ದೃಶ್ಯ- ಒಂದು
ಮಗಳು- "ಅಮ್ಮಾ...,ಇವತ್ತಿನ ಅಡುಗೆಯ ಸ್ಮೆಲ್ಲೂ ಬಹಳ ಚೆನ್ನಾಗಿದೆ... ಏನೋ ಒಂಥರಾ ಡಿಫೆರೆಂಟ್ ಆಗಿದೆ...."
ಮಗ - "ಏ ಬಿಡೇ....,ಒಂಥರಾನೂ ಇಲ್ಲಾ... ಎರಡು ಥರಾನೂ ಇಲ್ಲಾ.... ಯಾವಾಗಲೂ ಪದಾರ್ಥ ಅಲ್ಪ ಸ್ವಲ್ಪ ತಳ ಹಿಡಿದ ಸ್ಮೆಲ್ಲೂ... ಅದನ್ನ ಸರಿಮಾಡೋಕೆ ಅಮ್ಮ ಒಂದಷ್ಟು ನೀರು ಸುರಿದಿರೋಳು.... ಇವತ್ತು ಎಲ್ಲಾ ನಾರ್ಮಲ್ ಆಗೇ ಇದೆ ಅಷ್ಟೇ...."
ಅಪ್ಪ-"ಮಕ್ಕಳೇ..., ನಿನ್ನೆಯಿಂದ ಇಂಟರ್ನೆಟ್ ಇಲ್ವಲ್ಲಾ... ಅದಿಕ್ಕೇ ಅಡುಗೆ ಸಾಫ಼ೋ... ಸಾಫ್..... ನಾವು ಸೇಫ಼ೊ.... ಸೇಫ್!"
ದೃಶ್ಯ -ಎರಡು
ಮಗ-"ಅಮ್ಮಾ..., ನೀನು ಚಕ್ಕುಲಿ ಮಾಡದೆ ಯಾವ ಕಾಲವಾಯ್ತೋ....? ಇವತ್ತು ಮಾಡ್ತಿಯಾ...?"
ಅಮ್ಮ-"ಖಂಡಿತಾ ಮಗಾ..., ಈಗ ಹೇಗೂ ಇಂಟರ್ನೆಟ್ ವರ್ಕ್ ಆಗ್ತಾ ಇಲ್ವಲ್ಲಾ...? ಮಾಡಲು 'ಬೇರೇನೂ ಕೆಲ್ಸಾ'ನೂ ಇಲ್ಲಾ.... "
ಮಗಳು- "ಹಾಗಾದ್ರೆ ಒಬ್ಬಟ್ಟೂ ಮಾಡ್ತೀಯಾ...?"
ಅಮ್ಮ -"ಛೆ..., ಛೆ..., ಅದೆಲ್ಲಾ ಈಗ ಯಾಕೆ ?ಅದನ್ನ ಮಾಡಿ ನನ್ನ ಬ್ಲಾಗಿಗೆ ಹಾಕೋಣ ಅಂದ್ರೆ ಇಂಟರ್ನೆಟ್ಟೂ ಇಲ್ಲಾ.... ಕ್ಯಾಮರಾನೂ ಕೈ ಕೊಟ್ಟಿದೆ..., ಕ್ಯಾಮರಾ ರಿಪೇರಿ ಆದಮೇಲೆ ನೋಡೋಣ..."
ಮಗಳು- "ಓ..., ನಿನ್ನ ಮಗನ ಡಿಮ್ಯಾಂಡಿಗೆ ಒ.ಕೆ. ಅಂದ್ಯಲ್ಲಾ... ನಾನು ಹೇಳಿದ್ದಕ್ಕೆ ಮಾತ್ರ ಆ ಕಾರಣ.... ಈ ಕಾರಣ....?"
ಅಮ್ಮ - " ಹಾಗಲ್ಲಾ ....,ಚಕ್ಕುಲಿಯಾದ್ರೆ ತುಂಬಾ ಕಾಮನ್ನೂ.... ಬ್ಲಾಗಿಗೆ ಹಾಕೊವಂತಾ ವಿಶೇಷತೆ ಏನೂ ಇಲ್ಲಾ... ಅವನು
ಹೇಳಿದ್ದಕ್ಕೆ ಏನೋ ಒಂದು ಮಾಡ್ತಿದ್ದೀನಿ ಅಷ್ಟೆ...."
ದೃಶ್ಯ-ಮೂರು
ಗಂಡ-"ಲೇ..., ನನ್ನ ಕಲೀಗ್ಸೂ ಅವರ ಫ್ಯಾಮಿಲಿ ಈ ವೀಕೆಂಡ್ ನಮ್ಮ ಮನೆಗೆ ಬರ್ತಿದ್ದಾರಂತೆ ಕಣೇ.... "
ಹೆಂಡತಿ -"ಓ..., ಹೌದಾ ...., ರೀ ...., ವೀಕೆಂಡಿಗೆ ಬೇಡಾರೀ...., ನಾಳೆ ಸಂಜೇನೇ ಬರೋಕೆ ಹೇಳ್ರೀ.... ,"
ಗಂಡ- "ಯಾಕೆ...?"
ಹೆಂಡತಿ- "ವೀಕೆಂಡಿಗೆ ಇಂಟರ್ನೆಟ್ ಸರಿಹೋಗುತ್ತಂತೆ...."
ದೃಶ್ಯ -ನಾಲ್ಕು
ಅಮ್ಮ- "ಮಗಾ..., ಈವತ್ತು ಸಂಜೆ ಎಲ್ಲಾದರೂ ಹೊರಗಡೆ ಹೋಗೋಣ್ವಾ...?"
ಮಗ- (ಕಣ್ಣರಳಿಸುತ್ತಾ) "ಒಹ್...., ಅಮ್ಮಾ..., ಇಂತಹ ಮಾತುಗಳನ್ನ ಕೇಳದೆ ಎಷ್ಟು ದಿವಸಗಳಾಯ್ತೋ....?"
ಅಮ್ಮ-"ಹೂಂ ಕಣೋ ..., ಸುಮಾ ಆಂಟಿ ಮನೆಗೆ ಹೋಗೋಣಾ .... ?"
ಮಗ -"ಅದೇನು ಪರ್ಟಿಕುಲರ್ ಆಗಿ ಅವರ ಮನೆಗೇ....?"
ಅಮ್ಮ -"ಅವರಲ್ಲಿ ಇಂಟರ್ನೆಟ್ ವರ್ಕ್ ಆಗುತ್ತಂತೆ..., ನಾನು ಫೇಸ್ ಬುಕ್ ಚೆಕ್ ಮಾಡ್ಬೇಕು.... ನೀನು ಅವರ ನಾಯಿಯೊಂದಿಗೆ ಆಡ್ತಾ ಇರು!"
*******************
ಪ್ರಿಯ ಓದುಗ ಮಿತ್ರರೇ..., ಸತ್ಯ ಹೇಳಲೇ ..... (ಬೆಚ್ಚಿ ಬಿದ್ದೀರಾ),ಮೇಲಿನ ದೃಶ್ಯಗಳಲ್ಲಿನ ಹೆಂಡತಿ ಮತ್ತು ಅಮ್ಮ ಇಬ್ಬರೂ ನಾನೇ !
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ