ಬೇಕಾಗುವ ಸಾಮಗ್ರಿಗಳು : 1.ಮೆಂತೆ ಸೊಪ್ಪು, ಹರಿವೆ ಸೊಪ್ಪು ಹೆಚ್ಚಿದ್ದು 3 ಕಪ್ (ಎರಡೂ ಒಟ್ಟು ಸೇರಿ)
2. ಬೇಬಿ ಆಲೂ ಒಂದು ಕಪ್
3. ಲವಂಗ, ಚೆಕ್ಕೆ, ಕೊತ್ತಂಬರಿಗಳನ್ನು ಹುರಿದು ಪುಡಿ ಮಾಡಿದ್ದು ಒಂದು ಟೀ ಸ್ಫೂನ್
4. ನೀರುಳ್ಳಿ, ಬೆಳ್ಳುಳ್ಳಿ ಚೂರುಗಳು ಅರ್ಧ ಕಪ್
5. ಮೊಳಕೆ ಬರಿಸಿದ ಹೆಸರುಕಾಳು ಒಂದು ಕಪ್
6. ಉಪ್ಪು, ಮೆಣಸಿನ ಪುಡಿ, ಬೆಲ್ಲ ರುಚಿಗೆ ತಕ್ಕಷ್ಟು
ವಿಧಾನ: ದಂಟಿನಿಂದ ಬೇರ್ಪಡಿಸಿದ ಸೊಪ್ಪುಗಳನ್ನು ಶುಚಿಗೊಳಿಸಿ ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ. ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಸಿಪ್ಪೆ ಸಹಿತ ಎರಡು ತುಂಡು ಮಾಡಿಟ್ಟುಕೊಳ್ಳಿ. ಮೊಳಕೆ ಕಾಳು ಮತ್ತು ಇದನ್ನು ಉಪ್ಪು ಹಾಕಿ ಹದವಾಗಿ ಬೇಯಿಸಿಟ್ಟುಕೊಳ್ಳಿ. ಮೆಂತೆ ಸೊಪ್ಪನ್ನು ಬಾಣಲೆಯಲ್ಲಿ ಹಾಕಿ ಸ್ವಲ್ಪ ತುಪ್ಪ ಹಾಕಿ ಕಹಿ ಹೋಗುವಷ್ಟು ಕೆದಕಿ. ಈಗ ಹರಿವೆಸೊಪ್ಪು ಹಾಕಿ. ಅದರಲ್ಲಿರುವ ನೀರಿನ ತೇವಾಂಶವೇ ಬೇಯಲು ಸಾಕಾಗುತ್ತದೆ. ಬೆಲ್ಲ(ಬೇಕಿದ್ದರೆ), ಮೆಣಸಿನ ಪುಡಿಯ ಜೊತೆಗೆ ಬೇಯಿಸಿಟ್ಟ ಕಾಳು ಮತ್ತು ಆಲೂಗಡ್ಡೆಯನ್ನೂ ಮಿಶ್ರ ಮಾಡಿ ಉಪ್ಪು ನೋಡಿಕೊಳ್ಳಿ. ಎಲ್ಲವೂ ಉದುರುದುರಾಗಿ ಇರುವಂತೆ ನೀರಿನ ತೇವಾಂಶ ಆರಿದಾಗ ಬೆಂಕಿಯಿಂದ ಕೆಳಕ್ಕಿಳಿಸಿ. ಈಗ ಒಗ್ಗರಣೆಯ ಸೌಟಿಗೆ ಎರಡು ಚಮಚ ತುಪ್ಪ ಹಾಕಿಕೊಳ್ಳಿ. ಬಿಸಿಯಾದಾಗ ಸಾಸಿವೆ, ಜೀರಿಗೆ ಸಿಡಿಸಿ. ನೀರುಳ್ಳಿ, ಬೆಳ್ಳುಳ್ಳಿ ಚೂರುಗಳನ್ನು ಹಾಕಿ ಹಸಿವಾಸನೆ ಹೋಗುವಷ್ಟು ಕೆದಕಿ. ಇದನ್ನು ಪಲ್ಯಕ್ಕೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಅನ್ನ, ಚಪಾತಿ, ಪೂರಿ ಎಲ್ಲದರ ಜೊತೆಗೂ ರುಚಿಯೋ ರುಚಿ.
ವಿ.ಸೂ. ಆಲೂಗಡ್ಡೆ ಪೂರ್ತಿಯಾಗಿ ಬೆಳೆಯುವ ಮೊದಲೇ ಮಣ್ಣಿನಿಂದ ಅಗೆದು ತೆಗೆಯುತ್ತಾರಾದುದರಿಂದ ಅದು ಬೇಬಿ ಆಲೂ. ಇದರ ಹೊರ ಮೈ ಬಣ್ಣ ಮಾಸಲು. ರುಚಿ ಇನ್ನಷ್ಟು ಸಿಹಿ. ಬೆಳೆದ ಆಲೂಗಡ್ಡೆಗಿಂತ ಬೇಗನೆ ಇದು ರುಚಿಯನ್ನು ಹೀರಿಕೊಳ್ಳುಬಲ್ಲುದು .
ವಿ.ಸೂ. ಆಲೂಗಡ್ಡೆ ಪೂರ್ತಿಯಾಗಿ ಬೆಳೆಯುವ ಮೊದಲೇ ಮಣ್ಣಿನಿಂದ ಅಗೆದು ತೆಗೆಯುತ್ತಾರಾದುದರಿಂದ ಅದು ಬೇಬಿ ಆಲೂ. ಇದರ ಹೊರ ಮೈ ಬಣ್ಣ ಮಾಸಲು. ರುಚಿ ಇನ್ನಷ್ಟು ಸಿಹಿ. ಬೆಳೆದ ಆಲೂಗಡ್ಡೆಗಿಂತ ಬೇಗನೆ ಇದು ರುಚಿಯನ್ನು ಹೀರಿಕೊಳ್ಳುಬಲ್ಲುದು .


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ