ಶುಕ್ರವಾರ, ಆಗಸ್ಟ್ 7, 2015

ವಾಟ್ಸಾಪ್..... ವಾಟ್ಸಾಪ್....

ಮೊಮ್ಮಗ : "ಅಜ್ಜೀ..., ತಗೊಳ್ಳಿ, ನಿಮ್ಮ ಬೆನ್ನು ನೋವಿಗೆ ಈ ಎಣ್ಣೆ ಹಚ್ಚಿ..., ತುಂಬಾ ಇಫೆಕ್ಟಿವ್ ಅಂತೆ... ನೆಟ್ಟಲ್ಲಿ ನೋಡಿ ತಂದೆ...ಬೆಳಗ್ಗೆ ಸಂಜೆ ಹಚ್ಚಿ ಮಾಲೀಶ್ ಮಾಡೋದಂತೆ... "
ಅಜ್ಜಿ : ಓ ..., ಹೌದಾ ಪುಟ್ಟಾ... ಇದ್ದರೆ  ನಿನ್ನಂತ ಮೊಮ್ಮಗ ಇರಬೇಕು ನೋಡು ..., ಅಂದಹಾಗೆ ಕೆಲಸದವಳು ರಜಾ ಮೇಲಿದ್ದಾಳಲ್ಲಾ...,ನನ್ನ  ಬೆನ್ನಿಗೆ ಎಣ್ಣೆ ಹಚ್ಚೋರು ಯಾರು?"
ಮೊಮ್ಮಗ : " ಹ್ಹ... ಹ್ಹಾ... ನಾನಿರೋವಾಗ ನಿಮಗೇಕೆ ಚಿಂತೆ...? ಈ ನಿಮ್ಮ ಪುಟ್ಟ ಎವೆರ್ರೆಡಿ..."

( ಮಾರನೆಯ ದಿನ ಬೆಳಗ್ಗೆ)

ಅಜ್ಜಿ: "ಪುಟ್ಟಾ... ಪುಟ್ಟಾ...... ಏ ಪುಟ್ಟಾ.... ಪುಟ್ಟಾ...ಬಾರೋ..., ಎಣ್ಣೆ ಹಚ್ಚು...."
ಮೊಮ್ಮಗ: "ಹಾಂ... ಹಾಂ... ಬಂದೇ ...,ಒಂದೇ ನಿಮಿಷ... ವಾಟ್ಸಾಪಲ್ಲಿ ರಾಶಿ ರಾಶಿ ಮೆಸೇಜುಗಳು ಬಂದು ಬಿದ್ದಿವೆ. ನೋಡ್ಬಿಟ್ಟು ಬರ್ತೀನಿ...."
............ ......... ...
............ ........ .... 
ಅಜ್ಜಿ: "ಪುಟ್ಟಾ...,  ಘಂಟೆ ಹನ್ನೆರಡಾಯಿತು ಕಣೋ ...ಬೆಳಗ್ಗೆನೇ ಎಣ್ಣೆ ಹಚ್ಚಿ ಕೊಡ್ತೀನಿ ಅಂದ್ಯಲ್ಲೋ... .ಇನ್ನು ನಾನು ಸ್ನಾನಕ್ಕೆ ಹೋಗ್ತೀನಿ. ಸಂಜೆ ಹಚ್ಚಿದ್ರಾಯ್ತು..."

(ಸಂಜೆ ಹೊತ್ತು)

ಅಜ್ಜಿ :ಪುಟ್ಟಾ... ಪುಟ್ಟಾ... ಏ  ಪುಟ್ಟಾ... ಮುಸ್ಸಂಜೆಗೆ ಮೊದಲು ನನ್ನ ಬೆನ್ನಿಗೆ ಎಣ್ಣೆ ಹಚ್ಚಿ ಬಿಡೋ..."
ಮೊಮ್ಮಗ: "ಹಾಂ... ಹಾಂ...ಈಗ  ಬಂದೇ....., ಒಂದೇ  ನಿಮಿಷ ..., ವಾಟ್ಸಾಪ್ ಮೆಸೆಜೆಸ್ಗಳನ್ನೆಲ್ಲ  ಡಿಲಿಟ್ ಮಾಡ್ಬಿಟ್ಟು ಬರ್ತೀನಿ..."
....... ........ 
ಅಜ್ಜಿ :"ಪುಟ್ಟಾ...,ಏ ಪುಟ್ಟಾ... ಎಲ್ಲಿದ್ಯೋ...? ರಾತ್ರಿ ಬಹಳ ಹೊತ್ತಾಯ್ತಲ್ಲೋ...? ಇನ್ನು ಎಣ್ಣೆ ಹಚ್ಚಿದ್ರೆ ಸರಿಯಾಗಲ್ಲ ಕಣೋ.... ನಾಳೆ ಹಚ್ಚಿದ್ರಾಯ್ತು... ಈವಾಗ ನಾನು ಮಲಗ್ತೀನಿ. ಗುಡ್ ನೈಟ್ ..."
                     --------              ----------------            ----------

ಮೊಮ್ಮಗ : "ಅಜ್ಜೀ.., ಇಲ್ನೋಡು..., ಈವತ್ತು ನಮ್ಮ ಸ್ಕೂಲಲ್ಲಿ ಹ್ಯಾಂಡ್ ರೈಟಿಂಗ್ ಕಾಂಪೆಟಿಶನ್ ಇತ್ತು ಅಂದೆ ಆಲ್ವಾ..?"
ಅಜ್ಜಿ :"ಹೂಂ ಕಣೋ...., ಆದರೆ ಕಾಗೆ ಕಾಲಿನಂತ ನಿನ್ನ ಅಕ್ಷರಕ್ಕೆ ಎಲ್ಲಿ ಸಿಗುತ್ತೆ ಪ್ರೈಜ್....?
ಮೊಮ್ಮಗ: "ಇಲ್ಲಜ್ಜೀ... ನಂಗೇ ಬಂತು ಪ್ರೈಜ್.... ವಾಟ್ಸಾಪಲ್ಲಿ ಬರೆದು ಫಾರ್ವಾರ್ಡ್ ಮಾಡಿದ್ದೆ ..."
                  ------                 -----------------             ----------

ರಾಮು: "ಈವಾಗ ನಿಮ್ಮ ಮನೆಯಲ್ಲಿ ಬಹಳ ಸೌಹಾರ್ದ ವಾತಾವರಣ ಇರೋ ಹಾಗೆ ಕಾಣಿಸುತ್ತೆ..?"
ಶ್ಯಾಮು :" ಹೂಂ ಕಣೋ..., ಅಮ್ಮಂಗೆ ವಾಟ್ಸಪ್ ಹೇಳಿಕೊಟ್ಟಿದೀನಿ. ಹೆಂಡ್ತಿ ಕೈಲಿ ಟ್ಯಾಬ್ ಬಂದಿದೆ..."
            ---------                  -----------------              ----------


   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ