ಬುಧವಾರ, ಫೆಬ್ರವರಿ 25, 2015

ಮೈತ್ರಿ (ಕನ್ನಡ ಸಿನೆಮಾ)


'ಮಕ್ಕಳ ಕೈಯ್ಯಲ್ಲಿ gun ಕೊಟ್ರೆ ಭಯೋತ್ಪಾದಕರಾಗುತ್ತಾರೆ,pen ಕೊಟ್ರೆ ಮಾನವರಾಗುತ್ತಾರೆ' ಇದು ಈ ಸಿನೆಮಾದ ಸಂದೇಶ. ಸಿದ್ರಾಮ ಎನ್ನುವ ಸ್ಲಂ ಏರಿಯಾದ ಹುಡುಗ ಬಾಲಾಪರಾಧಿಯಾಗಿ ಮಾರ್ಪಡಾಗಲು ಮರಿಪುಡಾರಿಯೊಬ್ಬ ಕಾರಣನಾಗುವುದು, ರಿಮಾಂಡ್ ಹೋಮಿನ ಯಾತನಾಮಯ ಜೀವನ, ಅತಿ  strict ನಡವಳಿಕೆಯ ವಾರ್ಡನ್, ಸಹ ಬಾಲಾಪರಾಧಿಯ  ಸಹಾಯದಿಂದ  ಕರುನಾಡ ಕರೋಡ್ಪತಿಗೆ ಪ್ರವೇಶ, ಪುನೀತ್ ರಾಜ್ ಕುಮಾರ್  ಭಕ್ತನೂ ಆದ ಸಿದ್ರಾಮ

ಐವತ್ತು ಲಕ್ಷ ಗೆಲ್ಲುವವರೆಗೂ ತಲಪುತ್ತಾನೆ.ಮುಂದೆ ಒಂದು ಕೋಟಿಯ ಪ್ರಶ್ನೆ... ಈ ಹಂತದಲ್ಲಿ ನಟ ಮೋಹನಲಾಲ್  ಪ್ರವೇಶ. ಕಥೆಗೆ ಪೂರ್ತಿ ಬೇರೆಯದೇ ಆದ ತಿರುವು. ಸಿದ್ರಾಮ  ಕೋಟ್ಯಾಧಿಪತಿ ಆಗುತ್ತಾನೆಯೇ.....? ನೀವೆ ನೋಡಿ ತಿಳಿಯಿರಿ. 
     ಬಹುಶಃ ಕನ್ನಡದಲ್ಲಿ ಇಂತಹ subject ಮೇಲೆ ಸಿನೆಮಾ ಬಂದೇ ಇಲ್ಲ ಎಂದು ತೋರುತ್ತೆ.A1 class movie ಗೆ ಉದಾಹರಣೆಯಾಗಿ 'ಮೈತ್ರಿ' ಯನ್ನು ಖಂಡಿತವಾಗಿಯೂ ಹೇಳಬಹುದು. ಮರ ಸುತ್ತಾಟ,ಐಟಂ ಸಾಂಗ್, ಡಿಶುಂ ಡಿಶುಂಗಳನ್ನು ನಿರೀಕ್ಷೆ ಮಾಡ್ತಾ ಈ ಸಿನೆಮಾಗೆ ಹೋದರೆ ನಿಮಗೆ ನಿರಾಸೆ ಗ್ಯಾರೆಂಟಿ. ನಿಜಕ್ಕಾದರೆ ಇದರಲ್ಲಿ ನಾಯಕಿಯೇ ಇಲ್ಲ! ಅದರ ಅಗತ್ಯವೂ ಇಲ್ಲ. ಸಿದ್ರಾಮ ಕರೋಡ್ ಪತಿಗಾಗಿ ತಯಾರಾಗಲು ಪಡುವ ಪಾಡು, ಆತನ ಸ್ನೇಹಿತ ಸಹಾಯ ಮಾಡುವ ವಿಧಾನ, ರಿಮಾಂಡ್ ಹೋಮಿನೊಳಗಿನ ಕ್ರೂರತೆ, ಕ್ರೂರಿ ವಾರ್ಡನ್ ಹೃದಯಾಂತರಾಳದ ಮಾರ್ದವತೆಗಳು ನಮ್ಮ ಕಣ್ಣು ತುಂಬುವಂತೆ ಮಾಡುತ್ತೆ. ಇನ್ನು ಪುನೀತ್ ರಾಜ್ ಕುಮಾರ್, ಮೋಹನಲಾಲ್, ಅತುಲ್ ಕುಲಕರ್ಣಿ, ಮಾ. ಆದಿತ್ಯ ಈ ನಾಲ್ವರೂ ಪೈಪೋಟಿಗೆ ಬಿದ್ದವರಂತೆ ನಟಿಸಿದ್ದಾರೆ. ಅತುಲ್ ಕುಲಕರ್ಣಿಯಂತೂ ಸೂಪರ್.ಪುನೀತ್ ಮತ್ತು ಮೋಹನಲಾಲ್ ಅವರ ನಟನೆಯ ಬಿಗಿತ ಎಷ್ಟು ಕರಾರುವಕ್ಕಾಗಿತ್ತೆಂದರೆ ಅದೊಂದು  tug of war ತರಾ ಅನಿಸಿತ್ತು.
ಇನ್ನು ಹೆಚ್ಚು ಹೇಳಿದರೆ ಸ್ವಾರಸ್ಯವಿಲ್ಲ. ನೋಡಿ ಅನುಭವಿಸಬೇಕು. 
  
       

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ