ಮಧೂರು ದೇವಾಲಯದಲ್ಲಿ ಸಹಸ್ರಪ್ಪ ಸೇವೆ ಮಾಡಿಸಿದ್ದೆವು. ಇಷ್ಟ,ಮಿತ್ರ, ಬಂಧು,ಬಳಗಕ್ಕೆಲ್ಲ ಹಂಚಿದ್ರೂ ಇನ್ನೂ ಉಳಿದಿತ್ತು ನಮ್ಮ ಬೊಡ್ಡಜ್ಜನ ಪ್ರಸಾದ. ದೇಶದ ಜನರನ್ನು ಹೇಗೆ ಸುಪ್ರೀತಗೊಳಿಸಲಿ ಎಂಬ ಮೋದಿಯಜ್ಜನ ಸಮಸ್ಯೆಗಿಂತಲೂ ನಾಳೆಗೇನು ತಿಂಡಿ ಮಾಡಲಿ ಎನ್ನುವುದೇ ದೊಡ್ಡ ಸಮಸ್ಯೆಯಾಗಿ ನನ್ನನ್ನು ಕಾಡುವುದಿದೆ. ಆ ಹೊತ್ತಿನಲ್ಲಿ ಮಧೂರು ಅಪ್ಪ ಆಪದ್ಭಾಂಧವನಂತೆ ಕಂಡಿತು. ಅದನ್ನೇ ದೋಸೆ ಮಾಡಿದರೆ ಹೇಗೆ ಎಂಬ ಆಲೋಚನೆ ಬಂದದ್ದೇ ತಡ ಕಾರ್ಯಗತಗೊಳಿಸಲು ಸನ್ನದ್ಧಳಾದೆ. ಮಾಡಿ ತಿಂದು ಖುಷಿಯಾಗಿ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.
ಸಾಮಾಗ್ರಿಗಳು: ಬೆಳ್ತಿಗೆ ಅಕ್ಕಿ 2 ಕಪ್
ಬಾಳೆಹಣ್ಣು 3
ಮಧೂರು ಅಪ್ಪ 6-7
ತೆಂಗಿನ ತುರಿ -1/4 ಕಪ್
ಉಪ್ಪು - ರುಚಿಗೆ ತಕ್ಕಷ್ಟು
ವಿಧಾನ : ಅಕ್ಕಿಯನ್ನು ಅರ್ಧಘಂಟೆ ನೆನೆಸಿ. ಈಗೀಗ ಮಧೂರು ಪ್ರಸಾದವೂ ಗಟ್ಟಿಯಾಗಿರುತ್ತದೆ. ಆದುದರಿಂದ ಅದನ್ನೂ ನೀರಲ್ಲಿ ಒಂದಷ್ಟು ಹೊತ್ತು ನೆನೆಸಿಡಿ(ಮಿಕ್ಸಿಯ ಬ್ಲೇಡಿನ ಬಾಳಿಕೆಯ ದೃಷ್ಟಿಯಿಂದ ಹೇಳಿದ್ದು). ಎಲ್ಲಾ ಸಾಮಗ್ರಿಗಳನ್ನು ಜೊತೆಯಲ್ಲಿ ಮಿಕ್ಸಿ ಮಾಡಿ. ನುಣ್ಣಗಿನ ಹಿಟ್ಟನ್ನು ಪಾತ್ರೆಗೆ ಬಗ್ಗಿಸಿಕೊಳ್ಳಿ. ಉದ್ದಿನ ದೋಸೆಯ ಹಿಟ್ಟಿನ ಹದಕ್ಕೆ ತನ್ನಿ. ಕಬ್ಬಿಣದ ಕಾವಲಿ(non stick ತವ ಅಲ್ಲ) ಯನ್ನು ಬಿಸಿ ಮಾಡಿ ಎಣ್ಣೆ ಪಸೆ ಮಾಡಿಕೊಂಡು ಒಂದು ಸೌಟು ಹಿಟ್ಟು ಎರೆದು ತೆಳ್ಳಗೆ ಹರಡಿ. ಚೆನ್ನಾಗಿ ಬೆಂದ ಮೇಲೆ ತುಪ್ಪ ಹಾಕಿ ಕವುಚಿ ಹಾಕಿ ತೆಗೆಯಿರಿ. ಚಟ್ನಿಯೊಡನೆ serve ಮಾಡಿ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ