ಸಾಮಾಗ್ರಿಗಳು:-
ಬಾಳೆಕಾಯಿ- 2
ತೆಂಗಿನ ತುರಿ - 1 1/2ಕಪ್
ಒಣ ಮೆಣಸು -4
ಕಡ್ಲೆ ಬೇಳೆ -1/4 ಚಮಚ
ಉದ್ದಿನ ಬೇಳೆ -1/4 ಚಮಚ
ಎಳ್ಳು -1/4 ಚಮಚ
ಮೆಂತೆ -ಐದಾರು ಕಾಳು
ಅರಸಿನ- ಚಿಟಿಕೆ
ಕೊತ್ತಂಬರಿ -2 ಚಮಚ
ಇಂಗು - ಚಿಟಿಕೆ
ಹುಳಿ - ನೆಲ್ಲಿ ಗಾತ್ರ
ಉಪ್ಪು, ಬೆಲ್ಲ ರುಚಿಗೆ ತಕ್ಕಷ್ಟು
ಒಗ್ಗರಣೆಗೆ - ಎಣ್ಣೆ, ಒಣ ಮೆಣಸು, ಸಾಸಿವೆ, ಕರಿಬೇವಿನ ಸೊಪ್ಪು.
ವಿಧಾನ :-
ಬಾಳೆಕಾಯಿ ಸಿಪ್ಪೆ ಸುಲಿದು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಚೊಗರು ಹೋಗಲು ನೀರಿಗೆ ಸ್ವಲ್ಪ ಮಜ್ಜಿಗೆ ಹಾಕಿ ಅದರಲ್ಲಿ ಹೋಳುಗಳನ್ನು ಕಾಲು ಘಂಟೆ ಮುಳುಗಿಸಿಡಿ.ಹುಳಿಯನ್ನು ಸ್ವಲ್ಪ ನೀರಿನಲ್ಲಿ ಬೇರೆಯಾಗಿ ನೆನೆಸಿಡಿ. ಮೇಲೆ ಹೇಳಿದ ಮಸಾಲೆ ಸಾಮಾಗ್ರಿಗಳನ್ನು ಖಮ್ಮಗೆ ಹುರಿದು ತೆಂಗಿನ ತುರಿಯೊಂದಿಗೆ ನುಣ್ಣಗೆ ಅರೆದಿಟ್ಟುಕೊಳ್ಳಿ.ಸ್ವಚ್ಛಗೊಳಿಸಿದ ಹೋಳುಗಳಿಗೆ ಉಪ್ಪು, ಅರಸಿನ ಪುಡಿ ಹಾಕಿ ಅಗತ್ಯವಿರುವಷ್ಟೇ ನೀರು ಹಾಕಿ ಬೇಯಿಸಿ. ಬೆಂದ ಮೇಲೆ ಹುಳಿ ಗಿವುಚಿದ ನೀರು( ಎರಡು-ಮೂರು ಚಮಚ), ಬೆಲ್ಲ ಹಾಕಿ ಪುನಃ ಕುದಿಸಿ. ಅರೆದಿಟ್ಟ ಮಸಾಲೆ ಸೇರಿಸಿ. ಮತ್ತೆ ಕುದಿಸಿ ಇಳಿಸಿ. ಒಗ್ಗರಣೆ ಕೊಡಿ. ಈ ಪದಾರ್ಥ ಹೆಚ್ಚು ನೀರಾಗಿರಬಾರದು. ಅನ್ನ ಅಥವಾ ಉದ್ದಿನ ದೋಸೆಯ ಜೊತೆಗೆ ಇದು ಚೆನ್ನಾಗಿ ಹೊಂದಿಕೊಳ್ಳುತ್ತೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ