ಶುಕ್ರವಾರ, ಸೆಪ್ಟೆಂಬರ್ 12, 2014

ಹೆಸ್ರು ಬೇಳೆ ಉಂಡೆ

ಆಗ ಮಧ್ಯಾಹ್ನ ಟಿ. ವಿ. ಮುಂದೆ  ಕೂತಿದ್ದಾಗ ಯಾವೊದೋ ಒಂದು ಚ್ಯಾನಲ್ ಒತ್ತಿದ್ದೆ. ಅದೇನೋ ರಸಪಾಕ ಅನ್ನೋ ಕಾರ್ಯಕ್ರಮ ಬರ್ತಾ ಇತ್ತು. ನೋಡ್ತಾ ಇದ್ದಂತೆ  ಅದ್ರಲ್ಲಿ ತೋರಿಸ್ತಿದ್ದ ಸಿಹಿತಿಂಡಿ ಚೆನ್ನಾಗಿರಬಹುದು ಅನ್ನಿಸಿತು. ಮಾಡಿದೆ. ಸಕತ್ತಾಗಿತ್ತು. ಆ ಕಾರ್ಯಕ್ರಮಾನ ನೀವೂ ನೋಡಿದ್ದಿದ್ರೆ ಇದನ್ನ ಮರೆತುಬಿಡಿ. ಇಲ್ಲಾಂದ್ರೆ ಮಾಡಿಬಿಡಿ.

ಸಾಮಾಗ್ರಿಗಳು:- ಹೆಸ್ರು ಬೇಳೆ -1 ಕಪ್
                          ಸಕ್ಕರೆ -3/4 ಕಪ್
                          ತುಪ್ಪ -1/4  ಕಪ್
                           ಏಲಕ್ಕಿ- ಚಿಟಿಕೆ
                           ಲವಂಗ-3
ವಿಧಾನ:- ಬಾಣಲೆಯನ್ನು ಚಿಕ್ಕ ಬೆಂಕಿಯಲ್ಲಿ ಬಿಸಿಗಿಟ್ಟು ಹೆಸ್ರು ಬೇಳೆಯನ್ನು ಖಮ್ಮಗೆ ಹುರಿಯಿರಿ(ಬೇಳೆಯ ಬಣ್ಣ ನಸು ಕಂದು ಬಣ್ಣಕ್ಕೆ ಬರಬೇಕು). ಇದರ  ಬಿಸಿ ಆರಿದ ಮೇಲೆ ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಆಮೇಲೆ ಸಕ್ಕರೆಯನ್ನೂ ಪುಡಿಮಾಡಿ(ಏಲಕ್ಕಿ, ಲವಂಗಗಳನ್ನೂ ಇದರೊಂದಿಗೆ ಹಾಕಿಕೊಳ್ಳಿ). ಎರಡೂ ಪುಡಿಗಳನ್ನು ಒಟ್ಟಿಗೆ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಬಿಸಿಮಾಡಿದ ತುಪ್ಪವನ್ನು ಎರೆದು ಉಂಡೆ ಕಟ್ಟಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ