ಮಂಗಳವಾರ, ಸೆಪ್ಟೆಂಬರ್ 22, 2015

ಕರ್ಮಣಿ

ತಿಳಿ ಸಾರೂ ಅಲ್ಲದ ತಂಬುಳಿ ಎಂದು ಹೇಳಲೂ ಸಾಧ್ಯವಿಲ್ಲದ ಈ ಪದಾರ್ಥದ ರುಚಿ ಬಲ್ಲವರೇ ಬಲ್ಲರು. ಮಾಡಿ ನೋಡಿ.

ಸಾಮಾಗ್ರಿಗಳು :- ಉಪ್ಪು ನೀರಲ್ಲಿ ಹಾಕಿ ದಾಸ್ತಾನಿಗಿಟ್ಟ-
                       - ಮಾವಿನ ಕಾಯಿ ಹೋಳು-ಮದ್ಯಮ ಗಾತ್ರದ್ದು ಒಂದು
                        ತೆಂಗಿನ ತುರಿ - ನಾಲ್ಕು ಚಮಚ
                        ಒಣ ಮೆಣಸು - ನಾಲ್ಕು
                        ಕಾಳುಮೆಣಸು - ನಾಲ್ಕು ಕಾಳು
                        ಕೊತ್ತಂಬರಿ - ಎರಡು ಚಮಚ
                        ಇಂಗು - ಚಿಟಿಕೆ
                        ಮಜ್ಜಿಗೆ - ಒಂದು ಸೌಟು
ಒಗ್ಗರಣೆಗೆ :-      ಎಣ್ಣೆ, ಸಾಸಿವೆ, ಒಣಮೆಣಸು, ಕರಿಬೇವಿನ ಸೊಪ್ಪು.
ವಿಧಾನ :-  ಮಾವಿನ ಕಾಯಿ ಹೋಳನ್ನು ಚೆನ್ನಾಗಿ ತೊಳೆಯಿರಿ. ಉಪ್ಪಿನಂಶ ಜಾಸ್ತಿ ಇದ್ದರೆ ಒಂದೆರಡು ಘಂಟೆಗಳ ಕಾಲ ಸ್ವಚ್ಛ ನೀರಲ್ಲಿ ಮುಳುಗಿಸಿಟ್ಟು ನಂತರ ಉಪಯೋಗಿಸಿ. ಮೇಲೆ ಹೇಳಿದ ಮಸಾಲೆ ಸಾಮಾಗ್ರಿಗಳನ್ನು ಹುರಿದುಕೊಂಡು ತೆಂಗಿನ ತುರಿ ಮತ್ತು ಮಾವಿನ ಕಾಯಿಯೊಂದಿಗೆ ನುಣ್ಣಗೆ ಅರೆಯಿರಿ. ಮಜ್ಜಿಗೆ ಸೇರಿಸಿ ಬೆಲ್ಲ ಹಾಕಿ. ಉಪ್ಪಿನ ರುಚಿ ನೋಡಿ ಬೇಕಿದ್ದರೆ ಸೇರಿಸಿ ಕುದಿಸಿ ಬೆಂಕಿಯಿಂದ ಇಳಿಸಿ ಒಗ್ಗರಣೆ ಕೊಡಿ.
     
 ಉಪ್ಪಿನಲ್ಲಿ ಹಾಕಿಟ್ಟ ಮಾವು ಇಲ್ಲದಿದ್ದರೆ ಹಸಿ ಮಾವು , ಬಾಳೆಕಾಯಿ, ಮಂಗಳೂರು ಸೌತೆ ಹೋಳುಗಳನ್ನೂ ಉಪಯೋಗಿಸಬಹುದು. ಮಾರ್ಕೆಟ್ಟಲ್ಲಿ ಮಾವಿನಕಾಯಿ ಸಿಗುವಾಗ ಉಪ್ಪಲ್ಲಿ ಹಾಕಿಟ್ಟುಕೊಂಡರೆ ವರ್ಷವಿಡೀ ಉಪಯೋಗಿಸಬಹುದು. ಉಪ್ಪು ನೀರಲ್ಲಿ ದಾಸ್ತಾನಿಡುವ ವಿಧಾನವನ್ನು ಮುಂದೆ ತಿಳಿಸುತ್ತೇನೆ.                       
                        

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ