ಶಿವರಾತ್ರಿ ಹಬ್ಬ ... ಮಿಠಾಯಿಯ ಮೊದಲ ಹುಟ್ಟುಹಬ್ಬ.... ಎರಡಕ್ಕೂ ಶುಭಾಶಯಗಳು. ಇಂದಿಗೆ ಸರಿಯಾಗಿ ಒಂದು ವರ್ಷ ಹಿಂದಿನಿಂದ ಈ ಮಿಟಾಯಿಯನ್ನು ಸವಿಯಲು ತೊಡಗಿದ್ದೀರಿ. ಕಳೆದ ಶಿವರಾತ್ರಿಯ ಶುಭವಸರದಂದು ನೀವು ಈ ಬ್ಲಾಗಿನ ಮಾಲೀಕರಾದಿರಿ. ನಾನು ಮಾಲಿಯಾದೆ. ಮಾಲೀಕನನ್ನು ಸಂಪೂರ್ಣ ತೃಪ್ತಿ ಪಡಿಸುವ ಕೆಲಸ ಮಾಲಿಯದ್ದು ತಾನೇ? ಸಾಧಾರಣ ಮಿಟಾಯಿಯಾದರೋ ಬರೀ ಸಿಹಿ ಸಿಹಿ. ಅದರಲ್ಲೇನಿದೆ ಹೆಚ್ಚುಗಾರಿಕೆ? ನಾಲ್ಕು ಸಲ ಅದನ್ನೇ ಮತ್ತೆ ಮತ್ತೆ ತಿಂದಾಗ ವಾಕರಿಕೆ ಬರುವಂತಾಗುತ್ತೆ. ಅದೇ ಮಿಟಾಯಿ ಷಡ್ರಸಪೂರಿತವಾಗಿದ್ದರೆ? ವಾಹ್...! ಇನ್ನೂ ಬೇಕು..., ಇನ್ನೂ ಬೇಕು ಎನಿಸುವುದಿಲ್ಲವೇ?
ಅಡುಗೆ, ಲಘುಬರಹ, ಲಲಿತ ಪ್ರಬಂಧ, ಹಾಸ್ಯ ಬರಹ, ಕಥೆ, ಧಾರಾವಾಹಿ ಇತ್ಯಾದಿ ವಿವಿಧ ಪಾಕಗಳಿಂದ ಈ ಮಿಠಯಿಯನ್ನು
ಹದಗೊಳಿಸಿ ನಿಮ್ಮ ಮುಂದಿಟ್ಟೆ. ಇದರ ಯಶಸ್ಸು ಅಪಯಶಸ್ಸು ಏನಿದ್ದರೂ ಅದು ನೀವು ನನಗಿತ್ತ ಕಾಣಿಕೆ ಎಂದು ತಿಳಿದಿದ್ದೇನೆ.
'ಮಿಟಾಯಿ'ಯ ಮೊದಲ ಹುಟ್ಟು ಹಬ್ಬದಂದು ಉತೃಷ್ಟ ರುಚಿಯ ಪೆಪ್ಪರ್ಮೆಂಟೊಂದನ್ನು ನಿಮ್ಮ ಮುಂದಿಡಬೇಕೆನಿಸಿತು. ಮೊದಲ ರುಚಿಗೆ ಅದು ಸಿಹಿಯಂತೂ ಅಲ್ಲ. ಓದಿದ ಮೇಲೆ ನೀವು ಅದನ್ನು ಯಾವ ರೀತಿಯಲ್ಲಿ ನಿಮ್ಮ ನಿಮ್ಮ ಜೀವನಕ್ಕೆ ಅಳವಡಿಸಿಕೊಳ್ಳುತ್ತೀರಿ ಎಂಬುದರ ಮೇಲೆ ಅದರ ರುಚಿಯನ್ನು ನೀವೇ ನಿರ್ಧರಿಸಿಕೊಳ್ಳಿ.
ಮುಂದೆ ನೀವು ಓದಲಿರುವ ಲೇಖನ ಖಂಡಿತವಾಗಿಯೂ ನನ್ನ ಸ್ವಂತದ್ದಲ್ಲ. ಅಂತರ್ಜಾಲದಲ್ಲಿ ಹೀಗೇ ಜಾಲಡುತ್ತಿರುವಾಗ ಅಕಸ್ಮಾತ್ತಾಗಿ ಕಣ್ಣಿಗೆ ಬಿದ್ದ ಲೇಖನ. ನಮ್ಮ ದೇಶ ಭಾಷೆಗೆ ಅನುಗುಣವಾಗಿ ಅದರ ಭಾವಾರ್ಥವನ್ನು ಜೋಡಿಸಿಟ್ಟು ಪ್ರಕಟಿಸಲಿರುವೆ. ಓದಿ ಅಗತ್ಯವಾಗಿ ಅಭಿಪ್ರಾಯ ತಿಳಿಸಿ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ