ಅಂದೊಮ್ಮೆ ಲಲಿತೆಯ ದೊಡ್ಡಮ್ಮ ವೆಂಕಮ್ಮಜ್ಜಿ ಮನೆಗೆ ಬಂದಿದ್ದಾಗ ಗಾಯತ್ರಿಯ ಎದುರೇ ಲಲಿತೆಯ ಬಳಿ ಹೇಳಿದ್ದರು,
"ಈ ಕೂಸಿಂಗೆ ಗಂಡನ ಎಲ್ಲಿಂದ ಹುಡ್ಕಿ ತತ್ತಿ ಮಾರಾಯ್ತಿ...?" ಅಜ್ಜಿಯ ಮಾತು ಕೇಳಿ ಕೋಪ ಉಕ್ಕಿ ಬಂದಿದ್ರೂ ಗಾಯತ್ರಿ ನಗುನಗುತ್ತಲೇ ಉತ್ತರ ಕೊಟ್ಟಿದ್ದಳು,
"ಅಜ್ಜೀ..., ನಿಂಗೋ ಎನಿಗೆ ಗಂಡನ ಹುಡ್ಕುವ ಕಷ್ಟ ತಕ್ಕೊಂಬದು ಬೇಡಾ...., ಆನು ಮದುವೆಯೇ ಅಪ್ಪಲಿಲ್ಲೆ ಹೇಳಿ ತೀರ್ಮಾನಿಸಿದ್ದೆ..." ಆದರೆ ಅವಳು ರೂಮಿಗೆ ಹೋಗಿ ಮನದಣಿಯೆ ಅತ್ತಿದ್ದಳು. ಹೀಗೆ ಆಕೆ ಬೇಸರಿಸಿಕೊಂಡಾಗಲೆಲ್ಲಾ ಆಕೆಯ ನೆರವಿಗೆ ಧಾವಿಸುವುದು ಹರಿಯೇ.
"ಗಾತೀ...,ಕಾಮೆಂಟ್ಸ್ಗವಕ್ಕೆ ಹೆದರ್ಲಾಗ ನೋಡು...,ಗಟ್ಟಿಯಾಗೇಕು ನೀನು....,ಅಂಡೆ ಬಾಯಿ ಮುಚ್ಚಿದ್ರೂ ದೊಂಡೆ(ಗಂಟಲು) ಬಾಯಿ ಮುಚ್ಚಲೆಡಿಯ ಹೇಳುವದ್ರ ನೆನಪು ಮಾಡ್ಕೋ... ನೀನು ಇನ್ನೂ ಸುಂದರಿಯಾಗಿರ್ತಿದ್ರೆ ಬೇರೆ ಯಾವುದೋ ರೀತಿಲಿ ಟೀಕೆ ಮಾಡ್ತಿತವು... ಸಮಾಜವ ತೃಪ್ತಿ ಪಡ್ಸಲೆ ಯಾರಿಂದಲೂ ಸಾಧ್ಯ ಇಲ್ಲೆ.... ನಿನ್ನ ಹೀಯಾಳ್ಸುವವೇ ಮೂಗಿಲ್ಲಿ ಬೆರಳು ಮಡುಗೇಕು. ಆ ರೀತಿ ಓದಿ ಮೇಲೆ ಬಾ.... ಉಳಿದದ್ರ ಬಗ್ಗೆ ತಲೆ ಕೆಡ್ಸಿಕೊಳ್ಳೆಡ.... ಸರಿಯಾ...?"
ಅಣ್ಣನಿಗೆ ತನ್ನ ಬಗ್ಗೆ ಇರುವ ಕಾಳಜಿ ನೋಡಿ ತಂಗಿಗೆ ತುಂಬಾ ಹೆಮ್ಮೆಯೆನಿಸುತ್ತಿತ್ತು. ಆತ ತನ್ನ ಪ್ರತಿಯೊಂದು ಆಸೆಗೂ ಸ್ಪಂದಿಸುವ ರೀತಿ ನೋಡಿದಾಗಲೆಲ್ಲಾ ಆಕೆ ಹೇಳುವುದಿತ್ತು,"ಅಣ್ಣಾ..., ನೀನು ತುಂಬಾ ಗ್ರೇಟ್".
ಗಾಯತ್ರಿ ಎಂಟನೆ ತರಗತಿಯಲ್ಲಿರುವಾಗ ಒಂದು ಘಟನೆ ನಡೆದಿತ್ತು. ಕನ್ನಡ ಕ್ಲಾಸಲ್ಲಿ ಕೇದಗೆ ಬನದ ಬಗ್ಗೆ ಪಾಠ ಮಾಡುತ್ತಾ..."ಯಾರ ಮನೆಯಲ್ಲಿ ಕೇದಿಗೆ ಇದೆಯೋ ಅವರು ಅದರ ಎಲೆ, ಹೂವು ಎರಡನ್ನೂ ತನ್ನಿ"ಎಂದಿದ್ದರು. ಪಾಪ,ಪೇಟೆಯ ಮಕ್ಕಳಿಗೆ ಕೇದಿಗೆ ನೋಡಿಯೇ ಗೊತ್ತಿಲ್ಲ. ಇನ್ನು ತರುವುದು ಎಲ್ಲಿಂದ..?ಆದರೆ ಇವರಿಬ್ಬರು ಹಳ್ಳಿಯಿಂದ ಪೇಟೆ ಶಾಲೆಗೆ ಹೋಗುವ ಮಕ್ಕಳು. ಅದು ತಮ್ಮ ತೋಟದಲ್ಲಿದೆಯೆಂದು ಗಾಯತ್ರಿಗೆ ಗೊತ್ತಿತ್ತು. ಸಂಜೆ ಶಾಲೆಯಿಂದ ಮರಳುತ್ತಿರುವಾಗಲೇ ಅವಳು ಹರಿಯೊಡನೆ ಅದೊಂದು ದೊಡ್ಡ ವಿಷಯವೆಂಬಂತೆ ಹೇಳಿದ್ದಳು. ಹರಿ ಬಹಳ ಹಗುರವಾಗಿ ಹೇಳಿದ್ದ,
"ಓ..., ಅಷ್ಟೇಯಾ...ನಿನ್ನೆ ಮೂಲೆ ತೋಟದ ಪಂಪ್ ಶೆಡ್ಡಿನ ಬಳಿ ಇಪ್ಪ ಕೇದಿಗೆ ಬನಲ್ಲಿ ಎರಡು ಕುಂಡಿಗೆ(ಕೇದಿಗೆ ಹೂವಿನ ಗೊಂಚಲು) ನೋಡಿತ್ತಿದ್ದೆ. ನಾಳೆ ಹೇಂಗೂ ನಾರಾಯಣಗುರು ಜಯಂತಿಗೆ ರಜಾ ಇದ್ದಲ್ದಾ...?ಬೆಳಿಗ್ಗೆಯೇ ತೋಟಕ್ಕೆ ಹೋಗಿ ತಕ್ಕೊಂಡು ಬತ್ತೆ. ಅಮ್ಮನ ಹತ್ರ ಮಾತ್ರ ಹೇಳೇಡ. ಕೇದಿಗೆ ಬನದ ಸುತ್ತ ಹಾವುಗೋ ಸುತ್ತಿಗೊಂಡು ಇರ್ತು, ಹೋಗೋದು ಬೇಡ ಹೇಳುಗು."
ಮಾರನೆ ದಿನ ಬೆಳ್ಳಂಬೆಳಗ್ಗೆ ಮಂಜಿನ ಹೊಗೆಯ ನಡುವೆಯೇ ತೋಟಕ್ಕೆ ಹೋಗಿ ಕೇದಿಗೆ ಕೊಯ್ಯಲು ಅಣಿಯಾಗಿದ್ದ. ಮುಳ್ಳಿನ ಚಾಪೆಯಂತಿರುವ ಕೇದಿಗೆ ಪೊದೆಯಿಂದ ಅದರ ಹೂ ಕೊಯ್ಯುವುದು ಅಷ್ಟು ಸುಲಭದ ಕೆಲಸವಲ್ಲ. ಹರಿ ಕಾಲಿಗೆ ಬೂಟ್ಸ್ ಹಾಕಿಕೊಂಡು ಮೈಗೆಲ್ಲಾ ಗೋಣಿಚೀಲ ಸುತ್ತಿಕೊಂಡು ತಲೆಗೆ ಹ್ಯಾಟ್ ಇಟ್ಟುಕೊಂಡಿದ್ದ. ಕೈಯ್ಯಲ್ಲೊಂದು ಉದ್ದದ ಕೊಕ್ಕೆಯಂತಹ ಕೋಲನ್ನು ಹಿಡಿದುಕೊಂಡು ಜಗರೂಕತೆಯಿಂದ ಪೊದೆಯೊಳಕ್ಕೆ ಅಡಿ ಇಟ್ಟು ಅದರ ಮಧ್ಯದಲ್ಲಿರುವ ಎತ್ತರದ ಗಿಡದಿಂದ ಕೇದಿಗೆ ಕುಂಡಿಗೆಯನ್ನು ತನ್ನೆಡೆಗೆ ಬಾಗಿಸಿ ಕೊಯಿದಿದ್ದ. ಇನ್ನೂ ಎಲೆ ಕೊಯ್ಯುವುದು ಬಾಕಿ ಇತ್ತಲ್ಲ? ಗಟ್ಟಿಯಾದ ಉದ್ದದ ಮುಳ್ಳಿನ ಎಲೆ ಕೊಯ್ಯುವಷ್ಟರಲ್ಲಿ ಅವನ ಗೋಣಿ ಕವಚ ಹರಿದು ಮೈಮೇಲೆ ತರಚು ಗಾಯಗಳಾಗಿದ್ದುವು. ಗಾಯತ್ರಿ ಅಮ್ಮನಿಗೆ ಗೊತ್ತಾಗದಂತೆ ಈರುಳ್ಳಿ ಎಣ್ಣೆ ಕಾಯಿಸಿ ಅಣ್ಣನ ಗಾಯಕ್ಕೆ ಹಚ್ಚಿದ್ದಳು. ತನಗಾಗಿ ಎಂತಹ ಕಷ್ಟವನ್ನೂ ತಡೆದುಕೊಳ್ಳಬಲ್ಲ ಅಣ್ಣನೆಂದರೆ ಅವಳಿಗೆ ರೋಲ್ ಮಾಡೆಲ್.
ಈಗ ಗಾಯತ್ರಿ ಮತ್ತು ಹರಿ ಒಂದೇ ಕಾಲೇಜಿನಲ್ಲಿ ಓದುತ್ತಿದ್ದಾರೆ. ಹರಿಯ ವಾಸ ಹಾಸ್ಟೆಲಲ್ಲಿ. ಗಾಯತ್ರಿ ಪರಿಚಿತರೋರ್ವರ ಮನೆಯಲ್ಲಿ ಪೇಯಿಂಗ್ ಗೆಸ್ಟ್ ಆಗಿ ಇದ್ದಾಳೆ. ವಾರದ ಕೊನೆಯಲ್ಲಿ ಇಬ್ಬರೂ ಒಂದೆಡೆ ಸೇರಿ ತಮ್ಮ ತಮ್ಮ ಪಾಠಗಳು, ಸ್ನೇಹಿತರು, ಶಿಕ್ಷಕರು ಹೀಗೆ ಪ್ರತಿಯೊಂದು ವಿಷಯದ ಬಗೆಗೂ ವಿಚಾರ ವಿನಿಮಯ ಮಾಡಿಕೊಳ್ಳುವರು. ಗಾಯತ್ರಿಗೆ ಪ್ರತಿಭೆ ಹುಟ್ಟಿನಿಂದಲೇ ಬಳುವಳಿಯಾಗಿ ಬಂದಿದ್ದರೆ ಹರಿ ಪ್ರಯತ್ನ ಪಟ್ಟು ಪ್ರತಿಭೆಯನ್ನು ತನ್ನದಾಗಿಸಿಕೊಳ್ಳುತ್ತಿದ್ದ. ಮಕ್ಕಳಿಗಿಬ್ಬರಿಗೂ ವೈದ್ಯಕೀಯ ಶಿಕ್ಷಣದ ಕಡೆಗೆ ಒಲವಿರುವುದನ್ನು ಅರಿತಿದ್ದ ಗೋಪಾಲ ಸಿ.ಇ.ಟಿ. ಪರೀಕ್ಷೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇಬ್ಬರನ್ನೂ ಅತ್ಯಂತ ಹೆಸರುವಾಸಿಯೂ ದುಬಾರಿಯೂ ಆದ ಕೋಚಿಂಗ್ ಸಂಸ್ಥೆಗೆ ಸೇರಿಸಿದ್ದ. ಹರಿ ಈ ವರ್ಷ ವೃತ್ತಿ ಶಿಕ್ಷಣ ಪರೀಕ್ಷೆಗೆ ಹಾಜರಾಗಲಿದ್ದರೆ ಗಾಯತ್ರಿ ಮುಂದಿನ ವರ್ಷ ಬರೆಯಲಿದ್ದಾಳೆ. ಅವರಿಬ್ಬರ ಸಿಟಿ ಜೀವನದ ವೆಚ್ಚ, ಶಿಕ್ಷಣದ ಖರ್ಚು ಎರಡೂ ಸೇರಿದಾಗ ಜೇಬಿಗೆ ಬಹು ಭಾರ ಎಂದು ತೋರಿದರೂ ಅದರ ಬಿಸಿ ಮಕ್ಕಳಿಗೆ ತಾಗದಂತೆ ಲಲಿತ ಗೋಪಾಲರು ತಮ್ಮ ಖರ್ಚುಗಳನ್ನು, ಇನ್ನಷ್ಟು ಸೂಕ್ಷ್ಮಗೊಳಿಸಿಕೊಂಡರು.
ಇವತ್ತಿಗೆ ಇಷ್ಟೇ.....

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ