ಮಂಗಳವಾರ, ಮಾರ್ಚ್ 10, 2015

ನೇಂದ್ರಹಣ್ಣು ಒಗ್ಗರಣೆ ಡಿಲೈಟ್

ನೇಂದ್ರ ಬಾಳೆಹಣ್ಣು ತಂದು ಇದನ್ನು ಮಾಡಿ ನೋಡಿ, ಸರಳವೂ  ಸವಿಯೂ ಆದ ಈ ತಿಂಡಿ ನಿಮಗೆ ಇಷ್ಟವಾಗಬಹುದು.
ಸಾಮಾಗ್ರಿಗಳು :-
1. ನೇಂದ್ರ ಹಣ್ಣು ಎರಡು
2.ತುಪ್ಪ ಎರಡು ಚಮಚ(ಸಾಧಾರಣವಾಗಿ ನೀವು ಅಡುಗೆಗೆ ಉಪಯೋಗಿಸುವ ಚಮಚ)
3.ಮೆಣಸಿನ ಪುಡಿ ಕಾಲು ಚಮಚ
4.ಸಕ್ಕರೆ ಅರ್ಧ ಚಮಚ
5.ಒಗ್ಗರಣೆಗೆ -ಸಾಸಿವೆ, ಕೆಂಪು ಮೆಣಸು, ಕರಿಬೇವಿನ ಸೊಪ್ಪು
6.ಉಪ್ಪು ರುಚಿಗೆ ತಕ್ಕಷ್ಟು
7. ನೀರು ಕಾಲು ಕಪ್.
ವಿಧಾನ:-
 ಚೆನ್ನಾಗಿ ಬಲಿತು ಹಣ್ಣಾದ ನೇಂದ್ರದ ಸಿಪ್ಪೆ ಸುಲಿದು ತೆಳ್ಳಗೆ ಉರುಟುರುಟಾದ ಬಿಲ್ಲೆಗಳನ್ನಾಗಿ ಮಾಡಿಟ್ಟುಕೊಳ್ಳಿ. ಬಾಣಲೆಯನ್ನು ಬಿಸಿಗಿಟ್ಟು ತುಪ್ಪಹಾಕಿ ಒಗ್ಗರಣೆ ಕೊಡಿ. ಹಣ್ಣಿನ ತುಂಡುಗಳನ್ನು ಹಾಕಿ ಕಾಲು ಕಪ್ ನೀರು ಹಾಕಿ. ಉಪ್ಪು, ಮೆಣಸಿನ ಪುಡಿ, ಸಕ್ಕರೆ ಹಾಕಿ ಮುಚ್ಚಿ ಬೇಯಿಸಿ. (ಬೆಂಕಿ ಚಿಕ್ಕದಾಗಿರಲಿ) ತಳ ಹಿಡಿಯದಂತೆ ಒಂದೆರಡು ಸಲ ಕೈಯ್ಯಾಡಿಸಿ. ಐದಾರು ನಿಮಿಷದಲ್ಲಿ ತಿಂಡಿ ರೆಡಿ. ಬಿಸಿ ಕಾಫಿಯೊಂದಿಗೆ ಸರ್ವ್ ಮಾಡಿ.
ವೀ. ಸೂ. ನೇಂದ್ರ ಹಣ್ಣು ಚೆನ್ನಾಗಿ ಹಣ್ಣಾಗಿರಬೇಕು. ಇಲ್ಲವಾದರೆ ಬಾಳೆಹಣ್ಣಿನ ಮೇಣದಿಂದಾಗಿ ತಿಂಡಿ ಅಂಟಿದಂತಾಗುತ್ತೆ. ಬೇರೆ ಯಾವುದೇ ಜಾತಿಯ ಬಾಳೆಹಣ್ಣಿನಿಂದ  ಈ ತಿಂಡಿ ತಯಾರಿಸಬೇಡಿ.
  
  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ