ಗುರುವಾರ, ಅಕ್ಟೋಬರ್ 16, 2014

ಮಸಾಲೆ ಪೂರಿ

ಈ ತಿಂಡಿ ನನ್ನ ತಂಗಿಯಿಂದ ನನಗೆ ಬಂದ ಬಳುವಳಿ. ಈ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. 
ಸಾಮಾಗ್ರಿಗಳು:- ಪೂರಿಗೆ- 1.ಗೋದಿ ಹಿಟ್ಟು ಒಂದು ಕಪ್ 
                                       2.ಮೈದಾ ಹಿಟ್ಟು ಅರ್ಧ ಕಪ್ 
                                       3.ಚೀರೋಟಿ ರವೆ ಕಾಲುಕಪ್ 
                                       4.ಎಣ್ಣೆ  ಒಂದು ಕಪ್
                                       5.ಉಪ್ಪು ರುಚಿಗೆ ತಕ್ಕಷ್ಟು. 

ಮಸಾಲೆಗೆ - 1.ಪುದಿನ ಸೊಪ್ಪು, ಕೊತ್ತಂಬರಿ ಸೊಪ್ಪು ತಲಾ ಒಂದು  ಹಿಡಿ 
                  2.ನೆನೆಸಿದ ಗೋಡಂಬಿ ಅರ್ಧ ಕಪ್
             3.ಲವಂಗ, ಚೆಕ್ಕೆ, ಕರಿಮೆಣಸು(ಇವುಗಳನ್ನು ಹುರಿದುಕೊಳ್ಳಿ) ಗಳ ಪುಡಿ ಒಟ್ಟಿಗೆ ಒಂದುಚಮಚ. ಸೋಂಪು ಇಷ್ಟವಿದ್ದರೆ ಕಾಲು ಚಮಚ ಸೇರಿಸಿಕೊಳ್ಳಬಹುದು. ಈ ಎಲ್ಲಾ  ಸಾಮಾಗ್ರಿಗಳನ್ನು (1,2,3)ಮಿಕ್ಸಿಯಲ್ಲಿ ಹಾಕಿ ಪೇಸ್ಟ್  ಮಾಡಿಟ್ಟುಕೊಳ್ಳಿ. 
                  4.ಬೇಯಿಸಿದ ಬಟಾಣಿ ಅರ್ಧ ಕಪ್ 
                  5.ಹಸಿ ಈರುಳ್ಳಿ ಚೂರು ಅರ್ಧ ಕಪ್ 
                  6.ಹಸಿ ಟೊಮ್ಯಾಟೋ ಚೂರುಗಳು ಅರ್ಧ ಕಪ್ 
                  7.ಕೊತ್ತಂಬರಿ ಸೊಪ್ಪಿನ ಚೂರುಗಳು ಕಾಲು ಕಪ್ 
                  8.ಚೌ ಚೌ (ಚಿಕ್ಕ ಸೇಮಿಗೆ)ಕಾಲು ಕಪ್ 
ವಿಧಾನ:- ರವೆ ನೆನೆದು ಮೃದುವಾದಾಗ ಉಳಿದ ಎರಡು ಹಿಟ್ಟುಗಳನ್ನುಅದಕ್ಕೆ ಸೇರಿಸಿ ಕಲಸಿ ಪೂರಿ ಲಟ್ಟಿಸಿ ಎಣ್ಣೆಯಲ್ಲಿ                        ಕರಿದು ಟಿಶ್ಯೂ ಪೇಪರಿನ ಮೇಲೆ ಹರಡಿ. 
               ಬಾಣಲೆಯೊಂದನ್ನು ಬಿಸಿಗಿಡಿ. ತುಪ್ಪ ಯಾ ಎಣ್ಣೆ ಹಾಕಿ ಸಾಸಿವೆ, ಜೀರಿಗೆ ಒಗ್ಗರಣೆ ಮಾಡಿ. ಇದಕ್ಕೆ ಬೇಯಿಸಿದ ಬಟಾಣಿ ಹಾಕಿ. ಅರೆದಿಟ್ಟ ಪೇಸ್ಟನ್ನು ಸೇರಿಸಿ. ಸ್ವಲ್ಪ ನೀರು ಹಾಕಿಕೊಳ್ಳಿ(ಇದು ಗಸಿಯ ಹಾಗಿರಬೇಕು). ಉಪ್ಪು ಮಿಶ್ರ ಮಾಡಿ. ಕುದಿಸಿ ಬದಿಗಿಡಿ. ಜಿಡ್ಡಿನಂಶ ಹೋದ ಪೂರಿಯನ್ನು ತಟ್ಟೆಯಲ್ಲಿ (ಮೂರು - ನಾಲ್ಕು)ಹರಡಿ. ಉಬ್ಬಿದ ಮೇಲ್ಪದರವನ್ನು ಮೆಲ್ಲನೆ ಹರಿದು ಕುದಿಸಿಟ್ಟ ಮಸಾಲೆಯನ್ನು ಅವುಗಳೊಳಕ್ಕೆ ತಲಾ ಅರ್ಧ ಸವುಟಿನಂತೆ ಹಾಕಿ. ಇದರ ಮೇಲಕ್ಕೆ ಈರುಳ್ಳಿ ನಂತರ ಟೊಮೇಟೊ, ಕೊನೆಯದಾಗಿ ಚೌ ಚೌ ಹರಡಿ ಸರ್ವ್ ಮಾಡಿ.   
                                          

                                          

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ