ಮಾವಿನ ಕಾಯಿ ಯಾ ಹಣ್ಣುಗಳನ್ನು ಉಪ್ಪು ನೀರಿನಲ್ಲಿ ಹಾಕಿ ದಾಸ್ತಾನು ಮಾಡಿಟ್ಟುಕೊಂಡರೆ ವರ್ಷದ ಎಲ್ಲಾ ಋತುಗಳಲ್ಲೂ ಮಾವಿನ ಪದಾರ್ಥಗಳನ್ನು ಸವಿಯಬಹುದು. ಈಗ ನಾವು ದಾಸ್ತಾನಿಗಿಡಬೇಕಾದ ಉಪ್ಪು ನೀರು ಮಾಡುವ ವಿಧಾನವನ್ನು ನೋಡೋಣ.
ಮಾವಿನಕಾಯಿ -2
ಉಪ್ಪು - 1 ಮುಷ್ಠಿ
ನೀರು - 2-3 ಕಪ್
ವಿಧಾನ :- ಮಾವಿನ ಕಾಯಿಗಳನ್ನು ಶುಚಿಗೊಳಿಸಿ ಚೆನ್ನಾಗಿ ಉಜ್ಜಿ ತೇವಾಂಶವನ್ನು ಹೋಗಲಾಡಿಸಿ ಇಟ್ಟುಕೊಳ್ಳಿ. ಪಾತ್ರೆಯೊಂದರಲ್ಲಿ ನೀರು ಹಾಕಿ ಉಪ್ಪನ್ನು ಕರಗಿಸಿ ಸೋಸಿ ಕುದಿಯಲಿಡಿ. ಬೆಂಕಿ ಮಧ್ಯಮವಾಗಿರಲಿ. ಕರಗಿದ ಉಪ್ಪು ಪುನಃ ಗಟ್ಟಿಯಾಗಿ ನೀರಿನ ಮೇಲ್ಭಾಗದಲ್ಲಿ ಕನ್ನಡಿಯಂತೆ ನಿಂತಾಗ ಬೆಂಕಿಯಿಂದ ಇಳಿಸಿ. ಇದು ಆರಿದ ಮೇಲೆ ಮಾವಿನ ಕಾಯಿ/ಹಣ್ಣುಗಳನ್ನು ಹಾಕಿ. ಚೆನ್ನಾಗಿ ಒಣಗಿರುವ ಗಾಜಿನ ಜಾಡಿಯಲ್ಲಿ ಇದನ್ನು ಹಾಕಿ ಮೇಲಿನಿಂದ ಸ್ವಚ್ಛ ಬಟ್ಟೆಯೊಂದನ್ನು ಮುಚ್ಚಿ ಗಾಳಿಯಾಡದಂತೆ ಬಿಗಿಯಾಗಿ ಮುಚ್ಚಿಡಿ. ಒಂದು ತಿಂಗಳು ಕಳೆದು ಈ ಮಾವಿನಕಾಯಿಯನ್ನು ಉಪಯೋಗಿಸಬಹುದು.
ಮಾವಿನಕಾಯಿ ಉಪ್ಪು ನೀರಿನಲ್ಲಿ ಮುಳುಗಿಯೇ ಇರಲು ಬಟ್ಟೆಯ ಮೇಲಿನಿಂದ ಗುಂಡು ಕಲ್ಲೊಂದನ್ನು ಇಟ್ಟರೂ ಆಗುತ್ತೆ. ಉಪ್ಪು ನೀರಿನಲ್ಲಿ ಕೊಳೆ ಇತ್ಯಾದಿಗಳು ಇದ್ದರೆ ಅವು ಕ್ರಮೇಣ ಈ ಬಟ್ಟೆಯ ಮೇಲೆ ಮುದ್ದೆ ಕಟ್ಟಿ ನಿಂತಿರುತ್ತೆ.
ಉಪಯೋಗಿಸುವ ಮೊದಲು ಅದನ್ನು ಬಿಸಾಡಿಬಿಡಿ.
ಉಪ್ಪು ನೀರು ಕುದಿದು ಕನ್ನಡಿ ಕಟ್ಟಿದ ಪಾಕ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ