ಓಣಂ ಹಬ್ಬಕ್ಕೆ ಏನು ಸ್ಪೆಷಲ್ ಮಾಡೋಣ ಎಂದು ಆಲೋಚಿಸುತ್ತಿರುವಂತೆಯೇ ಕೈಗಳು ಕೆಲಸ ಮಾಡುತ್ತಲೇ ಇತ್ತು. ಕೊನೆಗೆ ಅದು ಈ ರೂಪ ಪಡೆಯಿತು. ಮಾಡಿ ತಿಂದು ನೋಡಿ.
ಸಾಮಾಗ್ರಿಗಳು : ನೀರುದೋಸೆ ಹಿಟ್ಟು ಒಂದೂವರೆ ಕಪ್, ಗೋದಿಹಿಟ್ಟು ಸಾಧಾರಣ ಅದೇ ಪ್ರಮಾಣ. ತೆಂಗಿನತುರಿ ಅರ್ಧ ಕಪ್, ಬೆಲ್ಲ,ಉಪ್ಪು ರುಚಿಗೆ ತಕ್ಕಷ್ಟು, ಲವಂಗ, ಏಲಕ್ಕಿ, ಕರಿಮೆಣಸು ಪುಡಿ ಪರಿಮಳಕ್ಕೆ ತಕ್ಕಂತೆ. ಒಣಕೊಬ್ಬರಿ ಚೂರುಗಳು ನಾಲ್ಕು ಚಮಚ.
ವಿಧಾನ: ನೀರು ದೋಸೆ ಹಿಟ್ಟಿನ ಮೇಲೆ ನಿಂತಿರುವ ನೀರನ್ನು ಬಸಿಯಿರಿ. ಗಟ್ಟಿ ಹಿಟ್ಟಿಗೆ ನುಣ್ಣಗೆ ರುಬ್ಬಿದ ತೆಂಗು ಬೆಲ್ಲದ ಮಿಶ್ರಣವನ್ನು ಸೇರಿಸಿ. ಲವಂಗ, ಏಲಕ್ಕಿ, ಕರಿಮೆಣಸುಗಳನ್ನು ಸ್ವಲ್ಪ ಬಿಸಿ ಮಾಡಿ ಪುಡಿಮಾಡಿ ಇದಕ್ಕೆ ಸೇರಿಸಿ. ಕೊಬ್ಬರಿ ಚೂರುಗಳನ್ನು ಸ್ವಲ್ಪ ತುಪ್ಪ ಹಾಕಿ ಕಂದು ಬಣ್ಣಕ್ಕೆ ಫ್ರೈ ಮಾಡಿ ಈ ಮಿಶ್ರಣಕ್ಕೆ ಸೇರಿಸಿ. ಬಸಿದಿಟ್ಟ ನೀರಿನಿಂದ ಬೇಕಷ್ಟನ್ನು ಹಾಕಿ ಎಲ್ಲವೂ ಚೆನ್ನಾಗಿ ಹೊಂದಿಕೊಳ್ಳುವಂತೆ ಸೌಟಲ್ಲಿ mix ಮಾಡಿ. ಈ ಹಿಟ್ಟು ಉದ್ದಿನ ದೋಸೆಯ ಹಿಟ್ಟಿನ ಹದಕ್ಕಿರಲಿ. nonstick ಗುಳಿಯಪ್ಪದ ತವವನ್ನು ಬಿಸಿಗಿಡಿ. ತುಪ್ಪವನ್ನು ಪಸೆ ಮಾಡಿಕೊಂಡು ಒಂದೊಂದು ಸೌಟಿನಷ್ಟು ಹಿಟ್ಟು ಹಾಕಿ ಬೇಯಿಸಿ. ಸೂಜಿ ಮೊನೆಯ ಅಪ್ಪದ ಕೋಲಿನಲ್ಲಿ ಚುಚ್ಚಿ ತೆಗೆದು ಕವುಚಿ ಹಾಕಿ ಬೇಯಿಸಿ. ಮೃದು ಮಧುರ ಗುಳಿಯಪ್ಪ ರೆಡಿ.
ಮೇಲೆ ಹೇಳಿದ್ದು ಕರಾರುವಕ್ಕಾದ ಪ್ರಮಾಣ ಅಲ್ಲ. ಕಣ್ಣಮ್ದಾಜು ಮಾತ್ರ .

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ