ಸಾಮಾಗ್ರಿಗಳು :-
ಗುಂಡಗಿನ ಬದನೆ -2
ಈರುಳ್ಳಿ - 1
ಬೆಳ್ಳುಳ್ಳಿ - 4 ಎಸಳು
ಹಸಿರು ಮೆಣಸಿನಕಾಯಿ - 1 ಯಾ 2
ಮೊಸರು -1 ಕಪ್
ಪುದಿನ ಸೊಪ್ಪು - 4
ಕಡ್ಲೇಕಾಯಿ (ಶೇಂಗಾ) - 4-5
ಹುಳಿ, ಉಪ್ಪು, ಬೆಲ್ಲ ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು.
ಒಗ್ಗರಣೆಗೆ - ಎಣ್ಣೆ, ಉದ್ದಿನ ಬೇಳೆ, ಸಾಸಿವೆ, ಕರಿಬೇವಿನ ಸೊಪ್ಪು.
ವಿಧಾನ :-
ಶುಚಿಗೊಳಿಸಿದ ಬದನೆಯನ್ನು ಗ್ಯಾಸಿನ ಮೇಲಿಟ್ಟು ಸುಡಲೂಬಹುದು ಅಥವಾ ಹೋಳು ಮಾಡಿ ಉಪ್ಪು, ಹುಳಿ, ಬೆಲ್ಲ ಸೇರಿಸಿ (ನೀರು ಅಗತ್ಯಕ್ಕೆ ತಕ್ಕಷ್ಟೇ ಹೊಯ್ದು) ಬೇಯಿಸಲೂಬಹುದು. ಬೆಂದ ಬದನೆಯನ್ನು ಹಿಸುಕಿ ಇಟ್ಟುಕೊಳ್ಳಿ. ಬಾಣಲೆಯನ್ನು ಬಿಸಿಗಿಟ್ಟು ಒಗ್ಗರಣೆ ಮಾಡಿ.ಹುರಿದ ಕಡ್ಲೆ ಕಾಯಿ, ತೆಳ್ಳಗೆ ಹೆಚ್ಚಿಟ್ಟ ಈರುಳ್ಳಿ, ಬೆಳ್ಳುಳ್ಳಿ ,ಮೆಣಸಿನ ಕಾಯಿ,ಪುದಿನಾ ಸೊಪ್ಪುಗಳನ್ನು ಸೇರಿಸಿ ಹಸಿ ವಾಸನೆ ಹೋಗುವಂತೆ ಚೆನ್ನಾಗಿ ಬಾಡಿಸಿ. ಆರಿದ ಮೇಲೆ ಹಿಸುಕಿಟ್ಟ ಬದನೆ ಮತ್ತು ಬಾಣಲೆಯಲ್ಲಿರುವ ವಸ್ತುಗಳನ್ನು ಒಟ್ಟು ಸೇರಿಸಿ ಮಿಕ್ಸಿಯಲ್ಲಿ ಒಂದೆರಡು ಬಾರಿ whip ಮಾಡಿಕೊಳ್ಳಿ. ಎಲ್ಲವನ್ನು ಬೌಲಿಗೆ ಸುರಿದು ಮೊಸರು
ಹಾಕಿ ಚೆನ್ನಾಗಿ ಮಿಶ್ರ ಮಾಡಿ.ಮೇಲಿನಿಂದ ಕೊತ್ತಂಬರಿ ಸೊಪ್ಪಿನ ಚೂರುಗಳನ್ನು ಉದುರಿಸಿ ಫ್ರಿಜ್ಜಲ್ಲಿಟ್ಟು ಒಂದೆರಡು ಘಂಟೆಗಳ ಬಳಿಕ ಸರ್ವ್ ಮಾಡಿ. ಅನ್ನ, ಚಪಾತಿ, ಪೂರಿಗಳಿಗೆ ಸೊಗಸಾದ ಜೋಡಿ.
(ಬದನೆಯನ್ನು ಸುಟ್ಟರೆ ಈ ಪದಾರ್ಥದ ಪರಿಮಳ ವಿಶೇಷವಾಗಿರುತ್ತದೆ.ಹೀಗೆ ಮಾಡುವುದಿದ್ದರೆ
ಹಿಸುಕಿದ ನಂತರ ಉಪ್ಪು, ಹುಳಿ, ಬೆಲ್ಲಗಳನ್ನು ಸೇರಿಸಿಕೊಳ್ಳಬಹುದು)
ಗುಂಡಗಿನ ಬದನೆ -2
ಈರುಳ್ಳಿ - 1
ಬೆಳ್ಳುಳ್ಳಿ - 4 ಎಸಳು
ಹಸಿರು ಮೆಣಸಿನಕಾಯಿ - 1 ಯಾ 2
ಮೊಸರು -1 ಕಪ್
ಪುದಿನ ಸೊಪ್ಪು - 4
ಕಡ್ಲೇಕಾಯಿ (ಶೇಂಗಾ) - 4-5ಹುಳಿ, ಉಪ್ಪು, ಬೆಲ್ಲ ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು.
ಒಗ್ಗರಣೆಗೆ - ಎಣ್ಣೆ, ಉದ್ದಿನ ಬೇಳೆ, ಸಾಸಿವೆ, ಕರಿಬೇವಿನ ಸೊಪ್ಪು.
ವಿಧಾನ :-
ಶುಚಿಗೊಳಿಸಿದ ಬದನೆಯನ್ನು ಗ್ಯಾಸಿನ ಮೇಲಿಟ್ಟು ಸುಡಲೂಬಹುದು ಅಥವಾ ಹೋಳು ಮಾಡಿ ಉಪ್ಪು, ಹುಳಿ, ಬೆಲ್ಲ ಸೇರಿಸಿ (ನೀರು ಅಗತ್ಯಕ್ಕೆ ತಕ್ಕಷ್ಟೇ ಹೊಯ್ದು) ಬೇಯಿಸಲೂಬಹುದು. ಬೆಂದ ಬದನೆಯನ್ನು ಹಿಸುಕಿ ಇಟ್ಟುಕೊಳ್ಳಿ. ಬಾಣಲೆಯನ್ನು ಬಿಸಿಗಿಟ್ಟು ಒಗ್ಗರಣೆ ಮಾಡಿ.ಹುರಿದ ಕಡ್ಲೆ ಕಾಯಿ, ತೆಳ್ಳಗೆ ಹೆಚ್ಚಿಟ್ಟ ಈರುಳ್ಳಿ, ಬೆಳ್ಳುಳ್ಳಿ ,ಮೆಣಸಿನ ಕಾಯಿ,ಪುದಿನಾ ಸೊಪ್ಪುಗಳನ್ನು ಸೇರಿಸಿ ಹಸಿ ವಾಸನೆ ಹೋಗುವಂತೆ ಚೆನ್ನಾಗಿ ಬಾಡಿಸಿ. ಆರಿದ ಮೇಲೆ ಹಿಸುಕಿಟ್ಟ ಬದನೆ ಮತ್ತು ಬಾಣಲೆಯಲ್ಲಿರುವ ವಸ್ತುಗಳನ್ನು ಒಟ್ಟು ಸೇರಿಸಿ ಮಿಕ್ಸಿಯಲ್ಲಿ ಒಂದೆರಡು ಬಾರಿ whip ಮಾಡಿಕೊಳ್ಳಿ. ಎಲ್ಲವನ್ನು ಬೌಲಿಗೆ ಸುರಿದು ಮೊಸರು
ಹಾಕಿ ಚೆನ್ನಾಗಿ ಮಿಶ್ರ ಮಾಡಿ.ಮೇಲಿನಿಂದ ಕೊತ್ತಂಬರಿ ಸೊಪ್ಪಿನ ಚೂರುಗಳನ್ನು ಉದುರಿಸಿ ಫ್ರಿಜ್ಜಲ್ಲಿಟ್ಟು ಒಂದೆರಡು ಘಂಟೆಗಳ ಬಳಿಕ ಸರ್ವ್ ಮಾಡಿ. ಅನ್ನ, ಚಪಾತಿ, ಪೂರಿಗಳಿಗೆ ಸೊಗಸಾದ ಜೋಡಿ.
(ಬದನೆಯನ್ನು ಸುಟ್ಟರೆ ಈ ಪದಾರ್ಥದ ಪರಿಮಳ ವಿಶೇಷವಾಗಿರುತ್ತದೆ.ಹೀಗೆ ಮಾಡುವುದಿದ್ದರೆ
ಹಿಸುಕಿದ ನಂತರ ಉಪ್ಪು, ಹುಳಿ, ಬೆಲ್ಲಗಳನ್ನು ಸೇರಿಸಿಕೊಳ್ಳಬಹುದು)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ