ಶುಕ್ರವಾರ, ಅಕ್ಟೋಬರ್ 9, 2015

ನೀರು ಮಾವು ಅಡುಗೆಗಳು

 1.ಪಲ್ಯ 
ಸಾಮಾಗ್ರಿ ಗಳು :-ನೀರು ಮಾವು -1-2
                         ಕಾಯಿತುರಿ -1/4 ಕಪ್
                        ಕೊತ್ತಂಬರಿ - 2 ಚಮಚ
                        ಇಂಗು - ಚಿಟಿಕೆ
                        ಕೆಂಪು ಮೆಣಸು - 2( ಅಥವಾ ರುಚಿಗೆ ತಕ್ಕಷ್ಟು)
                        ಬೆಲ್ಲ - ಮಾವಿನ ಹುಳಿಯನ್ನು ಹೊಂದಿಕೊಂಡು ವ್ಯತ್ಯಾಸವಾಗುತ್ತೆ
                        ಒಗ್ಗರಣೆಗೆ -ಎಣ್ಣೆ, ಕೆಂಪು ಮೆಣಸು, ಉದ್ದಿನಬೇಳೆ, ಸಾಸಿವೆ, ಜೀರಿಗೆ, ಕರಿಬೇವಿನ ಸೊಪ್ಪು.

ವಿಧಾನ :- ತೆಂಗಿನ ತುರಿಗೆ ಕೆಂಪು ಮೆಣಸು,ಕೊತ್ತಂಬರಿ, ಇಂಗುಗಳನ್ನು ಹುರಿದು ಹಾಕಿ ಮಿಕ್ಸಿಯಲ್ಲಿ ಕ್ರಷ್ ಮಾಡಿಟ್ಟುಕೊಳ್ಳಿ.  ನೀರು ಮಾವಿನಲ್ಲಿ ಉಪ್ಪು ಅತಿಯಾಗಿ ಇದ್ದರೆ ಏಳೆಂಟು ಘಂಟೆಗಳ ಕಾಲ ಅವುಗಳನ್ನು ಸಾದಾ ನೀರಲ್ಲಿ ಮುಳುಗಿಸಿಡಿ. ನಂತರ  ತೆಗೆದು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಬಾಣಲೆಯನ್ನು ಬೆಂಕಿಯ ಮೇಲಿಟ್ಟು ಒಗ್ಗರಣೆ ಮಾಡಿ ಹೆಚ್ಚಿದ ಹೋಳನ್ನು ಹಾಕಿ ಬೆಲ್ಲ ,ಅರಶಿನ ಪುಡಿ ಹಾಕಿ. ಉಪ್ಪು ಬೇಕಿದ್ದರೆ ಸೇರಿಸಿಕೊಳ್ಳಿ. ಬೇಯಲು ಬೇಕಾದಷ್ಟು ನೀರು ಹಾಕಿ ಮುಚ್ಚಿ ಬೇಯಿಸಿ. ಬೆಂದ ಮೇಲೆ ಅರೆದಿಟ್ಟ ಮಸಾಲೆ ಹಾಕಿ ಚೆನ್ನಾಗಿ ಕೈಯ್ಯಾಡಿಸಿ.ನೀರು ಪೂರ್ತಿಯಗಿ ಇಂಗಿದ ಮೇಲೆ ಇಳಿಸಿ. ಪಲ್ಯ ರೆಡಿ. ಈ ಪಲ್ಯ  ಸಿಹಿ ಖಾರವಾಗಿದ್ದರೆ ರುಚಿ. ಅರೆ ಹಣ್ಣಾದ ಗಿಣಿ ಮೂತಿ ಮಾವ(ತೋತಾಪುರಿ)ನ್ನು ದಾಸ್ತಾನಿಟ್ಟುಕೊಂಡರೆ ಈ ವಿಧಾನಕ್ಕೆಚೆನ್ನಾಗಿರುತ್ತೆ.
           

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ