ಈ ಲೇಖನ ಖಂಡಿತವಾಗಿಯೂ ನನ್ನ ಸ್ವಂತದ್ದಲ್ಲ. ಅಂತರ್ಜಾಲದಲ್ಲಿ ಹೀಗೇ ಜಾಲಾಡುತ್ತಿರುವಾಗ ಆಕಸ್ಮಾತ್ತಾಗಿ ಕಣ್ಣಿಗೆ ಬಿದ್ದ ಬರೆಹ. ಆಂಗ್ಲ ಭಾಷೆಯಲ್ಲಿದ್ದ ಆ ಲೇಖನವನ್ನು ಓದುತ್ತಾ ಹೋದಂತೆ 'ಓ...ದೇವರೇ..., ನಮ್ಮ ಸುತ್ತ ಮುತ್ತ ಇಂತವುಗಳು ಎಷ್ಟು ನಡೀತಾ ಇಲ್ಲ?ನಾವು ಇಂತವುಗಳನ್ನು ನೋಡಿಯೂ ನೋಡದಂತೆ ಜೀವಿಸುತ್ತಿದ್ದೇವಲ್ಲಾ...' ಎನಿಸಿತ್ತು. ನಾನು ತಿಳಿದುಕೊಂಡಿದ್ದನ್ನು ನಿಮ್ಮೊಡನೆ ಹಂಚಿಕೊಳ್ಳಲೇಬೇಕೆನಿಸಿತು. ನಮ್ಮ ದೇಶ, ಭಾಷೆ, ಪರಿಸರಕ್ಕೆ ತಕ್ಕಂತೆ ಲೇಖನದಲ್ಲಿ ಬದಲಾವಣೆಗಳನ್ನು ಮಾಡಿದೆ. ಒಟ್ಟಿನಲ್ಲಿ ಅದರ ಒಟ್ಟು ಭಾವಾರ್ಥವನ್ನು ಸಂಗ್ರಹಿಸಿ ಇಲ್ಲಿ ಬರೆದಿದ್ದೇನೆ. ಓದಿ ನೋಡಿ.
ಭಾವಪೀಡನೆ(emotional abuse)ಯ ಬಗ್ಗೆ ನಮ್ಮ ದೇಶದಲ್ಲಿ ಇನ್ನೂ ಅಷ್ಟಾಗಿ ಅರಿವು ಮೂಡಿಲ್ಲ. ಆದುದರಿಂದಲೇ ನಮ್ಮ ಮಾಧ್ಯಮಗಳು ಲೈಂಗಿಕ ಪೀಡನೆ, ದೈಹಿಕ ಪೀಡನೆಗಳಿಗೆ ಕೊಡುವ ಪ್ರಾಮುಖ್ಯತೆಯನ್ನು ಇದಕ್ಕೆ ಕೊಡ್ತಾ ಇಲ್ಲ. ಇದು ಭತ್ತದ ಹೊಟ್ಟಿನೊಳಗಣ ಬೆಂಕಿಯಂತೆ. ಪೀಡಿತರ ವ್ಯಕ್ತಿತ್ವವನ್ನೇ ಸಾವಕಾಶವಾಗಿ ಆಪೋಶನ ತೆಗೆದುಕೊಳ್ಳುತ್ತೆ. ಪೀಡಕರು ವರ್ತಮಾನದ ಗೋಮುಖ ವ್ಯಾಘ್ರರಾಗಿದ್ದರೆ ಪೀಡಿತರು ಭವಿಷ್ಯದ ಗೋಮುಖ ವ್ಯಾಘ್ರರಾಗುವ ಸಾಧ್ಯತೆ ಉಳ್ಳವರು. ಮೊದಲು ಈ ಭಾವ ಪೀಡಕರ ಮೂಲಗುಣಗಳನ್ನು ತಿಳಿಯೋಣ.
1.ಭಾವ ಪೀಡಕರು ಸ್ತ್ರೀಯಾಗಲೀ ಪುರುಷರಾಗಲೀ ತಮ್ಮ ಸಂಗಾತಿ/ಮಕ್ಕಳು/ಕೆಲಸದವರನ್ನು ತಮ್ಮ ಮಾತುಗಳ ಮೂಲಕ ಭಾವನಾತ್ಮಕವಾಗಿಯೂ ಮಾನಸಿಕವಾಗಿಯೂ ಹಿಂಸಿಸುವಲ್ಲಿ ಸಿದ್ಧ ಹಸ್ತರು(ದೈಹಿಕ ಪೀಡನೆಯೂ ಸೇರಿಕೊಳ್ಳಲೂಬಹುದು)
2.ಸ್ತ್ರೀ ಪೀಡಕರು ಹೆಂಗಸುತನವನ್ನು ದುರ್ಬಲತೆ ಎಂದು ತಿಳಿಯುತ್ತಾರೆ. ಇತರರೊಂದಿಗೆ ಆತ್ಮೀಯತೆ ಬೆಳೆಸಿಕೊಂಡು ಮನಬಿಚ್ಚಿ ಮಾತನಾಡಿದರೆ ತಮ್ಮ ವ್ಯಕ್ತಿತ್ವಕ್ಕೆ ಕುಂದು ಎಂದೇ ತಿಳಿಯುತ್ತಾರೆ. ಪುರುಷ ಪೀಡಕರು ತಮ್ಮ ಗಂಡಸುತನದ ಬಗ್ಗೆ ಅತಿಯಾದ ಅಹಂ ಬೆಳೆಸಿಕೊಂಡಿರುತ್ತಾರೆ.
3.ಇವರಲ್ಲಿರುವ ವಿಮರ್ಶಾಗುಣ,ಮತ್ಸರ, ಆತಂಕಗಳ ಮಟ್ಟ ಸಾಮಾನ್ಯರಲ್ಲಿರುವುದಕ್ಕಿಂತ ತುಂಬಾ ಹೆಚ್ಚು.ಇವರು ಯಾವಗಲೂ ಕಟು ಟೀಕಾಕಾರರಾಗಿರುತ್ತಾರೆ. ಇವರು ಆತಂಕ, ಒತ್ತಡ, ಉದ್ವೇಗಗಳನ್ನು ಪ್ರಕಟಪಡಿಸಲು ಇಷ್ಟ ಪಡುವುದೇ ಇಲ್ಲ. ಆದುದರಿಂದಲೇ ಭಾವನೆಗಳು ಅತಿ ಶೀಘ್ರದಲ್ಲಿ ಕೋಪವಾಗಿ ಮಾರ್ಪಾಡು ಹೊಂದಿ ಸ್ಫೋಟಗೊಳ್ಳುತ್ತಿರುತ್ತೆ.
4. ಪೀಡಕರು ತಮ್ಮ ಬಗ್ಗೆಯೇ ಕೀಳಂದಾಜು ಹೊಂದಿರುತ್ತಾರೆ. ಇವರು ಭಾವನಾತ್ಮಕವಾಗಿ ತಮ್ಮ ಸಂಗಾತಿಯ ಮೇಲೆ ಎಷ್ಟು ಅವಲಂಬಿತರಾಗಿರುತ್ತಾರೆಂದರೆ ಜವಾಬ್ದಾರಿಯೊಂದನ್ನು ತಾವೇ ಹೊರಬೇಕಾಗಿ ಬಂದಾಗ ತುಂಬಾ ಅಧೀರರಾಗುತ್ತಾರೆ.
5.ಅತಿಯಾದ ಹೊಟ್ಟೆಕಿಚ್ಚು, ಅತಿಯಾದ ಸ್ವಾಮಿತ್ವ(possessiveness)ದ ಗುಣಗಳು ಇವರಲ್ಲಿ ಸಾಮಾನ್ಯ.
6. ಹೆಚ್ಚಿನ ಪೀಡಕರು ಡ್ರಗ್ಸ್ ಅಥವಾ ಮದ್ಯ ವ್ಯಸನಿಗಳಾಗಿರುತ್ತಾರೆ. ಈ ವ್ಯಸನಗಳಿಂದ ಅವರು ಮುಕ್ತರಾದರೂ ಇನ್ನಷ್ಟು ಉಗ್ರರಾಗಿ ಮಾರ್ಪಾಡು ಹೊಂದುವ ಸಾಧ್ಯತೆಗಳಿವೆ.
7. ಪೀಡಕರೆನಿಸಿಕೊಂಡವರ ಬಾಲ್ಯ ಸುಖದಾಯಕವಾಗಿರುವುದಿಲ್ಲ. ಅವರು ಒಂದೋ ಶೋಷಣೆಯನ್ನು ಅನುಭವಿಸಿದವರು ಇಲ್ಲವೇ ಶೋಷಣೆಯ ಪ್ರತ್ಯಕ್ಷದರ್ಷಿಗಳಾಗಿದ್ದವರು. ಈ ಅನುಭವಗಳೇ ತಾನೋರ್ವ ನಿಷ್ಪ್ರಯೋಜಕ ಎಂದು ತಿಳಿಯುವಂತೆ ಮಾಡುತ್ತೆ. ಅತ್ಮಗೌರವ ನಾಶವಾಗಿ ಹೋಗಿರುವ ಇವರ ಮನದಲ್ಲಿ ಬಾಲ್ಯಕಾಲದ ಗಾಯಗಳ ಆಳವಾದ ಗುರುತುಗಳಿರುತ್ತವೆ. ಮುಂದೆ ಜೀವನದುದ್ದಕ್ಕೂ ಇವರು ತೋರುವ ಭಾವಪೀಡನಾತ್ಮಕ ಪ್ರಕೃತಿಗೆ ಮೂಲ ಕಾರಣ ಇವೇ ಆಗಿರುತ್ತವೆ.
ನಾಳೆ ಈ ಗುಣಗಳ ವಿರಾಟ ರೂಪದ ಪರಿಚಯ ಮಾಡಿ ನೋಡೋಣ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ