ತಂಬ್ಳಿ :- ಸಾಮಾಗ್ರಿಗಳು -- 1.ಮಧ್ಯಮ ಗಾತ್ರದ ಮಾವಿನ ಹೋಳು - 1-22. ತೆಂಗಿನ ತುರಿ- 1/2 ಕಪ್
3. ಜೀರಿಗೆ- 4 ಕಾಳು
4. ಹಸಿರು ಮೆಣಸಿನ ಕಾಯಿ - 1
5. ಮಜ್ಜಿಗೆ-1 ಕಪ್
ಒಗ್ಗರಣೆಗೆ - ತುಪ್ಪ, ಕೆಂಪು ಮೆಣಸು, ಸಾಸಿವೆ, (ಬೇಕಿದ್ದರೆ ಬೆಳ್ಳುಳ್ಳಿ), ಕರಿಬೇವಿನ ಸೊಪ್ಪು.
ವಿಧಾನ :- ಮಜ್ಜಿಗೆ ಹೊರತುಪಡಿಸಿ ಮೇಲೆ ಹೇಳಿದ ಎಲ್ಲ ಸಾಮಾಗ್ರಿಗಳನ್ನು ಒಟ್ಟು ಸೇರಿಸಿ ನುಣ್ಣಗೆ ಅರೆಯಿರಿ. ಪಾತ್ರೆಗೆ ಹಾಕಿ ಮಜ್ಜಿಗೆ ಸೇರಿಸಿ. ಉಪ್ಪು ಬೆಲ್ಲ ಬೇಕಿದ್ದರೆ ಸೇರಿಸಿಕೊಳ್ಳಬಹುದು.ಒಗ್ಗರಣೆ ಕೊಡಿ. ಈ ಪದಾರ್ಥ ಸಾರಿನಂತೆ ನೀರಾಗಿರಲಿ, ಕುದಿಸುವ ಅಗತ್ಯವಿಲ್ಲ.
ಚಟ್ನಿ:- ಸಾಮಗ್ರಿಗಳು-- 1. ನೀರುಮಾವಿನ ಹೋಳು- 1-2( ಹುಳಿ ರುಚಿಗೆ ತಕ್ಕಂತೆಪ್ರಮಾಣವನ್ನು ಹೆಚ್ಚು ಕಡಿಮೆಮಾಡಿಕೊಳ್ಳಿ)
2. ತೆಂಗಿನ ತುರಿ - 1 ಕಪ್
3. ಕೆಂಪು ಮೆಣಸು-2
4. ಉದ್ದಿನ ಬೇಳೆ- 1/4 ಚಮಚ
5. ಕರಿಬೇವಿನ ಸೊಪ್ಪು- 4
6. ಇಂಗು -ಚಿಟಿಕೆ
ವಿಧಾನ:- ಮೆಣಸು, ಉದ್ದಿನ ಬೇಳೆ,ಇಂಗು,ಕರಿಬೇವಿನ ಸೊಪ್ಪುಗಳನ್ನು ಘಮ್ಮನೆ ಹುರಿದುಕೊಳ್ಳಿ. ಇವುಗಳನ್ನು ಮಾವಿನ ಹೋಳು, ತೆಂಗಿನ ತುರಿಯೊಂದಿಗೆ ಮಿಕ್ಸಿ ಮಾಡಿ.(ಉಪ್ಪು ಬೇಕಿದ್ದರೆ ಸೇರಿಸಿ). ಬಾಣಲೆಯನ್ನು ಬಿಸಿಮಾಡಿ ಒಗ್ಗರಣೆ ಮಾಡಿ. ಅರೆದಿಟ್ಟ ಚಟ್ನಿಯನ್ನು ಸೇರಿಸಿ ಕೈಯ್ಯಾಡಿಸುತ್ತಾ ಇರಿ. ನೀರಿನಂಶ ಆರಿಹೋಗಿ ಚಟ್ನಿ ಗಟ್ಟಿಯಾದಾಗ ಇಳಿಸಿ. ಇದು ಒಂದೆರಡು ದಿನಗಳಿಗೆ ಹಾಳಾಗುವುದಿಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ