬೆಂದ ತರಕಾರಿಗೆ ದಪ್ಪ ತೆಂಗಿನ ಹಾಲು ಸೇರಿಸಿ ಮೈದಾವನ್ನು ನೀರಲ್ಲಿ ಗಂಟಿಲ್ಲದಂತೆ ಕಲಸಿ ಇದಕ್ಕೆ ಮಿಶ್ರ ಮಾಡಿ ಕುದಿಸಿ. ಈಗ ಮೆಣಸಿನ ಕಾಯಿಯನ್ನು ಹೆಚ್ಚಿ ಹಾಕಿ. ಬೇವಿನಸೊಪ್ಪನ್ನು ಮೇಲಿನಿಂದ ಹಾಕಿ. ಬೇಕಿದ್ದರೆ ಎಣ್ಣೆ ಬಿಸಿಮಾಡಿ ಒಂದೆರಡು ಕೆಂಪು ಮೆಣಸನ್ನು ಚೂರು ಮಾಡಿ ಹುರಿದು ಹಾಕಿಕೊಳ್ಳಬಹುದು. ಈ ಪದಾರ್ಥಕ್ಕೆ ಸಾಸಿವೆ ಒಗ್ಗರಣೆ ಬೇಡ.
ವೀ.ಸೂ :-ವೆಳ್ಳಪ್ಪಂ ತವ ಇಲ್ಲದಿದ್ದರೆ ಅದನ್ನು ತಂದ ಮೇಲೆಯೇ ಇದನ್ನು ಟ್ರೈ ಮಾಡಿ ಸಾದಾ ಕಾವಲಿಯಲ್ಲಿ ಇದನ್ನು ಮಾಡಲು ಸಾಧ್ಯವಿಲ್ಲ. (ಹಿಟ್ಟು ಹಾಕಿ ಕೈಯ್ಯಲ್ಲಿ ತಿರುಗಿಸಿದಾಗ ಮಾತ್ರ ಮಧ್ಯದಲ್ಲಿ ಉಬ್ಬಿ ಬದಿಗಳಲ್ಲಿ ಗರಿಗರಿಯಾಗಿ ಬರುತ್ತೆ).
ಬೇಕಾಗುವ ಸಾಮಾಗ್ರಿಗಳು:- ವೆಳ್ಳಪ್ಪಂ-ಬೆಳ್ತಿಗೆ ಅಕ್ಕಿ ಮೂರು ಕಪ್, ತೆಂಗಿನ ತುರಿ ಒಂದು ಕಪ್, ಬೆಳ್ತಿಗೆ ಅನ್ನ ಒಂದು ಕಪ್,ಸಕ್ಕರೆ ಒಂದು ಚಮಚ,dried yeast ಎರಡು ಚಿಟಿಕೆ, ರುಚಿಗೆ ತಕ್ಕಷ್ಟು ಉಪ್ಪು. stew-ಹೂಕೋಸು, ಕ್ಯಾರೆಟ್, ಕ್ಯಾಪ್ಸಿಕಂ, ಆಲೂಗಡ್ಡೆ, ಮಂಗಳೂರು ಸೌತೆ , ಹಸಿರು ಬಟಾಣಿ (ಫ್ರೆಶ್ ಬಟಾಣಿ ಇಲ್ಲದಿದ್ದರೆ ನೆನೆಸಿ ಬೇಯಿಸಿದ್ದೂ ಆಗುತ್ತೆ )ತಲಾ ಕಾಲು ಕಪ್, ದಪ್ಪ ತೆಂಗಿನ ಹಾಲು ಎರಡು ಕಪ್, ಮೈದಾ ಒಂದು ಚಮಚ, ಉಪ್ಪು, ನೀರು ಅವಶ್ಯಕತೆಗೆ ತಕ್ಕಂತೆ,ಹಸಿರು ಮೆಣಸಿನ ಕಾಯಿ ಎರಡು, ಕರಿಬೇವಿನಸೊಪ್ಪು ಎರಡು ಎಸಳು,ವೆಳ್ಳಪ್ಪಂ ಎರೆಯವ ತವ.
ವಿಧಾನ :-ಮೊದಲು ಅನ್ನ ಮತ್ತು ತೆಂಗಿನ ತುರಿಗೆ ಸಕ್ಕರೆಯನ್ನು ಸೇರಿಸಿ ಅರೆದುಕೊಳ್ಳಿ.ಒಂದು ಘಂಟೆ ನೆನೆಸಿಟ್ಟು ತೊಳೆದ ಅಕ್ಕಿಯನ್ನು ಇದರೊಂದಿಗೆ ಹಾಕಿ ನುಣ್ಣಗೆ ಅರೆಯಿರಿ. ಸಾಧಾರಣವಾಗಿ ಮಾಡುವ ದೋಸೆ ಹಿಟ್ಟಿನ ಹದದಲ್ಲಿ ನೀರು ಸೇರಿಸಿ ಚೆನ್ನಾಗಿ ಕೈಯ್ಯಾಡಿಸಿ ಮುಚ್ಚಿ ಇಡಿ. ಮಾರನೆಯ ದಿನ ಬೆಳಗ್ಗೆ ಒಣ ಯೀಸ್ಟ್ ಎರಡು ಚಿಟಿಕೆ ತೆಗೆದುಕೊಂಡು ಸ್ವಲ್ಪ ಬಿಸಿ ಇರುವ ನೀರಲ್ಲಿ ಸರಿಯಾಗಿ ಕಲಸಿ ಹಿಟ್ಟಿನೊಂದಿಗೆ ಮಿಶ್ರ ಮಾಡಿ (ಈಗ ಮಾರ್ಕೆಟಲ್ಲಿ instant dried yeast ಸಿಗುತ್ತೆ. ಇದನ್ನು ಮೊದಲಿನ ದಿನವೇ ಹಿಟ್ಟಿಗೆ ಹಾಕಿ ಇಡುವ ಅಗತ್ಯ ಇಲ್ಲ ). ಪ್ರಾತ್ಯಕ್ಷಿಕೆ (demonstration)ಯಲ್ಲಿ ತೋರಿಸಿದಂತೆ ದೋಸೆ ಹೊಯ್ಯಿರಿ. ಹಿಟ್ಟಿಗೆ ನೀರು ಬೇಕಿದ್ದರೆ ಸೇರಿಸಿಕೊಳ್ಳಬಹುದು.
ತರಕಾರಿ ಹೋಳುಗಳನ್ನು ಎರಡನೆ ಸಲ ಹಿಂಡಿ ತೆಗೆದ ತೆಂಗಿನ ಹಾಲು ಹಾಕಿ ಬೇಯಿಸಿಕೊಳ್ಳಿ. ಇದಕ್ಕೆ ಹಸುರು ಬಟಾಣಿ ಸೇರಿಸಿ. ಉಪ್ಪು, ಅರಸಿನ ಹಾಕಿ. ಬೆಂದ ತರಕಾರಿಗೆ ದಪ್ಪ ತೆಂಗಿನ ಹಾಲು ಸೇರಿಸಿ ಮೈದಾವನ್ನು ನೀರಲ್ಲಿ ಗಂಟಿಲ್ಲದಂತೆ ಕಲಸಿ ಇದಕ್ಕೆ ಮಿಶ್ರ ಮಾಡಿ ಕುದಿಸಿ. ಈಗ ಮೆಣಸಿನ ಕಾಯಿಯನ್ನು ಹೆಚ್ಚಿ ಹಾಕಿ. ಬೇವಿನಸೊಪ್ಪನ್ನು ಮೇಲಿನಿಂದ ಹಾಕಿ. ಬೇಕಿದ್ದರೆ ಎಣ್ಣೆ ಬಿಸಿಮಾಡಿ ಒಂದೆರಡು ಕೆಂಪು ಮೆಣಸನ್ನು ಚೂರು ಮಾಡಿ ಹುರಿದು ಹಾಕಿಕೊಳ್ಳಬಹುದು. ಈ ಪದಾರ್ಥಕ್ಕೆ ಸಾಸಿವೆ ಒಗ್ಗರಣೆ ಬೇಡ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ