ಸಾಮಾಗ್ರಿಗಳು: 1. ಪಾಲಕ್ ಸೊಪ್ಪು ಎರಡು ಕಟ್ಟು
2. ಬೆಳ್ತಿಗೆ ಒಂದೂವರೆ ಕಪ್, ಕುಚ್ಚಿಲು ಒಂದೂವರೆ ಕಪ್
3. ಒಣ ಮೆಣಸು ನಾಲ್ಕು
4. ಕೊತ್ತಂಬರಿ ಬೀಜ ನಾಲ್ಕು ಚಮಚ
5. ಜೀರಿಗೆ ಎರಡು ಚಮಚ
6. ಮೆಂತೆ ಕಾಲು ಚಮಚ
7. ಅರಸಿನ ಎರಡು ಚಿಟಿಕೆ
8. ತೆಂಗಿನ ತುರಿ ಅರ್ಧ ಕಪ್9. ಬೆಲ್ಲ ಎರಡು ಚಮಚ
10. ಹುಳಿ, ಉಪ್ಪು ರುಚಿಗೆ ತಕ್ಕಷ್ಟು
ವಿಧಾನ: ನೆನೆಸಿದ ಅಕ್ಕಿಯನ್ನು ತೊಳೆದು ಮೆಣಸು, ಜೀರಿಗೆ (ಹುರಿಯದೆ), ಮೆಂತೆ (ಖಮ್ಮನೆ ಹುರಿದುಕೊಳ್ಳಿ), ತೆಂಗಿನ ತುರಿ, ಅರಸಿನ, ಉಪ್ಪು, ಹುಳಿ ಇವಿಷ್ಟನ್ನು ಹಾಕಿ ತರಿ ತರಿಯಾಗಿ ರುಬ್ಬಿ ಅಗಲ ಬಾಯಿಯ ಪಾತ್ರೆಯಲ್ಲಿ ತೆಗೆದಿಡಿ. ಪಾಲಕ್ ಸೊಪ್ಪನ್ನು ಶುಚಿಗೊಳಿಸಿ ಚಿಕ್ಕದಾಗಿ ಹೆಚ್ಚಿಕೊಳ್ಳಿ. ಅರೆದಿಟ್ಟ ಹಿಟ್ಟಿಗೆ ಮಿಶ್ರ ಮಾಡಿ. ಈ ಮಿಶ್ರಣದ ಸಾಂದ್ರತೆ (ಕನ್ಸಿಸ್ಟೆನ್ಸಿ) ಮಧ್ಯಮ ಹದದಲ್ಲಿರಲಿ. ಹಬೆಯಲ್ಲಿಟ್ಟು ಒಂದು ಘಂಟೆ ಕಾಲ ಬೇಯಿಸಿ. ಬಿಸಿಯಾರಿದ ನಂತರ ತುಂಡು ಮಾಡಿ ನಿಮ್ಮ ಇಷ್ಟದ ಪದಾರ್ಥದ ಜೊತೆ ತಿನ್ನಬಹುದು. ಅಥವಾ ಕಾವಲಿಯನ್ನು ಬಿಸಿಗಿಟ್ಟು ಅದರ ಮೇಲೆ ಪತ್ರೊಡೆ ತುಂಡುಗಳನ್ನಿಡಿ. ಎರಡೂ ಬದಿಗೆ ತೆಂಗಿನೆಣ್ಣೆ ಹಾಕಿ ಚೆನ್ನಾಗಿ ಸುಟ್ಟು ತಿನ್ನಬಹುದು.
ಇದನ್ನೇ ಚೆನ್ನಾಗಿ ಹುಡಿ ಮಾಡಿಕೊಂಡು ತೆಂಗಿನ ತುರಿ ಮತ್ತು ಬೆಲ್ಲದ ಮಿಶ್ರಣ ಜೊತೆ ಸೇರಿಸಿಟ್ಟುಕೊಳ್ಳಿ. ಬಾಣಲೆ ಬಿಸಿಗಿಡಿ. ನಾಲ್ಕು ಚಮಚ ತೆಂಗಿನೆಣ್ಣೆ ಹುಯ್ದು ಕೆಂಪು ಮೆಣಸು ಚಿವುಟಿ ಹಾಕಿ. ನಾಕು ಚಮಚ ಉದ್ದಿನ ಬೇಳೆ ಹಾಕಿ ಕೆಂಪಗಾಗುವಾಗ ಸಾಸಿವೆ ಹಾಕಿ. ಚಟಪಟಿಸುವಾಗ ಬೇವಿನ ಸೊಪ್ಪು ಉದುರಿಸಿ. ಈಗ ಮೊದಲೇ ಮಾಡಿಟ್ಟ ಪತ್ರೊಡೆ ಮಿಶ್ರಣವನ್ನು ಹಾಕಿ ಚೆನ್ನಾಗಿ ಕೈಯ್ಯಾಡಿಸಿ ಬೆಂಕಿಯಿಂದ ಕೆಳಗಿಳಿಸಿ. ಬಡಿಸುವಾಗ ಮೇಲಿನಿಂದ ತುಪ್ಪ ಹಾಕಿ ಕೊಡಿ. ಸಿಹಿ ಪ್ರಿಯರು ಇದನ್ನು ತುಂಬಾ ಇಷ್ಟಪಡುತ್ತಾರೆ. 
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ