ಸೋಮವಾರ, ಸೆಪ್ಟೆಂಬರ್ 21, 2015

ಸೇಬು ಖೀರು


ಪ್ರಿಯ  ಓದುಗ ಮಿತ್ರರೇ ...,
 ಏನೇನೋ  ಕೆಲಸ ಕಾರ್ಯಗಳು, ಎಲ್ಲೆಲ್ಲೋ ಸುತ್ತಾಟ...., ಸೋ..,  ನನ್ನ ಬ್ಲಾಗಿಗೆ ನಾನೇ ಅಪರಿಚಿತಳಾಗಿ ಬಿಟ್ಟೆ! ಆದರೆ ಸುತ್ತಾಟದಿಂದಾಗಿ ಕೆಲವೆಲ್ಲ ಹೊಸ ರುಚಿಗಳನ್ನು ಕಲಿಯುವಂತಾಯ್ತು. ಕೆಲವನ್ನ ನಿಮ್ಮೊಂದಿಗೆ ಹಂಚಿಕೊಳ್ತಾ ಇದ್ದೀನಿ.. ಮೊದಲು ಈ ಖೀರಿನ ಸವಿ ನೋಡಿ. 


ಸಾಮಾಗ್ರಿಗಳು :- 1. ಸೇಬುಹಣ್ಣು
                         2. ದಪ್ಪ ಹಾಲು- 1/2 Ltr.
                         3.ಸಕ್ಕರೆ - 1/4 ಕಪ್
                         4.ಕಸ್ಟರ್ಡ್ ಪೌಡರ್- (ವೆನಿಲ್ಲಾ) 1 ಚಮಚೆ
                         5. ಕುಂಕುಮ ಕೇಸರಿ - ನಾಲ್ಕೈದು ಎಸಳು
                         6. ಒಣ ಹಣ್ಣುಗಳು (ಐಚ್ಚಿಕ)
  ವಿಧಾನ                      
ಸೇಬುಹಣ್ಣುಗಳ ಸಿಪ್ಪೆ ತೆಗೆದು ತುರಿದಿಟ್ಟುಕೊಳ್ಳಿ.ಕೇಸರಿಯನ್ನು ಹಾಲಲ್ಲಿ ನೆನೆಸಿಕೊಳ್ಳಿ . ತಣ್ಣಗಿನ ಹಾಲು ಸ್ವಲ್ಪ ತೆಗೆದುಕೊಂಡು ಅದರಲ್ಲಿ ಕಸ್ಟರ್ಡನ್ನು  ಗಂಟಿಲ್ಲದಂತೆ  ಕಲಸಿಟ್ಟುಕೊಳ್ಳಬೇಕು.ಈಗ 1/2 ltr ಹಾಲನ್ನು ಚೆನ್ನಾಗಿ ಕುದಿಸಿ. ಸೇಬನ್ನು ಹಾಕಿ ಬೇಯಿಸಿ. ಕೈಬಿಡದೆ ಮಗಚುತ್ತಲೇ ಇರಿ.( ಬೆಂಕಿ ಚಿಕ್ಕದಾಗಿರಲಿ) ಈಗ ಕಸ್ಟರ್ಡ್ ಮಿಶ್ರಣ, ನೆನೆಸಿದ ಕೇಸರಿ ಹಾಕಿ ಮಗುಚಿ. ಹಾಲು  ಸ್ವಲ್ಪ ದಪ್ಪಗಾಗುವಾಗ ಇಳಿಸಿಬಿಡಿ.ಬೇಕಿದ್ದರೆ ಏಲಕ್ಕಿಪುಡಿ ಮತ್ತು ಒಣ ಹಣ್ಣುಗಳನ್ನುತುಪ್ಪದಲ್ಲಿ ಹುರಿದು ಸೇರಿಸಿಕೊಳ್ಳಬಹುದು. ಫ್ರಿಜ್ಜಲ್ಲಿ ಎರಡು ಘಂಟೆ ಹೊತ್ತು ಇಟ್ಟು  ಸರ್ವ್ ಮಾಡಿ. ಬಿಸಿ ಬಿಸಿಯಾಗಿಯೂ ಕುಡಿಯಬಹುದು. ಇದೇ  ರೀತಿ ಕ್ಯಾರೆಟ್ ಖೀರೂ ರುಚಿಕರವಾಗಿರುತ್ತೆ.
    

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ