ನಿನ್ನೆಯ ಭಾನುವಾರ ಸಾರ್ಥಕವೆನಿಸಿತ್ತು. PIKU ಸಿನೆಮಾ(ಹಿಂದಿ)ಕ್ಕೆ ಹೋಗಿದ್ವಿ. ಬಹಳ ಇಷ್ಟ ಪಟ್ವಿ.ಇದರಲ್ಲಿ ಯುವಕರು & ಮುದುಕರು , ಈ ಎರಡೂ ಜನಾಂಗಕ್ಕೂ ಕಡಕ್ಕಾದ ಸಂದೇಶವಿದೆ. ದೀಪಿಕಾ ಮಗಳಾಗಿ ನಿರ್ವಹಿಸುವ ಜವಾಬ್ದಾರಿಗಳು, ಅವಳ ಗಟ್ಟಿತನ ಬಹಳ ಮನೋಜ್ಞವಾಗಿ ಚಿತ್ರಿತವಾಗಿವೆ. ತನ್ನ ಮಂಚಕ್ಕೆ ಮೂರೇ ಕಾಲು ಎನ್ನುವ ಹಟಮಾರಿ ತಂದೆ, ಮಗಳ ಬದುಕಿಗಿಂತಲೂ ತನ್ನ ಬದುಕೇ ಹೆಚ್ಚು ಪ್ರಾಮುಖ್ಯ ಎಂದು ಬಿಂಬಿಸುವ ಪಾತ್ರದಲ್ಲಿ ಅಮಿತಾಬ್ ಬಚ್ಚನ್ ಅವರ ಅಭಿನಯಕ್ಕೆ ಅಮಿತಾಬ್ ಬಚ್ಚನ್ ಅವರೇ ಸಾಟಿ. ನಾಲ್ಕು ಜನರೆದುರು ಮಾತನಾಡಲು ಎಂತಹವರೂ ಮುಜುಗರ ಪಟ್ಟುಕೊಳ್ಳುವಂತಹ 'ಮಲಬದ್ದತೆ' ಎನ್ನುವ ವಿಷಯವನ್ನು ಎಷ್ಟು ಸೊಗಸಾಗಿ ಹಾಸ್ಯದ ಲೇಪದೊಂದಿಗೆ ಪ್ರೆಸೆಂಟ್ ಮಾಡಿದ್ದರೆಂದರೆ ನಕ್ಕೂ .... ನಕ್ಕೂ .... ಕಣ್ಣಲ್ಲಿ ನೀರೇ ಬಂದು ಬಿಟ್ಟಿತ್ತು.
ಅಮಿತಾಬ್ ಬಚ್ಚನ್ ಅವರು ಮುದುಕನ ರೋಲೊಳಗೆ ಎಷ್ಟು ಪರಕಾಯ ಪ್ರವೇಶ ಮಾಡಿದ್ದಾರೆಂದರೆ ಪ್ರತಿ ಫ಼್ರೇಮಲ್ಲೂ ನಮ್ಮ ನಮ್ಮ ಅಜ್ಜಂದಿರು ಮನದಲ್ಲಿ ಸುಳಿದು ಮಾಯವಾಗುತ್ತಿರುತ್ತಾರೆ. ದೀಪಿಕಾ ಬಾಲಿವುಡ್ಡಿನ no.1 ಯಾಕಾದಳು ಎಂಬುದು ಈ ಮೂವಿ ನೋಡಿದರೆ ಗೊತ್ತಾಗುತ್ತೆ. ಮಧ್ಯಮ ವರ್ಗದ ಮಗಳಾಗಿ ಅವಳ ಬಾಡಿ ಲಾಂಗ್ವೆಜ್, ಭಾಷೆ, ಡ್ರೆಸ್ಸಿಂಗ್ ಸೆನ್ಸ್, ಇಷ್ಟವಾಗದ ಸಂದರ್ಭಗಳಲ್ಲಿ ಮುಖವಾಡ ದರಿಸದೆ ಛಟೇ ... ಎಂದು ಸಿಡಿದು ಬೀಳುವ ಆ ಪರಿ...!.ಅಷ್ಟು ನೈಜವಾಗಿ ಆ ನಟನೆ ಮೂಡಿ ಬರಲು ಅವಳೆಷ್ಟು ಪ್ರಯತ್ನ ಹಾಕಿರಬಹುದು? ವಾವ್ ....! ನಮ್ಮ ದಕ್ಷಿಣ ಕನ್ನಡದ ಹೆಣ್ಣುಮಗಳು ಈ ಎತ್ತರಕ್ಕೆ ಏರಿದ್ದಕ್ಕೆ ನಾವು ಹೆಮ್ಮೆ ಪಡಬೇಕು. ಇನ್ನು ಇವರಿಬ್ಬರನ್ನು ಕರೆದೊಯ್ಯುವ ಕಾರಿನ ಡ್ರೈವರನಾಗಿ ಇರ್ಫಾನ್ ಖಾನ್ ಎಂದಿನಂತೆ ಸಿಂಪ್ಲಿ ಸೂಪರ್. ಮಿಸ್ ಮಾಡದೆ ಖಂಡಿತಕ್ಕೂ ಈ ಸಿನೆಮಾ ನೋಡಿ ಆಯಿತಾ?

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ