ಅಮ್ಮ ಅಪ್ಪನ ನಡುವಿನ ಬಾಂಧವ್ಯ ಎಷ್ಟು ಆಳವಾದುದು ಎಂಬುದು ಆತನಿಗೆ ಚೆನ್ನಾಗಿ ಗೊತ್ತಿತ್ತು. ಆದುದರಿಂದಲೇ ತನಗಾದ ಆಯಾಸವನ್ನು ಲೆಕ್ಕಿಸದೆ ಪುನ್ಹ ಹೊರಡಲು ತಯಾರಾಗಿದ್ದ. ಇಂತಹ ಮಗನನ್ನು ಹೆತ್ತ ತಾಯಿಯಲ್ಲವೇ ಅವಳು...? ಕರುಳರಿಯದೇ ತನ್ನ ಕುಡಿಯ ಕಷ್ಟ...?
"ಮಗಾ..., ಮೊದಲು ಒಂಚೂರು ಊಟ ಮಾಡು. ಬೆಳಗ್ಗಿಂದ ಹನಿ ನೀರು ಮುಟ್ಟಿದ್ದಿಲ್ಲೆ....ಎಷ್ಟು ಬಚ್ಚುತ್ತೋ ಏನೋ...?"ಎಂದದ್ದೂ ಅಲ್ಲದೆ ತನ್ನೊಳಗಿನ ಬಡಬಾಗ್ನಿಯನ್ನು ತೋರಗೊಡದೆ ಒತ್ತಾಯದಿಂದ ಮಗನ ಹೊಟ್ಟೆ ತುಂಬಿಸಿಯೇ ಬಿಟ್ಟಳು. ಆಳುಗಳಿಬ್ಬರನ್ನು ಮನೆಯಲ್ಲೇ ಇರುವಂತೆ ಹೇಳಿ ಇಬ್ಬರೂ ಆಸ್ಪತ್ರೆಯ ಹಾದಿ ಹಿಡಿದರು.ಹತ್ತು ದಿನ ಲಲಿತೆ ಗಂಡನ ಪಕ್ಕದಿಂದ ಅಲುಗಾಡದೆ ಶುಶ್ರೂಷೆ ಮಾಡಿದಳು. ಆಪರೇಶನ್ ಆದ ಮಾರನೆಯ ದಿನವೇ ಲಲಿತೆಯ ತಮ್ಮ ಮೂರ್ತಿ ಪತ್ನೀ ಸಮೇತನಾಗಿ ಬಂದು ಅಕ್ಕನೊಂದಿಗೆ ನಿಂತಿದ್ದ. ತಮ್ಮನ ಒಡನಾಟದಿಂದ ಲಲಿತೆಯ ಮನಸ್ಸಿನ ಭಾರವೆಷ್ಟೋ ಇಳಿಯಿತು. ಹರಿ ತೋಟದ ಉಸ್ತುವಾರಿ ವಹಿಸಿಕೊಂಡೇ ಆಸ್ಪತ್ರೆಗೂ ಓಡಾಡಿದ. ಮೂರ್ತಿಯ ಹೆಂಡತಿ ಗುಂಡಿಗದ್ದೆಯಲ್ಲಿ ಗಾಯತ್ರಿಗೆ ಜೊತೆಯಾದಳು. ಅತ್ತೆಯ ಲವಲವಿಕೆಯ ಚುರುಕು ಒಡನಾಟದಿಂದಾಗಿ ಮಂಕು ಹಿಡಿದಂತಾಗಿದ್ದ ಗಾಯತ್ರಿ ಚೇತರಿಸಿಕೊಂಡಳು. ಒಂದು ದಿನ ಲಲಿತೆಯ ಒಪ್ಪಿಗೆ ಪಡೆದು ಮೂರ್ತಿ ಗುಂಡಿಗದ್ದೆಗೆ ಹೋದ. ಸಂಜೆ ಹೊತ್ತಿಗೆ ಆತ ಹರಿಯೊಂದಿಗೆ ತೋಟದಲ್ಲಿ ಅಡ್ಡಾಡ್ತಾ ಇರುವಾಗ ಮಾತು ಮಕ್ಕಳಿಬ್ಬರೂ ಮೊನ್ನೆ ಮೊನ್ನೆ ಬರೆದ ಪ್ರವೇಶ ಪರೀಕ್ಷೆಯತ್ತ ಹೊರಳಿತು.
"ಹರಿ..., ಗಾಯತ್ರಿಗೆ ಹೇಗಿದ್ರೂ ಸಿ.ಇ.ಟಿ. ಯಲ್ಲಿ ಟಾಪ್ ಮಾರ್ಕ್ಸ್ ಬಪ್ಪದು ಖಂಡಿತ...., ನಿನ್ಗೂ ಒಳ್ಳೆಯ rank ಬಂದೇ ಬಕ್ಕು.ಇಬ್ರೂ ಯಾವ ಕಾಲೇಜನ್ನ ಸೆಲೆಕ್ಟ್ ಮಾಡೋದು ಹೇಳಿ ತೀರ್ಮಾನ ಮಾಡಿದ್ರಾ..?"
"ಐಡಿಯಾ ಏನೋ ದೊಡ್ಡದೇ ಇತ್ತು ಮಾವಾ...ಆದರೆ ಈಗ ಅದ್ರಲ್ಲೇ ಚೂರು ಬದಲಾವಣೆ ಮಾಡಿದ್ದೆ....,ಗಾಯತ್ರಿಗೆ ಮೊದಲಿಂದ್ಲೂ ಕೆ.ಎಮ್. ಸಿ. ಲೇ ಕಲಿಯೇಕು ಹೇಳುವ ಆಶೆ... ಆನು ಬಿ. ಎಸ್ಸಿ. ಯನ್ನೇ ಕಂಟಿನ್ಯೂ ಮಾಡಿ ಬಿ.ಎಡ್. ಮಾಡುವದು ಹೇಳುವ ಪ್ಲಾನ್ ಮಾಡಿದ್ದೆ..." ಹರಿಯ ಮಾತಿನಿಂದ ಆಘಾತಗೊಂಡ ಮೂರ್ತಿ ಕೆಲ ಹೊತ್ತು ಮಾತು ಬಾರದಂತಾದ. ಅವನು ರಜಾದಲ್ಲಿ ಬಂದಿದ್ದಾಗಲೆಲ್ಲಾ ಹರಿ ಅವನ ಹಿಂದೇ ಸುತ್ತುತ್ತಾ ರೋಗಿಗಳ ಬಗ್ಗೆ, ರೋಗಗಳ ಬಗ್ಗೆ ಮೂರ್ತಿಗೇ ಬೇಜಾರಾಗುವಷ್ಟು ಕುತೂಹಲ ವ್ಯಕ್ತಪಡಿಸುತ್ತಾ ವಿವರ ಕಲೆ ಹಾಕುತ್ತಿದ್ದುದು, ಮೆಡಿಕಲ್ ಕಾಲೇಜುಗಳ ಬಗ್ಗೆ ತಿಳಿಯುತ್ತಿದ್ದುದು... ಎಲ್ಲವೂ ಇನ್ನೂ ಅವನ ಕಣ್ಣ ಮುಂದೇ ಇದೆ ಎನ್ನುವ ಹಾಗಿದೆ. ಹಾಗಿದ್ದೂ ಈಗ ಯಾಕೆ ಹರಿ ತನ್ನ ನಿಶ್ಚಯದಿಂದ ಹಿಂದೆ ಸರಿದ...??
"ಹರಿ ನೀನೆಂತ ಹೇಳ್ತಾ ಇಪ್ಪದು...?"
"ಹೂಂ... ಮಾವ... ಎನ್ನ ತೀರ್ಮಾನ ಅದುವೇ... ಇನ್ನು ಅಪ್ಪನ ಒಬ್ಬನನ್ನೇ ಬಿಟ್ಟು ದೂರ ಹೋಗೋದು ಅಷ್ಟು ಸರಿ ಅಲ್ಲ ...
ಅಲ್ದಾ ಮಾವ...? ಮೇಜರ್ ಸರ್ಜರಿ ಆದಮೇಲೆ ಅಪ್ಪ ಆದಷ್ಟು ಆರಾಮಲ್ಲಿ ಇರೋದು ಒಳ್ಳೇದು ಅಲ್ದಾ...? ಅಪ್ಪನ ಆಪರೇಶನ್, ಆಸ್ಪತ್ರೆ ಖರ್ಚು ಹೇಳಿ ಲಕ್ಷಗಟ್ಟಲೆ ಖರ್ಚಾತಲ್ದಾ...? ನಿಂಗೋ ದುಡ್ಡಿನ ಸಹಕಾರ ಮಾಡದೇ ಇರುತ್ತಿದ್ರೆ ತಕ್ಕ ಸಮಯಕ್ಕೆ ಅಪ್ಪಂಗೆ ಅಷ್ಟು ಒಳ್ಳೆ ಚಿಕಿತ್ಸೆ ಕೊಡ್ಸಲೆ ಎನಗಂತೂ ಸಾಧ್ಯವಾಗ್ತಿತಿಲ್ಲೆ...
ನಾಳೆ ನೋಡಿ.....

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ