ನನ್ನ ಮಗಳು ಅವಳ ಸ್ನೇಹಿತೆಯ ಮನೆಯಲ್ಲಿ ತಿಂದ ಪಲ್ಯವನ್ನು ತುಂಬಾ ಹೊಗಳಿದ್ದಳು. ರೆಸಿಪಿಯನ್ನು ಕೇಳಿ ನಾನೂ ಮಾಡಿ ನೋಡಿದೆ. ಅವಳು ಹೇಳಿದ್ದುದು ಸತ್ಯವಾಗಿತ್ತು. ನಿಮಗೂ ತಿಳಿಯಲಿ ಎಂದು ಬರೆಯುತ್ತಿದ್ದೇನೆ. ತಯಾರಿಸಿ ತಿಂದು ಖುಷಿ ಪಡಿ.
ಸಾಮಾಗ್ರಿಗಳು:-1.ತೆಳ್ಳಗೆ ಹೆಚ್ಚಿದ ಸುವರ್ಣ ಗೆಡ್ಡೆ ಹೋಳುಗಳು ಎರಡು ಕಪ್
2.ನೆನೆಸಿ ಬೇಯಿಸಿದ ಕಡ್ಲೆ ಅರ್ಧ ಕಪ್
3.ಈರುಳ್ಳಿ ಚೂರು ನಾಲ್ಕು ಚಮಚ, ಬೆಳ್ಳುಳ್ಳಿ ಚೂರು ಎರಡು ಚಮಚ
4.ತೆಂಗಿನ ತುರಿ ನಾಲ್ಕು ಚಮಚ
5.ಒಗ್ಗರಣೆಗೆ-ಎಣ್ಣೆ ಎರಡು ಚಮಚ, ಕೆಂಪು ಮೆಣಸು, ಉದ್ದಿನಬೇಳೆ, ಸಾಸಿವೆ, ಕರಿಬೇವಿನ ಸೊಪ್ಪು
6.ರುಚಿಗೆ ತಕ್ಕಷ್ಟು ಉಪ್ಪು,ಅರಸಿನ,ಬೆಲ್ಲ. ಖಾರದ ಪುಡಿ.
ವಿಧಾನ :-ಬಾಣಲೆಯನ್ನು ಬಿಸಿಗಿಡಿ. ಒಗ್ಗರಣೆ ಹಾಕಿ ಈರುಳ್ಳಿ, ಬೆಳ್ಳುಳ್ಳಿ, ತೆಂಗಿನತುರಿ ಫ್ರೈ ಮಾಡಿ. ನಸುಕಂದುಬಣ್ಣಬಂದಾಗ
ತರಕಾರಿ ಹಾಗೂ ಬೇಯಿಸಿದ ಕಡ್ಲೆಯನ್ನು ಹಾಕಿ(ಕಡ್ಲೆ ಯನ್ನು ಮೊದಲೇ ನಾಲ್ಕು ವಿಸಿಲಲ್ಲಿಬೇಯಿಸಿಕೊಳ್ಳಿ).ಉಪ್ಪು,
ಅರಸಿನ, ಬೆಲ್ಲ, ಮೆಣಸಿನ ಪುಡಿ, ಸುವರ್ಣ ಹೋಳುಗಳು ಬೇಯಲುಬೇಕಾದಷ್ಟುನೀರು ಹಾಕಿ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ